ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಶೀಘ್ರವೇ ರಾಷ್ಟ್ರಾದ್ಯಂತ ಏಕ ರೂಪ ಪ್ರವೇಶ ಪರೀಕ್ಷೆ
(Single national-level entrance test | students | HRD minister | Kapil Sibal)
2013ರಿಂದ ಇಂಜಿನಿಯರಿಂಗ್, ಮೆಡಿಕಲ್ ಮತ್ತು ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳಿಗೆ ರಾಷ್ಟ್ರ ಮಟ್ಟದಲ್ಲಿ ಒಂದೇ ಪ್ರವೇಶ ಪರೀಕ್ಷೆಯನ್ನು ನಡೆಸುವ ಸಿದ್ಧತೆಗಳು ನಡೆಯುತ್ತಿವೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಕಪಿಲ್ ಮಂಗಳವಾರ ತಿಳಿಸಿದ್ದಾರೆ.
ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಲ್ಲಿ 2013ರಿಂದ ಅಖಿಲ ಭಾರತ ಮಟ್ಟದಲ್ಲಿ ಪರೀಕ್ಷೆಗಳನ್ನು ನಡೆಸುವ ಪ್ರಯತ್ನಗಳು ನಡೆಯುತ್ತಿವೆ. ಇದರಿಂದಾಗಿ ಇಂಜಿಯನಿಯರಿಂಗ್, ಮೆಡಿಕಲ್, ಇಕಾನಮಿಕ್ಸ್ ಮತ್ತು ಕಾಮರ್ಸ್ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆಯು ಸರಾಗವಾಗುತ್ತದೆ ಎಂದು ಶಾಲಾ ಶೈಕ್ಷಣಿಕ ಮಂಡಳಿಯ ಒಕ್ಕೂಟದ (ಸಿಒಬಿಎಸ್ಇ) ಸಭೆಯಲ್ಲಿ ಮಾತನಾಡುತ್ತಾ ಸಿಬಲ್ ತಿಳಿಸಿದ್ದಾರೆ.
ಈ ಕೋರ್ಸುಗಳಿಗೆ ಪ್ರವೇಶ ಪಡೆಯಲು ಹೆಚ್ಚು ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳ ಮೇಲಿನ ಹೊರೆ ಇದರಿಂದ ಕಡಿಮೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
12ನೇ ತರಗತಿಯ ವಿಜ್ಞಾನ ಮತ್ತು ಗಣಿತ ವಿಷಯಗಳಿಗೆ ಸಮಾನ ಪಠ್ಯಕ್ರಮವನ್ನು ಸಿದ್ಧಪಡಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಸಿಒಬಿಎಸ್ಇ ತಿಳಿಸಿದೆ.
ವಿಜ್ಞಾನ ಮತ್ತು ಗಣಿತಗಳಿಗೆ ಸಮಾನ ಪಠ್ಯಕ್ರಮ ಸಿದ್ಧಪಡಿಸಲು ಶೇ.90ರಷ್ಟು ಶಾಲಾ ಮಂಡಳಿಗಳನ್ನು ಸಂಪರ್ಕಿಸಲಾಗಿದೆ. ಇದೇ ರೀತಿಯ ಸಮಾನ ಪಠ್ಯಕ್ರಮವನ್ನು ವಾಣಿಜ್ಯ ವಿಷಯದಲ್ಲಿಯೂ (ಕಾಮರ್ಸ್) ಮೂರು ತಿಂಗಳುಗಳೊಳಗೆ ಸಿದ್ಧಗೊಳಿಸಲಾಗುತ್ತದೆ ಎಂದು ಸಿಬಲ್ ತಿಳಿಸಿದ್ದಾರೆ.
ಗಣಿತ ಮತ್ತು ವಿಜ್ಞಾನ ವಿಷಯಗಳಿಗೆ ಎಲ್ಲಾ ಶಾಲಾ ಮಂಡಳಿಗಳಲ್ಲಿ ಸಮಾನ ಪಠ್ಯಕ್ರಮವನ್ನು ಅಳವಡಿಸುವುದಾಗಿ ಕಳೆದ ವರ್ಷದ ಆಗಸ್ಟ್‌ನಲ್ಲಿ ಸಿಬಲ್ ಹೇಳಿದ್ದರು. ಸಮಾನ ಪಠ್ಯಕ್ರಮದಿಂದಾಗಿ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ಒಂದೇ ಪ್ರವೇಶ ಪರೀಕ್ಷೆ ನಡೆಸಲು ಹಾದಿ ಸುಗಮವಾಗುತ್ತದೆ ಎಂದಿದ್ದರು.