ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಂಧಿತ ಅಮೆರಿಕಾ ಪ್ರಜೆಗೆ ಉಗ್ರರ ಸಂಬಂಧವಿಲ್ಲ: ಭಾರತ ಸ್ಪಷ್ಟನೆ (US national | terror links | New Delhi | Winston Marshall)
Bookmark and Share Feedback Print
 
ಬ್ಯಾಗಿನಲ್ಲಿ ಚೂರಿ ಇಟ್ಟುಕೊಂಡಿದ್ದರಿಂದ ಸಂಶಯಗೊಂಡ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದ ಅಮೆರಿಕಾ ಪ್ರಜೆ ವಿನ್ಸ್‌ಟನ್ ಮಾರ್ಷಲ್‌ಗೆ ಯಾವುದೇ ಭಯೋತ್ಪಾದಕ ಸಂಘಟನೆಗಳ ಜತೆ ಸಂಬಂಧವಿದ್ದಂತಿಲ್ಲ ಎಂದು ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.

ರಾಜಧಾನಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತನಿಖಾಧಿಕಾರಿಗಳು ಸಂಶಯದ ಮೇರೆಗೆ ಮಾರ್ಷಲ್‌ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದರು. ಈತ ಉಗ್ರರೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಲಾಗಿತ್ತು.

ಆತನನ್ನು ವಿಚಾರಣೆ ನಡೆಸಿದಾಗ ಯಾವುದೇ ಭಯೋತ್ಪಾದನಾ ಸಂಬಂಧಗಳು ಆತನಿಗಿದ್ದಂತೆ ಕಂಡು ಬರುತ್ತಿಲ್ಲ. ಆದರೆ ಆತನ ವರ್ತನೆ ಮತ್ತು ಇಟ್ಟುಕೊಂಡಿದ್ದ ಚೂರಿಯ ಬಗ್ಗೆ ಸುಳ್ಳುಗಳನ್ನು ಪುನರಾವರ್ತನೆ ಮಾಡಿದ್ದ ಕಾರಣ ಸಂಶಯ ಸೃಷ್ಟಿಯಾಗಿತ್ತು ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ ಅಮೆರಿಕಾ ಪ್ರಜೆಯನ್ನು ಇನ್ನೂ ಒಂದು ದಿನ ವಿಚಾರಣೆ ನಡೆಸಲಾಗುತ್ತದೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುತ್ತದೆ. ಈಗಲೇ ಯಾವುದೇ ಅಂತಿಮ ನಿರ್ಧಾರಕ್ಕೆ ಬರಲಾಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಕ್ರೈಸ್ತ ಧರ್ಮದಿಂದ 15 ವರ್ಷಗಳ ಹಿಂದೆ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದ ಮಾರ್ಷಲ್‌ ದೋಹಾಕ್ಕೆ ಪ್ರಯಾಣಿಸಲು ಕತಾರ್ ಏರ್‌ವೇಸ್ ವಿಮಾನಕ್ಕೆ ಹತ್ತುವುದರಲ್ಲಿದ್ದಾಗ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿಗಳು ವಶಕ್ಕೆ ತೆಗೆದುಕೊಂಡಿದ್ದರು.

ಆತನ ಬ್ಯಾಗಿನಲ್ಲಿದ್ದ ಆಯುರ್ವೇದ ಔಷದದ ನಡುವೆ ತೂರಿಸಲಾಗಿದ್ದ ಚೂರಿಯ ಬಗ್ಗೆ ಆತ ಸತತ ಸುಳ್ಳುಗಳನ್ನು ಹೇಳುತ್ತಿದ್ದುದರಿಂದ ಸಂಶಯಗಳು ಆತನನ್ನು ಮುತ್ತಿಕೊಂಡಿದ್ದವು. ಅಲ್ಲದೆ ಆತ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಿಗೆ ಇತ್ತೀಚೆಗಷ್ಟೇ ಪ್ರಯಾಣ ಮಾಡಿದ ನಂತರ ಭಾರತಕ್ಕೆ ಬಂದಿದ್ದ ಎಂಬ ವಿಚಾರಗಳು ಕೂಡ ಹೆಚ್ಚು ಆತಂಕಕ್ಕೀಡು ಮಾಡಿದ್ದರಿಂದ ಮಾರ್ಷಲ್‌ನನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ