ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮುಸ್ಲಿಮರಿಗೆ ಮುಲಾಯಂ 'ಹುಲ್ಲಿನಲ್ಲಿರುವ ಹಸಿರು ಹಾವು': ಅಮರ್
(green snake | Amar Singh | Samajwadi Party | Mulayam Singh Yadav)
ಮುಸ್ಲಿಮರಿಗೆ ಮುಲಾಯಂ 'ಹುಲ್ಲಿನಲ್ಲಿರುವ ಹಸಿರು ಹಾವು': ಅಮರ್
ನವದೆಹಲಿ, ಶುಕ್ರವಾರ, 12 ಫೆಬ್ರವರಿ 2010( 10:16 IST )
ಸಮಾಜವಾದಿ ಪಕ್ಷದಿಂದ ದಬ್ಬಿಸಿಕೊಂಡ ನಂತರವೂ ಹೊಗಳುತ್ತಲೇ ಬಂದಿದ್ದ ಅಮರ್ ಸಿಂಗ್ ಮೊತ್ತ ಮೊದಲ ಬಾರಿಗೆ ಪಕ್ಷದ ವರಿಷ್ಠನನ್ನು ದೂರಿದ್ದು, ಮುಲಾಯಂ ಸಿಂಗ್ ಯಾದವ್ ಮುಸ್ಲಿಮರ ಪಾಲಿಗೆ ಹುಲ್ಲಿನಲ್ಲಿರುವ ಹಸಿರು ಹಾವಿನಂತೆ ಎಂದಿದ್ದಾರೆ.
ಕಲ್ಯಾಣ್ ಸಿಂಗ್ ಅವರ ಸಿದ್ಧಾಂತವನ್ನು ನಾನು ಬೆಂಬಲಿಸಲಾರೆ. ಆದರೆ ವೈಯಕ್ತಿಕವಾಗಿ ಹೇಳುವುದಾದರೆ ಮುಲಾಯಂ ಸಿಂಗ್ ಯಾದವ್‌ಗಿಂತ ಕಲ್ಯಾಣ್ ಉತ್ತಮರು. ಕಲ್ಯಾಣ್ ಮತ್ತು ಬಾಳಾ ಠಾಕ್ರೆಯವರು ಬಹಿರಂಗವಾಗಿಯೇ ಮುಸ್ಲಿಮರ ಮೇಲೆ ವಾಗ್ದಾಳಿ ನಡೆಸುವುದರಿಂದ ಕನಿಷ್ಠ ಜನರಾದರೂ ಇಷ್ಟಪಡುತ್ತಾರೆ ಎಂದು ಅಮರ್ ಹೇಳಿದ್ದಾರೆ.
PTI
ತಾವು ಮುಸ್ಲಿಮರೊಂದಿಗೆ ಇದ್ದೇವೆ ಎಂದು ಹೇಳುತ್ತಾ ಬೆನ್ನ ಹಿಂದಿನಿಂದ ಚೂರಿ ಹಾಕುವ ಇಂತಹ ಜಾತ್ಯತೀತ ನಾಯಕರಿಗಿಂತ ಠಾಕ್ರೆ, ಕಲ್ಯಾಣ್‌ರಂತವರು ಕಡಿಮೆ ಅಪಾಯಕಾರಿ ವ್ಯಕ್ತಿಗಳು. ಯಾವ ವಿರೋಧಿಯನ್ನು ನೋಡಲು ಸಾಧ್ಯವೋ ಅಥವಾ ಹುಲ್ಲಿನಲ್ಲಿರುವ ಹಸಿರು ಹಾವಿನಂತಿರುತ್ತಾರೋ ಅವರು ಹೆಚ್ಚು ವಿಶ್ವಾಸಘಾತಕರು. ಇದು ಯಾರೆಂಬುದುನ್ನು ನೀವೇ ನಿರ್ಧರಿಸಿ ಎಂದು ಪತ್ರಕರ್ತರ ಊಹೆಗೆ ಉಳಿದದ್ದನ್ನು ಬಿಟ್ಟುಕೊಟ್ಟರು.
ಭಾರತೀಯ ಮುಸ್ಲಿಂ ರಾಜಕೀಯ ಪರಿಷತ್ ಆಯೋಜಿಸಿದ್ದ 'ದೇಶ ಮತ್ತು ಮುಸ್ಲಿಮರ ಪರಿಸ್ಥಿತಿ' ಎಂಬ ವಿಚಾರಗೋಷ್ಠಿಯಲ್ಲಿ ಸಮಾಜವಾದಿ ಪಕ್ಷದ ಉಚ್ಛಾಟಿತ ಮುಖಂಡ ತನ್ನ ಮಾಜಿ ವರಿಷ್ಠನ ವಿರುದ್ಧ ಹರಿಹಾಯ್ದರು.
ಕಲ್ಯಾಣ್ ಸಿಂಗ್ ಮತ್ತು ನಾನು ಯಾದವರು ಮತ್ತು ಹಿಂದುಳಿದ ಸಮುದಾಯಗಳ ಮತಗಳನ್ನು ಕ್ರೋಢೀಕರಿಸಲು ಒಟ್ಟು ಸೇರಿದ್ದೇವೆ. ಇದರಿಂದಾಗಿ ಮುಸ್ಲಿಮರು ನಮಗೆ ಓಟು ಹಾಕದಿದ್ದರೂ ಯಾದವ-ಒಬಿಸಿ ಮತಗಳು ಅವರ ಮತಗಳನ್ನು ಹಿಂದಿಕ್ಕಬಲ್ಲವು ಎಂದು ಮಲಾಯಂ ಸಿಂಗ್ ಯಾದವ್ ಹೇಳಿದ್ದರು ಎಂದು ವಿವರಿಸಿರುವ ಅಮರ್, ಇದರಿಂದ ಅವರಿಗೆ ನಷ್ಟವಾದದ್ದೇ ಹೆಚ್ಚು; ಮುಸ್ಲಿಮರು ಸಮಾಜವಾದಿ ವಿರುದ್ಧ ತಿರುಗಿ ಬಿದ್ದರೆ, ಹಿಂದುಳಿದ ವರ್ಗಗಳು ತಿರುಗಿಯೂ ನೋಡಲಿಲ್ಲ ಎಂದಿದ್ದಾರೆ.