ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಶಾಹೀದ್ ಆಜ್ಮಿ ಹತ್ಯೆ:ಹೊಣೆ ಹೊತ್ತ ಭೂಗತ ತಂಡಗಳು (26/11 lawyer | Chhota Rajan | Ravi Pujari | Santosh Shetty Gang | Shahid Azmi)
ಮುಂಬೈಸ್ಫೋಟ ದಾಳಿಯ ಶಂಕಿತ ಆರೋಪಿಯ ಪರ ವಾದಿಸುತ್ತಿದ್ದ ವಕೀಲ ಶಾಹೀದ್ಆಜ್ಮಿಯವರನ್ನು ಹತ್ಯೆ ಮಾಡಿರುವುದಾಗಿ ಮೂರು ಭೂಗತ ತಂಡಗಳು ಮಾಧ್ಯಮ ಕೇಂದ್ರಗಳಿಗೆ ಮಾಹಿತಿ ನೀಡಿವೆ.
ಮಂಗಳವಾರದಂದು ಸಂಜೆ ಮೂರು ಭೂಗತ ತಂಡಗಳು ಸುದ್ದಿಕೇಂದ್ರಗಳಿಗೆ ದೂರವಾಣಿ ಕರೆ ಮಾಡಿ, ಅಜ್ಮಿಯವರನ್ನು ಗುಂಡುಹಾರಿಸಿ ಕೊಲೆ ಮಾಡಿರುವುದಾಗಿ ಹೇಳಿಕೆ ನೀಡಿವೆ.ಏತನ್ಮಧ್ಯೆ, ಅಜ್ಮಿಯವರನ್ನು 9ಎಂಎಂ ಪಿಸ್ತೂಲ್‌ನಿಂದ ಗುಂಡುಹಾರಿಸಿ ಹತ್ಯೆ ಮಾಡಲಾಗಿದೆ ಎಂದು ಪೋಸ್ಟ್‌ಮಾರ್ಟಂ ವರದಿ ಬಹಿರಂಗವಾಗಿದೆ.
ಚೋಟಾ ರಾಜನ್ ಗ್ಯಾಂಗ್ 32 ಕ್ಯಾಲಿಬರ್ ಪಿಸ್ತೂಲ್ ಬಳಸುವಲ್ಲಿ ಸಿದ್ಧಹಸ್ತವಾಗಿದ್ದು, ರವಿ ಪೂಜಾರಿ ಮತ್ತು ಸಂತೋಷ ಶೆಟ್ಟಿ ಗ್ಯಾಂಗ್‌ಗಳು 9 ಎಂಎಂ ಪಿಸ್ತೂಲ್ ಬಳಕೆಯಲ್ಲಿ ಮುಂಚೂಣಿಯಲ್ಲಿದೆ ಎಂದು ಪೊಲೀಸ್ ಅದಿಕಾರಿಗಳು ತಿಳಿಸಿದ್ದಾರೆ.
ಮೂಲಗಳ ಪ್ರಕಾರ,ಛೋಟಾ ರಾಜನ್ ಸಹಚರ ಭರತ್ ನೇಪಾಳಿ, ಆರೋಪಿ ಪರ ವಕೀಲ ಅಜ್ಮಿಯವರನ್ನು ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದ್ದಾನೆ.ರವಿಪೂಜಾರಿ ಮತ್ತು ಸಂತೋಷ್ ಶೆಟ್ಟಿ ಈ ಹಿಂದೆ ರಾಜನ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಕಳೆದ 2000ರಲ್ಲಿ ಛೋಟಾ ರಾಜನ್ ಬ್ಯಾಂಕಾಂಕ್‌ನಲ್ಲಿ ಗುಂಡಿಗೆ ದಾಳಿಯಾಗಿ ಗಂಭೀರವಾಗಿ ಗಾಯಗೊಂಡ ನಂತರ ಮತ್ತು ಪೂಜಾರಿ ಮಧ್ಯೆ ಮನಸ್ಥಾಪ ಉಂಟಾಗಿ ಪ್ರತ್ಯೇಕವಾದರು. ಇಂಡೋನೇಶಿಯಾದ ಜಕಾರ್ತಾದಲ್ಲಿ ನಕಲಿ ಡಾಲರ್‌ಗಳ ವಹಿವಾಟು ನೋಡಿಕೊಳ್ಳುತ್ತಿದ್ದ ಶೆಟ್ಟಿ ಅಲಿಯಾಸ್ ರಾಕೇಶ್ ಮದನ್ ಶರ್ಮಾ ಭೂಗತವಲಯದಲ್ಲಿ ಕ್ಲಿಂಟನ್ ಎನ್ನುವ ಖ್ಯಾತಿಗೆ ಒಳಗಾಗಿದ್ದಾರೆ.
ಶೆಟ್ಟಿ ಸಿಂಗಾಪೂರ್‌ನಲ್ಲಿ ವಾಸವಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.ಪೂಜಾರಿ ಗ್ಯಾಂಗ್, ಈಗಾಗಲೇ ರಷೀದ್ ಮಲಬಾರಿ ಪರ ವಾದಿಸುತ್ತಿದ್ದ ವಕೀಲ ನೌಷಾದ್ ಕಾಶ್ಮಿಗಿಯವರನ್ನು 2009 ಏಪ್ರಿಲ್ 24ರಂದು ಮಂಗಳೂರಿನಲ್ಲಿ ಗುಂಡಿಕ್ಕಿ ಕೊಂದಿದ್ದರು.
ಪಾಕಿಸ್ತಾನದ ಐಎಸ್‌ಐ ಪರ ಕಾರ್ಯನಿರ್ವಹಿಸುತ್ತಿದ್ದ ದಾವುದ್ ಇಬ್ರಾಹಿಂ ಸಹಚರ ಜಮೀರ್ ಶಹಾ ಅವರನ್ನು ಫೆಬ್ರವರಿ 7 ರಂದು ಕಾಠ್ಮಂಡುವಿನಲ್ಲಿ ಹತ್ಯೆ ಮಾಡಿರುವುದಾಗಿ ಛೋಟಾ ರಾಜನ್ ಸಹಚರ ಭರತ್ ನೇಪಾಳಿ ಮಾಧ್ಯಮಗಳಿಗೆ ಮಾಹಿತಿ ನೀಡಿರುವುದಾಗಿ ಮೂಲಗಳು ತಿಳಿಸಿವೆ.