ಹೆಡ್ಲಿ ವಾಸವಾಗಿದ್ದ ಸ್ಥಳಗಳಲ್ಲಿ ಭಾರಿ ಕಟ್ಟೆಚ್ಚರ:ಚವ್ಹಾಣ್
ಮುಂಬೈ, ಭಾನುವಾರ, 14 ಫೆಬ್ರವರಿ 2010( 13:39 IST )
ಅಮೆರಿಕ ಮೂಲದ ಲಷ್ಕರ್-ಏ-ತೊಯಿಬಾ ಉಗ್ರ ಡೇವಿಡ್ ಹೆಡ್ಲಿ ವಾಸವಾಗಿದ್ದ ಸ್ಥಳಗಳಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಮಹಾರಾಷ್ಟ್ರದ ಮುಖ್ಯಮಂತಿ ಅಶೋಕ್ ಚವ್ಹಾಣ್ ಹೇಳಿದ್ದಾರೆ.
ಮುಂಬೈ ಮತ್ತು ಪುಣೆ ನಗರಗಳ ವಿಮಾನ, ರೈಲು ಹಾಗೂ ಬಸ್ ನಿಲ್ದಾಣಗಳು ಮತ್ತು ಪ್ರಮುಖ ಸ್ಥಳಗಳಲ್ಲಿ ಪೊಲೀಸ ಪಡೆಗಳ ಭಾರಿ ಬಿಗಿಭಧ್ರತೆಯನ್ನು ಒದಗಿಸಲಾಗಿದೆ ಎಂದು ಮುಖ್ಯಮಂತ್ರಿ ಚವ್ಹಾಣ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವಾಲಯಗಳು ನೀಡಿದ ಭಧ್ರತಾ ಎಚ್ಚರಿಕೆಗಳನ್ನು ಪಾಲಿಸುವಲ್ಲಿ ವಿಫಲವಾಗಿರುವ ಬಗ್ಗೆ ಪ್ರಶ್ನಿಸಿದಾಗ, ಗೃಹ ಸಚಿವಾಲಯದ ಆದೇಶಗಳನ್ನು ಉಲ್ಲಂಘಿಸಿರುವ ಬಗ್ಗೆ ಮಾಹಿತಿ ಸಂಗ್ರಹಿಸಲಾಗುವುದು. ಆದರೆ ಕೇಂದ್ರದ ಮತ್ತು ರಾಜ್ಯದ ಗುಪ್ತಚರ ದಳಗಳ ಮಧ್ಯೆ ಸಹಕಾರದ ಕೊರೆತೆಯಿದೆ ಎಂದರು.
ಬಾಂಬ್‌ಸ್ಫೋಟದಲ್ಲಿ ಮೃತರಾದ ವ್ಯಕ್ತಿಗಳಿಗೆ 1ಲಕ್ಷ ರೂಪಾಯಿ ಪರಿಹಾರ ಹಾಗೂ ಗಾಯಗೊಂಡ ವ್ಯಕ್ತಿಗಳಿಗೆ 50 ಸಾವಿರ ರೂಪಾಯಿಗಳ ಪರಿಹಾರವನ್ನು ಘೋಷಿಸಲಾಗಿದೆ ಎಂದು ಚವ್ಹಾಣ್ ತಿಳಿಸಿದ್ದಾರೆ.