ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕುಡಿದು ನರ್ತಿಸಿದವನ ಜತೆಗಿನ ಮದುವೆ ರದ್ದುಪಡಿಸಿದ ಯುವತಿ! (Bride calls off wedding | dirty dancing | homeopathy doctor | marriage)
Bookmark and Share Feedback Print
 
WD
ಬಿಹಾರದಲ್ಲಿನ ಯುವಕನೊಬ್ಬ ಕಂಠಪೂರ್ತಿ ಕುಡಿದು ಇತರರೊಂದಿಗೆ ಕೆಟ್ಟದಾಗಿ ನರ್ತಿಸಿದ್ದನ್ನು ಕಂಡ ವಧುವೊಬ್ಬಳು ಆತನ ಜತೆಗಿನ ನಿಶ್ಚಿತಾರ್ಥವನ್ನು ಕಡಿದುಕೊಂಡಿದ್ದು, ಮದುವೆಯನ್ನೇ ರದ್ದುಪಡಿಸಿದ್ದಾಳೆ.

ಸಮಷ್ಟಿಪುರ ಜಿಲ್ಲೆಯ ಸರಯ್‌ರಂಜನ್ ಗ್ರಾಮದ ಹೋಮಿಯೋಪಥಿ ವೈದ್ಯೆಯ ಜತೆ ಗಯಾ ಮೂಲದ ರವಿ ಕುಮಾರ್ ಚೌದರಿ ಎಂಬಾತನ ಜತೆ ನಿಶ್ಚಿತಾರ್ಥ ಮುಗಿದಿತ್ತು. ಯುನೈಟೆಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಧಿಕಾರಿಯಾಗಿರುವ ರವಿ ಕೆಟ್ಟದಾಗಿ ಕುಣಿದದ್ದನ್ನೇ ಮುಂದಿಟ್ಟುಕೊಂಡ ವಧು ಆತನನ್ನು ಮದುವೆಯಾಗಲು ನಿರಾಕರಿಸಿ ಹೊರಟು ಹೋಗಿದ್ದಾಳೆ.

2005ರಲ್ಲಿ ಈ ಮದುವೆಯನ್ನು ಗೊತ್ತುಪಡಿಸಲಾಗಿತ್ತು. ಆ ಬಳಿಕ ಇವರಿಬ್ಬರೂ ಒಬ್ಬರನ್ನೊಬ್ಬರು ಪರಸ್ಪರ ಬಲ್ಲವರಾಗಿದ್ದರು. ಆದರೆ ಕಳೆದ ಗುರುವಾರ ನಡೆಯಬೇಕಿದ್ದ ಮದುವೆಗೂ ಮೊದಲು ನಡೆದ 'ಬರಾತೀಸ್' ಕಾರ್ಯಕ್ರಮದಲ್ಲಿ ಆತ ಬೇರೆಯವರೊಂದಿಗೆ ಕುಣಿದ ರೀತಿಯನ್ನು ಕಂಡ ಆಕೆ, ಈ ಮದುವೆ ತನಗೆ ಬೇಡ ಎಂದು ಪಟ್ಟು ಹಿಡಿದಳು ಎಂದು ಮೂಲಗಳು ಹೇಳಿವೆ.

ಇದಕ್ಕೆ ಆಕೆಯ ಉದ್ಯಮಿ ತಂದೆ ಯೋಗೇಂದ್ರ ಮೆಹ್ತೋ ಕೂಡ ಬೆಂಬಲ ನೀಡಿದ್ದಾರೆ. ಅಲ್ಲದೆ ಮದುವೆ ಪಾರ್ಟಿಯನ್ನು ರದ್ದುಗೊಳಿಸಲು ಅವರು ಸೂಚನೆ ನೀಡಿದ್ದಾರೆ.

ಈ ರೀತಿ ಪಾನಮತ್ತರಾಗಿ ಅನಾಗರಿಕ ರೀತಿಯಿಂದ ನರ್ತಿಸುವುದು ನನಗೆ ಮತ್ತು ನನ್ನ ಕುಟುಂಬಕ್ಕೆ ಸ್ವೀಕಾರಾರ್ಹವಲ್ಲ. ನನ್ನ ಮಗಳ ನಿರ್ಧಾರವನ್ನು ನಾನು ಬೆಂಬಲಿಸುತ್ತೇನೆ ಎಂದು ತಿಳಿಸಿದ್ದಾರೆ.

ಮದುವೆ ರದ್ದುಗೊಂಡಿದ್ದರಿಂದ ತೀವ್ರ ಹತಾಶೆಗೊಳಗಾದ ರವಿ ಪೊಲೀಸರನ್ನೂ ಕರೆಸಿದ್ದ. ರವಿ ಮದುವೆ ಗಂಡಿನ ಸಾಂಪ್ರದಾಯಿಕ ಪೋಷಾಕಿನಲ್ಲಿದ್ದ ಹೊರತಾಗಿಯೂ ಹುಡುಗಿ ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿಯದೇ ಮದುವೆ ರದ್ದುಗೊಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ