ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮತ್ತೆ ನಕ್ಸಲರ ಅಟ್ಟಹಾಸ:ಒಂಬತ್ತು ಗ್ರಾಮಸ್ಥರ ಹತ್ಯೆ (Maoist attack| Bihar | Jamui district)
Bookmark and Share Feedback Print
 
ಪಶ್ಚಿಮ ಬಂಗಾಳದ ಮಿಡ್ನಾಪುರ್ ಜಿಲ್ಲೆಯಲ್ಲಿ ಕೇವಲ ಎರಡು ದಿನಗಳ ಹಿಂದೆ 24 ಪೊಲೀಸರ ಮಾರಣಹೋಮ ನಡೆಸಿದ ನಕ್ಸಲರು, ಕಳೆದ ರಾತ್ರಿ ಬಿಹಾರ್‌ನ ಜಮುವೈ ಜಿಲ್ಲೆಯ ಗ್ರಾಮವೊಂದರಲ್ಲಿ ಕನಿಷ್ಠ ಒಂಬತ್ತು ಗ್ರಾಮಸ್ಥರನ್ನು ಹತ್ಯೆ ಮಾಡಿರುವ ದಾರುಣ ಘಟನೆ ವರದಿಯಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ಸುಮಾರು 120 ನಕ್ಸಲರು ಗ್ರಾಮವನ್ನು ಸುತ್ತುವರಿದು 25 ಮನೆಗಳಿಗೆ ಬೆಂಕಿ ಹಚ್ಚಿ, ಮನಬಂದಂತೆ ಗುಂಡಿನ ದಾಳಿ ನಡೆಸಿದಾಗ, ಒಂಬತ್ತು ಮಂದಿ ಹತರಾಗಿ ಹಲವಾರು ಮಂದಿ ಗಾಯಗೊಂಡಿದ್ದಾರೆ.

ಕೆಲ ದಿನಗಳ ಹಿಂದೆ ಗ್ರಾಮಸ್ಥರು ಎಂಟು ಮಂದಿ ನಕ್ಸಲರನ್ನು ಹತ್ಯೆ ಮಾಡಿದ ಮಾಡಿದ ಹಿನ್ನೆಲೆಯಲ್ಲಿ, ನಕ್ಸಲರು ಸೇಡು ತೀರಿಸಿಕೊಳ್ಳಲು ದಾಳಿ ನಡೆಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ನಕ್ಸಲರ ದಾಳಿಯಲ್ಲಿ ಗಾಯಗೊಂಡವರನ್ನು ಜಮುವೈ ಮತ್ತು ಸಿಕಂದ್ರಾ ಜಿಲ್ಲೆಯ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದ್ದು, ಐವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಎಂಟು ಮಂದಿ ನಕ್ಸಲರ ಹತ್ಯೆಯನ್ನು ವಿರೋಧಿಸಿ ಮಾವೋವಾದಿಗಳು, ಪೂರ್ವಬಿಹಾರ್‌ನಲ್ಲಿ ಮೂರು ದಿನಗಳ ಕಾಲದ ಬಂದ್‌ಗೆ ಕರೆ ನೀಡಿದ್ದರು. ಬಂದ್ ಕರೆ ನಿನ್ನೆ ರಾತ್ರಿ ಅಂತ್ಯವಾಗಿತ್ತು.

ಮಾವೋವಾದಿಗಳ ದಾಳಿಯನ್ನು ಸಮರ್ಥಿಸಿಕೊಂಡಿರುವ ಮಾವೋ ಮುಖಂಡ ಕಿಷನ್‌ಜಿ, ಚಿದಂಬರಂ ಅವರ 'ಆಪರೇಷನ್ ಗ್ರೀನ್ ಹಂಟ್'‌ಗೆ ಉತ್ತರ ನೀಡಲು ಪೊಲೀಸರನ್ನು ಹತ್ಯೆ ಮಾಡಲಾಗಿದೆ. ಅಮಾನವೀಯ ಸೇನಾಕಾರ್ಯಾಚರಣೆ ನಿಲ್ಲಿಸುವವರೆಗೆ ಇದೇ ರೀತಿ ಉತ್ತರ ನೀಡಲಾಗುವುದು ಎಂದು ಸರಕಾರವನ್ನು ಎಚ್ಚರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ