ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪುಣೆಯಲ್ಲಿ ಬಾಂಬ್ ಇಟ್ಟವರಿಬ್ಬರು ರಿಕ್ಷಾದಲ್ಲಿ ಪರಾರಿಯಾಗಿದ್ದರೇ? (CCTV footage | German Bakery | terror attack | ATS Maharashtra)
Bookmark and Share Feedback Print
 
ಪುಣೆ ಬಾಂಬ್ ಸ್ಫೋಟದ ತನಿಖೆಯಲ್ಲಿ ಮಹತ್ವದ ಸುಳಿವು ದೊರೆತಿದ್ದು, ದುರ್ಘಟನೆ ನಡೆದ ಜರ್ಮನ್ ಬೇಕರಿ ಎದುರುಗಡೆ ಹೊಟೇಲ್‌ನ ಸಿಸಿಟಿವಿಯಲ್ಲಿ ಇಬ್ಬರು ಶಂಕಿತ ವ್ಯಕ್ತಿಗಳು ಬ್ಯಾಗಿನೊಂದಿಗೆ ಠಳಾಯಿಸುತ್ತಿದ್ದ ದೃಶ್ಯ ದಾಖಲಾಗಿದೆ.

ಜರ್ಮನ್ ಬೇಕರಿ ಎದುರುಗಡೆ ಇರುವ ಪಂಚತಾರಾ ಹೊಟೇಲ್‌ನ ಕೊನೆಯ ಮಹಡಿ 'ಒ' ದಾಖಲಿಸಿಕೊಂಡಿರುವ ದೃಶ್ಯಗಳ ಪ್ರಕಾರ ಓರ್ವ ಸ್ಫೋಟಕಗಳನ್ನು ಅಡಗಿಸಿಕೊಂಡಿದ್ದ ಬ್ಯಾಗ್ ಹಿಡಿದುಕೊಂಡಿರುವುದು ಕಂಡು ಬಂದಿದೆ. ಜತೆಗಿದ್ದ ಮತ್ತೊಬ್ಬ ವ್ಯಕ್ತಿ ಮಧ್ಯವಯಸ್ಕನಾಗಿದ್ದು ಮೊಬೈಲ್ ಮಾತುಕತೆ ನಡೆಸುತ್ತಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ.
PTI


ಈ ಸಿಸಿಟೀವಿ ತುಣುಕನ್ನು ತನಿಖಾದಳಗಳು ಕೂಲಂಕಷವಾಗಿ ಪರಿಶೀಲನೆ ನಡೆಸುತ್ತಿವೆ. ಅವರಿಬ್ಬರೂ ಜರ್ಮನ್ ಬೇಕರಿಯ ಒಳಗಡೆ ಬ್ಯಾಗಿನೊಂದಿಗೆ ಹೋಗುತ್ತಿರುವ ದೃಶ್ಯವಿದ್ದು, ಇಬ್ಬರನ್ನೂ ಗುರುತಿಸಲು ಸಾಧ್ಯವಾಗುವಷ್ಟು ದೃಶ್ಯ ಸ್ಪಷ್ಟವಾಗಿದೆ ಎಂದು ಮೂಲಗಳು ಹೇಳಿವೆ.

ಆದರೆ ಈ ಹಂತದಲ್ಲಿ ಅದನ್ನೇ ಖಚಿತವಾಗಿ ಹೇಳಲು ಅಥವಾ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ. ಇನ್ನಷ್ಟು ತನಿಖೆಗಳು ನಡೆಯಬೇಕಿದೆ ಎಂದು ತನಿಖಾ ದಳಗಳು ಅಭಿಪ್ರಾಯಪಟ್ಟಿವೆ.

ಪ್ರಾಥಮಿಕ ತನಿಖಾ ವರದಿಗಳ ಪ್ರಕಾರ ಜರ್ಮನ್ ಬೇಕರಿಯ ವೈಟರ್ ಬ್ಯಾಗನ್ನು ತೆರೆದ ನಂತರ ಬಾಂಬ್ ಸ್ಫೋಟಗೊಂಡಿದೆ. ಸ್ಫೋಟವನ್ನು ರಿಮೋಟ್ ಕಂಟ್ರೋಲ್ ಅಥವಾ ಮೊಬೈಲ್ ಮೂಲಕ ನಡೆಸಲಾಗಿದೆ. ಘಟನೆಯ ತಕ್ಷಣವೇ ಆರೋಪಿಗಳು ರಿಕ್ಷಾವೊಂದರಲ್ಲಿ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದ್ದು, ಈ ಬಗ್ಗೆ ಇನ್ನಷ್ಟು ತನಿಖೆ ನಡೆದ ನಂತರವಷ್ಟೇ ಖಚಿತ ಮಾಹಿತಿಗಳು ಹೊರ ಬೀಳಲಿವೆ.

ಇದುವರೆಗೆ ಸ್ಫೋಟ ನಡೆದ ಸ್ಥಳದಲ್ಲಿ ಟೈಮರ್ ಪರಿಕರಗಳು ಪತ್ತೆಯಾಗಿಲ್ಲ. ಹಾಗೊಂದು ವೇಳೆ ಈ ಸ್ಫೋಟವನ್ನು ರಿಮೋಟ್ ಕಂಟ್ರೋಲ್ ಮೂಲಕವೇ ನಡೆಸಿದ್ದು ಹೌದಾದರೆ, ಇಂಟಗ್ರೇಟೆಡ್ ಸರ್ಕ್ಯೂಟ್ ಬಳಸದೆ ಜಮ್ಮು-ಕಾಶ್ಮೀರದ ಹೊರಗಡೆ ಭಾರತದಲ್ಲಿ ನಡೆಸಿದ ಮೊದಲ ಬಾಂಬ್ ಸ್ಫೋಟ ಎಂದಾಗಲಿದೆ.

ಜಮಾತ್ ಉದ್ ದಾವಾ ಕೃತ್ಯ: ಪಿಳ್ಳ
ಪುಣೆ ಸ್ಫೋಟದ ಹಿಂದೆ ಪಾಕಿಸ್ತಾನ ಮೂಲದ ಜಮಾತ್ ಉದ್ ದಾವಾ ಭಯೋತ್ಪಾದಕ ಸಂಘಟನೆ ಇರುವುದನ್ನು ಕೇಂದ್ರ ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ ಖಚಿತಪಡಿಸಿದ್ದಾರೆ.

ಶನಿವಾರ ಜರ್ಮನ್ ಬೇಕರಿಯಲ್ಲಿ ನಡೆದಿದ್ದ ಸ್ಫೋಟದ ತನಿಖೆಗಳು ಪ್ರಗತಿಯಲ್ಲಿದ್ದು, ಘಟನೆ ಹಿಂದೆ ಪಾಕಿಸ್ತಾನದ ಐಎಸ್ಐ ಕೈವಾಡದ ಕುರಿತು ಯಾವುದೇ ವಿವರಣೆ ನೀಡಲು ಅವರು ನಿರಾಕರಿಸಿದ್ದಾರೆ. ಆದರೆ ದಾಳಿಯ ತಂತ್ರಗಳನ್ನು ರೂಪಿಸಲಾಗಿರುವುದು ಪಾಕಿಸ್ತಾನದಲ್ಲೇ ಎಂದು ಬೆಟ್ಟು ಮಾಡಿ ತೋರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ