ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪುಣೆ ಸ್ಫೋಟ: ಭಟ್ಕಳದ ಇಬ್ಬರು ಶಂಕಿತರು ಪೊಲೀಸ್ ವಶಕ್ಕೆ (Indian Mujahideen | Riyaz Ahmed Bhatkal | Iqbal Bhatkal | Pune blast)
Bookmark and Share Feedback Print
 
ಪುಣೆ ಜರ್ಮನ್ ಬೇಕರಿ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಹತ್ವದ ಸಾಕ್ಷ್ಯಗಳು ಲಭ್ಯವಾಗಿವೆ ಎಂದು ಮೂಲಗಳು ಹೇಳಿದ್ದು, ಭಟ್ಕಳ ಮೂಲದ ಇಬ್ಬರು ಶಂಕಿತರನ್ನು ನಗರದಿಂದ ವಶಕ್ಕೆ ತೆಗೆದುಕೊಳ್ಳಲಾಗಿದೆ.

ಭಟ್ಕಳ ಮೂಲದ ಇವರಿಬ್ಬರು ಕಳೆದ ಮೂರು ವರ್ಷಗಳಿಂದ ಪುಣೆಯಲ್ಲಿ ವಾಸಿಸುತ್ತಿದ್ದು, ಇಂಡಿಯನ್ ಮುಜಾಹಿದೀನ್ ನಾಯಕ ರಿಯಾಜ್ ಅಹ್ಮದ್ ಭಟ್ಕಳ್ ಪುಣೆಯಲ್ಲಿ ತನ್ನ ಯೋಜನೆ ರೂಪಿಸುತ್ತಿರುವ ಸಂದರ್ಭದಲ್ಲಿ ಜತೆಗಿದ್ದರು ಎಂದು ಮೂಲಗಳು ತಿಳಿಸಿವೆ.
PR


ಒಬ್ಬನನ್ನು ಪುಣೆಯಲ್ಲಿನ ಜನವಾದಿ ಪ್ರದೇಶದಿಂದ ಹಾಗೂ ಮತ್ತೊಬ್ಬನನ್ನು ಪಿಂಪ್ರಿ ಕೈಗಾರಿಕಾ ವಲಯದ ಕುದಲ್ವಾಡಿಯಿಂದ ವಶಕ್ಕೆ ತೆಗೆದುಕೊಳ್ಳಲಾಗಿದೆ. ಆದರೆ ಈ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ನೀಡಲು ಪುಣೆ ಪೊಲೀಸ್ ಆಯುಕ್ತ ಸತ್ಯಪಾಲ್ ಸಿಂಗ್ ನಿರಾಕರಿಸಿದ್ದು, ಬಂಧಿಸಲಾಗಿದೆ ಅಥವಾ ಇಲ್ಲ ಎಂಬುದನ್ನು ಖಚಿತಪಡಿಸಿಲ್ಲ.

ಪಾಕಿಸ್ತಾನ ಮೂಲದ ಲಷ್ಕರ್ ಇ ತೋಯ್ಬಾದ ಜತೆ ನಿಕಟ ಸಂಪರ್ಕ ಹೊಂದಿರುವ ಇಂಡಿಯನ್ ಮುಜಾಹಿದೀನ್ ಸಂಘಟನೆ ಪುಣೆ ದುಷ್ಕೃತ್ಯವನ್ನು ನಡೆಸಿದೆ ಎಂದು ಶಂಕಿಸಲಾಗುತ್ತಿದೆ. ಈ ಸಂಘಟನೆಯ ಭಾರತೀಯ ಮುಖ್ಯಸ್ಥರಾದ ಕರ್ನಾಟಕದ ರಿಯಾಜ್ ಅಹ್ಮದ್ ಭಟ್ಕಳ್ ಮತ್ತು ಇಕ್ಬಾಲ್ ಭಟ್ಕಳ್ ಸೇರಿದಂತೆ ಹಲವು ಭಯೋತ್ಪಾದಕರ ಕೈವಾಡವಿದೆ ಎಂದು ಹೇಳಲಾಗುತ್ತಿದ್ದು, ತನಿಖೆಗಳು ಮುಂದುವರಿದಿವೆ.

ಇಂಡಿಯನ್ ಮುಜಾಹಿದೀನ್ ಜತೆ ಸಂಬಂಧ ಹೊಂದಿರುವ ಪುಣೆ ನಿವಾಸಿ ಮೊಹ್ಸಿನ್ ಚೌದರಿ ಎಂಬ ಉಗ್ರ ಕಾಣೆಯಾಗಿದ್ದು, ಆತನ ಹುಡುಕಾಟದಲ್ಲಿ ಪೊಲೀಸರು ತೊಡಗಿದ್ದಾರೆ. ಈತ ಜರ್ಮನ್ ಬೇಕರಿ ಪ್ರಕರಣದಲ್ಲಿ ಮಹತ್ವದ ಪಾತ್ರವಹಿಸಿದ್ದಾನೆ ಎಂದು ತನಿಖಾ ದಳಗಳು ಶಂಕಿಸಿವೆ. ಅಬ್ದಾಸ್ ಶುಭಾನ್ ಖುರೇಷಿ ಎಂಬಾತನ ಕುರಿತೂ ತನಿಖೆ ನಡೆಸಲಾಗುತ್ತಿದೆ.
PR


ಈ ನಡುವೆ ಇಂಡಿಯನ್ ಮುಜಾಹಿದೀನ್ ಸಂಸ್ಥಾಪಕ ಸದಸ್ಯರಾದ ಸಾಧಿಕ್ ಶೇಖ್ ಮತ್ತು ಮನ್ಸೂರ್ ಪೀರ್ಭಾಯ್ ಅವರುಗಳನ್ನು ಕೂಡ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುವ ಸಾಧ್ಯತೆಗಳಿವೆ. ಲಷ್ಕರ್ ಇ ತೋಯ್ಬಾ ಮತ್ತು ಸಿಮಿ ಪರವಾಗಿ ಬಾಂಬ್ ಸ್ಫೋಟಗಳನ್ನು ನಡೆಸಿದ ಆರೋಪದಲ್ಲಿ ಪ್ರಸಕ್ತ ಅವರು ಶಿಕ್ಷೆ ಅನುಭವಿಸುತ್ತಿದ್ದಾರೆ.

ಮತ್ತೊಬ್ಬ ಉಗ್ರ ಶಾಹ್ಜಾದ್‌ನನ್ನು ದೆಹಲಿ ಸರಣಿ ಸ್ಫೋಟದ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಬಂಧಿಸಲಾಗಿತ್ತು. ಈತನನ್ನು ಕೂಡ ವಿಚಾರಣೆಗೆ ಒಳಪಡಿಸುವ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು ಎಂದು ನಿರೀಕ್ಷೆ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ್ದು.

ಮೊಹಮ್ಮದ್ ಅಮ್ಜಾದ್ ಖ್ವಾಜಾನನ್ನು ಇತ್ತೀಚೆಗಷ್ಟೇ ಹೈದರಾಬಾದ್ ಪೊಲೀಸರು ಚೆನ್ನೈಯಲ್ಲಿ ಬಂಧಿಸಿದ್ದು, ಈತ ತನಗೆ ಪುಣೆಯಲ್ಲಿ ಸ್ಫೋಟ ನಡೆದ ಜರ್ಮನ್ ಬೇಕರಿ ಪಕ್ಕದಲ್ಲಿರುವ ಓಶೋ ಆಶ್ರಮದ ವೀಡಿಯೋಗಳನ್ನು ತೋರಿಸಲಾಗಿತ್ತು ಎಂದು ತನಿಖೆ ಸಂದರ್ಭದಲ್ಲಿ ಹೇಳಿಕೊಂಡಿದ್ದಾನೆ.
ಸಂಬಂಧಿತ ಮಾಹಿತಿ ಹುಡುಕಿ