ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಉಗ್ರತ್ವವೇ ಅಜೆಂಡಾ, ಪಾಕ್ ಜತೆ ಸಮಗ್ರ ಮಾತಿಲ್ಲ: ಭಾರತ (composite dialogue | Pakistan | SM Krishna | Pune Blast)
Bookmark and Share Feedback Print
 
ಭಾರತ ಮತ್ತು ಪಾಕಿಸ್ತಾನಗಳ ವಿದೇಶಾಂಗ ಕಾರ್ಯದರ್ಶಿಗಳ ನಡುವಿನ ಮಾತುಕತೆಯಲ್ಲಿ ಭಯೋತ್ಪಾದನೆಯೇ ಪ್ರಮುಖ ಅಂಶ ಎಂಬುದನ್ನು ಒತ್ತಿ ಹೇಳಿರುವ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ, ಉಗ್ರರ ವಿರುದ್ಧದ ಕ್ರಮಕೈಗೊಳ್ಳುವ ಭರವಸೆ ಪೂರೈಸದ ಹೊರತು ಇಸ್ಲಾಮಾಬಾದ್ ಜತೆ ಸಮಗ್ರ ಮಾತುಕತೆ ಪುನರಾರಂಭವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

'ಸಿಎನ್ಎನ್-ಐಬಿಎನ್' ವಾರ್ತಾವಾಹಿನಿಯ ವಿದೇಶಾಂಗ ವ್ಯವಹಾರಗಳ ಉಪ ಸಂಪಾದಕಿ ಸುಹಾಸಿನಿ ಹೈದರ್ ಅವರೊಂದಿಗೆ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಕೃಷ್ಣ, 'ಪಾಕಿಸ್ತಾನದ ಜತೆಗಿನ ಸಮಗ್ರ ಮಾತುಕತೆಯನ್ನು ಅತ್ಯುತ್ತಮ ಕಾರಣಕ್ಕಾಗಿ ರದ್ದುಗೊಳಿಸಲಾಗಿತ್ತು. ಮುಂಬೈ ದಾಳಿಯ ನಂತರ ನಾವು ಎತ್ತಿ ತೋರಿಸಿದ್ದ ಸಮಸ್ಯೆಗಳು ಈಗಲೂ ಹಾಗೆಯೇ ಉಳಿದಿದ್ದು, ಇದನ್ನು ಉನ್ನತ ಮಟ್ಟದಲ್ಲಿ ಗಂಭೀರವಾಗಿ ಸ್ವೀಕರಿಸಿ ಪರಿಹರಿಸಬೇಕು' ಎಂದರು.

ಅದೇ ಹೊತ್ತಿಗೆ ಭಾರತವು ಪಾಕಿಸ್ತಾನದ ಜತೆ ಎಲ್ಲಾ ವಿಚಾರಗಳನ್ನೂ ಚರ್ಚಿಸಲು ಸಿದ್ಧವಿದೆ. ಆದರೆ ಆ ದೇಶದ ನೆಲದಿಂದ ನಡೆಯುತ್ತಿರುವ ಭಯೋತ್ಪಾದನೆಯೇ ನಮ್ಮ ಮಾತುಕತೆಯಲ್ಲಿ ಪ್ರಮುಖ ಅಂಶ ಎಂದು ಅವರು ತಿಳಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನಗಳ ವಿದೇಶಾಂಗ ಕಾರ್ಯದರ್ಶಿಗಳು ಫೆಬ್ರವರಿ 25ರಂದು ನವದೆಹಲಿಯಲ್ಲಿ ಪರಸ್ಪರ ಮಾತುಕತೆ ನಡೆಸಿಲಿದ್ದಾರೆ.

ಪುಣೆ ದಾಳಿಯ ಹೊರತಾಗಿಯೂ ಪಾಕಿಸ್ತಾನದ ಜತೆಗಿನ ಮಾತುಕತೆಯನ್ನು ಮುಂದುವರಿಸುವ ನಿರ್ಧಾರಕ್ಕೆ ಕೇಂದ್ರ ಸಚಿವ ಸಂಪುಟವು ಬಂದ ನಂತರ ಕೃಷ್ಣ ಸರಕಾರದ ನಿಲುವನ್ನು ತಿಳಿಸಿದ್ದು, ಪಾಕಿಸ್ತಾನದ ನೆಲದಿಂದ ಈ ದೇಶದ ವಿರುದ್ಧ ನಡೆಯುತ್ತಿರುವ ಭಯೋತ್ಪಾದನೆಯನ್ನು ಹತ್ತಿಕ್ಕುವುದು ನಮ್ಮ ಷರತ್ತಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಮುಂಬೈ ಭಯೋತ್ಪಾದನಾ ದಾಳಿಯಲ್ಲಿ ಪಾಕಿಸ್ತಾನೀಯರು ಪಾಲ್ಗೊಂಡಿರುವ ಬಗ್ಗೆ ಸಾಕಷ್ಟು ಸಾಕ್ಷ್ಯಗಳ್ನು ನಾವು ಅಲ್ಲಿನ ತನಿಖಾದಳಗಳಿಗೆ ನೀಡಿದ 14 ತಿಂಗಳುಗಳ ನಂತರ ಈ ಮಾತುಕತೆ ನಡೆಯುತ್ತಿದೆ. ಈ 14 ತಿಂಗಳುಗಳ ನಂತರವೂ ನಮ್ಮ ಕಳವಳಗಳಿಗೆ ಅವರು ಸಮರ್ಥ ಪರಿಹಾರ ಒದಗಿಸಿಲ್ಲ. ಅಲ್ಲಿನ ಭಯೋತ್ಪಾದನಾ ಮೂಲವ್ಯವಸ್ಥೆಗಳು ಭಾರತ ಮತ್ತು ಈ ಪ್ರಾಂತ್ಯದ ಸ್ಥಿರತೆ, ಶಾಂತಿಗೆ ಬೆದರಿಕೆಯಾಗಿದೆ ಎಂದರು.

ಭಾರತದೊಂದಿಗೆ ಅರ್ಥಪೂರ್ಣ ಮತ್ತು ನಿರೀಕ್ಷಿತ ಫಲಿತಾಂಶವಿರುವ ಮಾತುಕತೆಯನ್ನು ತಾನು ಬಯಸುತ್ತಿರುವುದಾಗಿ ಹೇಳುತ್ತಿರುವ ಪಾಕಿಸ್ತಾನವು, ಸ್ಥಗಿತಗೊಂಡಿರುವ ಸಮಗ್ರ ಮಾತುಕತೆಯೂ ನಡೆಯಬೇಕೆಂದು ಹೇಳಿಕೊಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ