ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾಂಡೋಮ್ ಬಳಕೆ ಕುಸಿತ, ಹೆಚ್ಚಿದ ಗರ್ಭಪಾತ; ತೀವ್ರ ಆತಂಕ (Condom | Maharashtra | Mumbai | Unsafe sex)
Bookmark and Share Feedback Print
 
ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಕಾಂಡೋಮ್ ಬಳಕೆ ಪ್ರಮಾಣ ತೀವ್ರವಾಗಿ ಕುಸಿತ ಕಂಡಿದೆ. ಜನ ಸುಲಭವಾಗಿ ಗರ್ಭಪಾತ ಮಾಡಿಸಿಕೊಳ್ಳುವ ಮಾತ್ರೆಗಳಂತಹ ವಿಧಾನಗಳತ್ತ ಮೊರೆ ಹೋಗಿದ್ದಾರೆ. ಸಂತಾನ ನಿಯಂತ್ರಣ ಅಥವಾ ಬಸಿರು ತಡೆ ರೂಪುರೇಷೆಯಲ್ಲಿ ಇಂತಹ ಅಮೂಲಾಗ್ರ ಬದಲಾವಣೆ ಕಾಣುತ್ತಿರುವುದು ಮಹಾರಾಷ್ಟ್ರ ಕುಟುಂಬ ಕಲ್ಯಾಣ ಇಲಾಖೆಗೀಗ ತೀವ್ರ ತಲೆನೋವಾಗಿದೆ.

ಬಸಿರಾಗದಂತೆ ತಡೆಯಲು ಕಾಂಡೋಮ್‌ಗಳನ್ನು ಬಳಸುವ ಬದಲು ಸುಲಭವಾಗಿ ಮೆಡಿಕಲ್‌ಗಳಲ್ಲಿ ಸಿಗುತ್ತಿರುವ ಗರ್ಭಪಾತ ಮಾತ್ರೆಗಳಿಗೆ ಮೊರೆ ಹೋಗುತ್ತಿದ್ದಾರೆ ಎಂದು ಇಲಾಖೆ ಅಭಿಪ್ರಾಯಪಟ್ಟಿದ್ದು, ತೀವ್ರ ಆತಂಕ ವ್ಯಕ್ತಪಡಿಸಿದೆ.

ಗರ್ಭಾಶಯದಲ್ಲೇ ಬಸಿರನ್ನು ತಡೆಯುವ ವಿಧಾನಗಳು ಅಥವಾ ಸಂತಾನಹರಣ ಶಸ್ತ್ರಚಿಕಿತ್ಸೆಗಳು ಕಾಂಡೋಮ್ ಕುಸಿತಕ್ಕೆ ಕಾರಣವಾಗಿವೆ. ಹಾಗೆಂದು ಲೈಂಗಿಕ ರೋಗಗಳ ಹರಡುವಿಕೆಯಲ್ಲಿ ಕಡಿಮೆಯಾಗಿಲ್ಲ ಎನ್ನುವುದೇ ಆತಂಕಕಾರಿ ವಿಚಾರ.

ಇಲಾಖೆಯ ಮಾಹಿತಿಗಳ ಪ್ರಕಾರ 2007ರಲ್ಲಿ ಕಾಂಡೋಮ್ ಬಳಕೆಯಲ್ಲಿ ಶೇ.35ರಷ್ಟು ಕುಸಿತವಾಗಿದೆ. 5,56,486ರಲ್ಲಿದ್ದ ಕಾಂಡೋಮ್ ಬಳಕೆ 2008ಕ್ಕಾಗುವಾಗ 4,21,038ಕ್ಕೆ ಕುಸಿದಿದೆ. ಇದು ಕಳೆದ ವರ್ಷದ ಡಿಸೆಂಬರ್ ಹೊತ್ತಿಗೆ 3,65,036ಕ್ಕೆ ಇಳಿಕೆ ಕಂಡಿದೆ.

ಮುಂಬೈಯನ್ನೇ ಲೆಕ್ಕಕ್ಕೆ ತೆಗೆದುಕೊಳ್ಳುವುದಾದರೆ ಬಸಿರು ನಿಯಂತ್ರಣಕ್ಕೆ ಮಾತ್ರೆ ತೆಗೆದುಕೊಳ್ಳುವವರ ಸಂಖ್ಯೆ ಕುಸಿತವಾಗಿದೆ. ಆದರೆ ಸಂತಾನ ಹರಣ ಚಿಕಿತ್ಸೆ ಪುರುಷ ಮತ್ತು ಮಹಿಳೆಯರಿಬ್ಬರಲ್ಲೂ ಭಾರೀ ಪ್ರಮಾಣದಲ್ಲಿ ಹೆಚ್ಚಿದೆ.

ನಗರದಲ್ಲಿ ಕಾಂಡೋಮ್ ಬಳಕೆಯೂ ಹೆಚ್ಚಿದೆ. ಬೃಹನ್ಮುಂಬೈ ಮಹಾನಗರ ಪಾಲಿಕೆ ಅಂಕಿಅಂಶಗಳ ಪ್ರಕಾರ 2009ರಲ್ಲಿ ಸಾರ್ವಕಾಲಿಕ ದಾಖಲೆ ಕಾಂಡೋಮ್ ಬಳಕೆಯಾಗಿದೆ.

ಅಧಿಕೃತ ದಾಖಲೆಗಳ ಪ್ರಕಾರ ಅಬಾರ್ಷನ್ ಮಾಡಿಸಿಕೊಂಡವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿತವಾಗುತ್ತಿದೆ. 2007ರಲ್ಲಿ 76,206, 2008ರಲ್ಲಿ 67,879 ಹಾಗೂ 2009ರಲ್ಲಿ 71,021 ಗರ್ಭಪಾತಗಳು ಮುಂಬೈ ನಗರದಲ್ಲಿ ದಾಖಲಾಗಿವೆ.

2009ರಲ್ಲಿ ಗರ್ಭಪಾತ ಪ್ರಮಾಣ ಹೆಚ್ಚಾಗಲು ಸುಲಭವಾಗಿ ಕೈಗೆಟಕುವ ಗರ್ಭನಿರೋಧಕ ಅಥವಾ ಗರ್ಭಪಾತ ಮಾಡುವ ಮಾತ್ರೆಗಳು ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ