ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತೆಲಂಗಾಣಕ್ಕೆ ಕೇಂದ್ರದಿಂದ ಮತ್ತೆ ದ್ರೋಹ: ಟಿಆರ್ಎಸ್ ಆಕ್ರೋಶ (Hyderabad | Srikrishna panel | Telangana Rashtra Samiti | K. Chandrasekhara Rao)
Bookmark and Share Feedback Print
 
ತೆಲಂಗಾಣ ಪ್ರತ್ಯೇಕ ರಾಜ್ಯವನ್ನು ಬೆಂಬಲಿಸುವ ನಿರ್ದಿಷ್ಟತೆಯನ್ನು ಹೊಂದಿಲ್ಲದ ಶ್ರೀಕೃಷ್ಣ ಸಮಿತಿಯ ಮೂಲಕ ಕೇಂದ್ರ ಸರಕಾರ ಮತ್ತೊಮ್ಮೆ ತೆಲಂಗಾಣ ಜನತೆಗೆ ದ್ರೋಹ ಎಸಗಿದೆ ಎಂದು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಆರೋಪಿಸಿದ್ದು, ತನ್ನ ಎಲ್ಲಾ ಸಂಸದರು ಹಾಗೂ ಶಾಸಕರು ತಕ್ಷಣವೇ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಹೇಳಿದೆ.

ಅಖಂಡ ಆಂಧ್ರಪ್ರದೇಶ ಮತ್ತು ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯ ಎರಡೂ ನಿಲುವುಗಳನ್ನು ಹೊಂದಿರುವ ಶ್ರೀಕೃಷ್ಣ ಸಮಿತಿಯು ನಿರ್ದಿಷ್ಟ ನಿಬಂಧನೆಗಳನ್ನು ಒಳಗೊಂಡಿದ್ದು, ಅದು ಹೇಗೆ ತೆಲಂಗಾಣ ಜನತೆಗೆ ನ್ಯಾಯ ಒದಗಿಸುತ್ತದೆ ಎಂದು ಟಿಆರ್ಎಸ್ ಮುಖ್ಯಸ್ಥ ಕೆ. ಚಂದ್ರಶೇಖರ ರಾವ್ ಕೇಂದ್ರವನ್ನು ಪ್ರಶ್ನಿಸಿದ್ದಾರೆ.

ಹಾಗಾಗಿ ನಾನು ಮತ್ತು ಮತ್ತೊಂದು ಪಕ್ಷದ ಸಂಸದೆ ವಿಜಯಶಾಂತಿಯವರು ಲೋಕಸಭಾ ಸ್ಪೀಕರ್ ಅವರಿಗೆ ನಮ್ಮ ರಾಜೀನಾಮೆಗಳನ್ನು ಸಲ್ಲಿಸಲಿದ್ದೇವೆ. ಅಲ್ಲದೆ ಶಾಸಕರು ಕೂಡ ತಮ್ಮ ರಾಜೀನಾಮೆಗಳನ್ನು ನೀಡಲಿದ್ದಾರೆ ಎಂದರು.

ಶ್ರೀಕೃಷ್ಣ ಸಮಿತಿಯ ನಿರ್ದಿಷ್ಟ ನಿಬಂಧನೆಗಳು 'ನಿರಾಧಾರಿತ, ಅರ್ಥಹೀನ ಮತ್ತು ನಿರ್ಲಕ್ಷ್ಯ'ಗಳೆಂದು ಬಣ್ಣಿಸಿರುವ ಕೆಸಿಆರ್, ತೆಲಂಗಾಣ ಪ್ರಾಂತ್ಯದ ಎಲ್ಲಾ ಶಾಸಕರು ಮತ್ತು ಸಂಸದರು ಪಕ್ಷಭೇದವಿಲ್ಲದೆ ರಾಜೀನಾಮೆ ನೀಡುವ ಮೂಲಕ ತಾವು ಕುರ್ಚಿಗಿಂತ ತಮ್ಮ ನಿಲುವಿಗೆ ಅಂಟಿಕೊಂಡವರೆಂಬುದನ್ನು ರುಜುವಾತುಪಡಿಸಬೇಕೆಂದು ಕರೆ ನೀಡಿದ್ದಾರೆ.

ಈ ಸಮಿತಿ ಹೊಂದಿರುವ ನಿರ್ದಿಷ್ಟ ನಿಬಂಧನೆಗಳು ಮೌಲ್ಯವನ್ನೇ ಹೊಂದಿಲ್ಲ. ಕೇಂದ್ರ ಸರಕಾರವು ಮತ್ತೊಮ್ಮೆ ತೆಲಂಗಾಣ ಜನತೆಯನ್ನು ವಂಚಿಸಿದೆ. ಇಲ್ಲಿನ ಜನತೆಯ ಮಾನಸಿಕ ವೇದನೆ ಮತ್ತು ನಡೆದಿರುವ ಸರಣಿ ಆತ್ಮಹತ್ಯೆಗಳನ್ನು ಕೇಂದ್ರ ಗಣನೆಗೆ ತೆಗೆದುಕೊಂಡಿಲ್ಲ ಎಂದು ರಾವ್ ಕಿಡಿ ಕಾರಿದರು.

ತೆಲಂಗಾಣ ಸರ್ವಪಕ್ಷಗಳ ಜಂಟಿ ಕ್ರಿಯಾ ಸಮಿತಿಯ ಸಭೆ ಶುಕ್ರವಾರ ಸಂಜೆ ನಡೆಯಲಿದ್ದು, ಮುಂದಿನ ಹೆಜ್ಜೆಯ ಕುರಿತು ಅಲ್ಲಿ ನಿರ್ಧಾರ ತೆಗೆದುಕೊಂಡ ನಂತರ ಪ್ರಕಟಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ