ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹೆತ್ತವರನ್ನು ಅಗಲಿದ್ದಾತ ಕೊನೆಗೂ ಇಂಟರ್ನೆಟ್‌ನಲ್ಲಿ ಪತ್ತೆ..! (Kerala cyber police | Internet social networking site | Jimmy Koruth | Chennai)
Bookmark and Share Feedback Print
 
ಹನ್ನೆರಡು ವರ್ಷಗಳ ಹಿಂದೆ ಹೆತ್ತವರಿಂದ ದೂರ ಉಳಿದಿದ್ದ 33ರ ಹರೆಯದ ವ್ಯಕ್ತಿಯೋರ್ವನನ್ನು ಪೊಲೀಸರು ಇಂಟರ್ನೆಟ್ ಸಹಕಾರದಿಂದ ಪತ್ತೆ ಹಚ್ಚುವ ಮೂಲಕ ಕುಟುಂಬದಲ್ಲಿ ನೆಮ್ಮದಿ ಮೂಡಿಸಿದ್ದಾರೆ.

ಉದ್ದೇಶಪೂರ್ವಕವಾಗಿ ಮನೆಯವರಿಂದ ದೂರ ಉಳಿದಿದ್ದ ಕೇರಳದ ಜಿಮ್ಮಿ ಕೊರುತ್ ಎಂಬಾತನನ್ನು ಇದೀಗ ಚೆನ್ನೈಯಿಂದ ಕೇರಳ ಸೈಬರ್ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಇಂಟರ್ನೆಟ್ ಸಹಕಾರದೊಂದಿಗೆ ದೇಶದಲ್ಲಿ ಪತ್ತೆ ಮಾಡಲಾದ ಮೊತ್ತ ಮೊದಲ ಪ್ರಕರಣವಿದು ಎಂದು ಪೊಲೀಸರು ಅಚ್ಚರಿಯಿಂದಲೇ ಹೇಳಿಕೊಂಡಿದ್ದಾರೆ.

ಪಾಂಡಲಮ್‌ನ ಮಾರ್ ಇವಾನಿಯೋಸ್ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ಓದುತ್ತಿದ್ದ ಸಂದರ್ಭದಲ್ಲಿ 1998ರ ನವೆಂಬರ್‌ನಲ್ಲಿ ಜಿಮ್ಮಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ. ಈ ಕುರಿತು ಪಾಂಡಲಮ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತಾದರೂ, ತನಿಖೆ ಫಲಪ್ರದವಾಗಿರಲಿಲ್ಲ.

ಇತ್ತೀಚೆಗಷ್ಟೇ ಜಿಮ್ಮಿಯ ಸಂಬಂಧಿಕರು ಆತನ ಭಾವಚಿತ್ರವಿಲ್ಲದ ಪ್ರೊಫೈಲ್ ಸಾಮಾಜಿಕ ಸಂಪರ್ಕ ತಾಣ 'ಆರ್ಕುಟ್'ನಲ್ಲಿರುವುದನ್ನು ಕಂಡು ಪಾಂಡಲಮ್ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಈ ಪ್ರಕರಣವನ್ನು ಸೈಬರ್ ವಿಭಾಗಕ್ಕೆ ಹಸ್ತಾಂತರಿಸಲಾಗಿತ್ತು.

ಜಿಮ್ಮಿಯ ಭಾವಚಿತ್ರ ವೆಬ್‌ಸೈಟಿನಲ್ಲಿರದ ಕಾರಣ ಇತರ ಮಾಹಿತಿಗಳನ್ನು ಕಲೆ ಹಾಕುವುದು ಸೈಬರ್ ಪೊಲೀಸರಿಗೆ ಅನಿವಾರ್ಯವಾಯಿತು. ಈ ಸಂದರ್ಭದಲ್ಲಿ ಅಮೆರಿಕಾದ ಗೂಗಲ್ ಪ್ರಧಾನ ಕಚೇರಿಯನ್ನು ಸಂಪರ್ಕಿಸಿದ ಸೈಬರ್ ಪೊಲೀಸರು, ಜಿಮ್ಮಿ ತನ್ನ ಪ್ರೊಫೈಲನ್ನು 2008ರಲ್ಲಿ ಚೆನ್ನೈಯ ಸೈಬರ್ ಕೆಫೆಯೊಂದರಲ್ಲಿ ತೆರೆದಿದ್ದ ಎಂಬ ಮಾಹಿತಿಯನ್ನು ಪಡೆದರು. ಆದರೆ ಚೆನ್ನೈಯಲ್ಲಿ ಇದನ್ನು ಹುಡುಕಿದಾಗ ಆ ಸೈಬರ್ ಕೆಫೆ ಮುಚ್ಚಿ ಹೋಗಿತ್ತು.

ನಂತರ ಪೊಲೀಸರು ಆತ ಆರ್ಕುಟ್ ಖಾತೆ ತೆರೆಯಲು ಬಳಸಿದ ಇಮೇಲ್ ಇತಿಹಾಸವನ್ನು ಐಡಿಯನ್ನು ಪತ್ತೆ ಹಚ್ಚಿ ಅದನ್ನು ನಿರ್ವಹಿಸುತ್ತಿರುವ ರೀತಿಯನ್ನು ಶೋಧಿಸಲಾರಂಭಿಸಿದರು. ಇಮೇಲ್ ಬಳಕೆಯ ಇತಿಹಾಸ ಹುಡುಕಿದಾಗ ಆತ ಸತತವಾಗಿ ಚೆನ್ನೈನಲ್ಲಿನ ಅಡ್ಯಾರ್‌ನ ಸೈಬರ್ ಕೆಫೆಯೊಂದನ್ನು ಇದಕ್ಕಾಗಿ ಬಳಸುತ್ತಿರುವುದು ಐಪಿ ವಿಳಾಸದ ಮೂಲಕ ತಿಳಿದು ಬಂತು.

ಇದಾದ ಗುಪ್ತ ಕ್ಯಾಮರಾಗಳನ್ನು ಈ ಸೈಬರ್ ಕೆಫೆಯಲ್ಲಿ ಪೊಲೀಸರು ಅಳವಡಿಸಿದ್ದರು. ಅದರಲ್ಲಿ ದಾಖಲಾದ ಚಿತ್ರಗಳನ್ನು ಗಮನಿಸಿದ ಹೆತ್ತವರು, ಜಿಮ್ಮಿಯನ್ನು ಗುರುತಿಸಿದರು. ನಂತರ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡು ಕೇರಳಕ್ಕೆ ಕರೆ ತಂದಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ತಾನು ಗೋವಾ ಹಾಗೂ ಚೆನ್ನೈಗಳ ಹಲವು ಕಂಪನಿಗಳಲ್ಲಿ ಕೆಲಸ ಮಾಡಿಕೊಂಡಿದ್ದೆ. ಹೆತ್ತವರ ಮಡಿಲಿಗೆ ಮತ್ತೆ ಸೇರಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ಜಿಮ್ಮಿ ತಿಳಿಸಿದರೂ, ಪಾಂಡಲಮ್ ತೊರೆದ ಹಿಂದಿನ ಕಾರಣವನ್ನು ಬಹಿರಂಗಪಡಿಸಬೇಡಿ ಎಂದು ಮಾಧ್ಯಮಗಳಿಗೆ ಮನವಿ ಮಾಡಿಕೊಂಡಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ