ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಿಜೆಪಿಗೆ ಕುಟುಂಬ ರಾಜಕೀಯ ಗೊತ್ತಿಲ್ಲ; 'ಕಾಂ' ಕೆದಕಿದ ಗಡ್ಕರಿ (Rahul Gandhi | dynasty politics | Congress | Nitin Gadkari)
Bookmark and Share Feedback Print
 
ಪರೋಕ್ಷವಾಗಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಮೇಲೆ ವಾಗ್ದಾಳಿ ನಡೆಸಿರುವ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ, ತನ್ನ ಪಕ್ಷವು ಕುಟುಂಬ ರಾಜಕಾರಣದಲ್ಲಿ ನಂಬಿಕೆ ಇಟ್ಟಿಲ್ಲ ಎಂದು ಇತಿಹಾಸ ಕೆದಕಿದ್ದಾರೆ.

ಬಿಜೆಪಿ ಅಧ್ಯಕ್ಷರಾದ ನಂತರ ಮೊತ್ತ ಮೊದಲ ಬಾರಿ ಪಕ್ಷದ ಮುಖಂಡರು, ಪ್ರತಿನಿಧಿಗಳನ್ನು ಉದ್ದೇಶಿಸಿ ಇಂದೋರ್‌ನ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಗುರುವಾರ ಮಾತನಾಡುತ್ತಿದ್ದ ಗಡ್ಕರಿ, ನನ್ನ ತಂದೆ ಅಥವಾ ಅಜ್ಜಿ ಅಥವಾ ಮುತ್ತಾತ ಈ ದೇಶದ ಪ್ರಧಾನ ಮಂತ್ರಿಗಳಾಗಿರಲಿಲ್ಲ ಎಂದು ಗುಡುಗಿದರು.
PTI


ನಾನು ಪಕ್ಷದ ಓರ್ವ ಸಾಮಾನ್ಯ ಕಾರ್ಯಕರ್ತನಾಗಿದ್ದೆ. ಇಂದು ಅಧ್ಯಕ್ಷನಾಗಿದ್ದೇನೆ. ಇದು ಬಿಜೆಪಿಯಲ್ಲಿ ಮಾತ್ರ ನಡೆಯಲು ಸಾಧ್ಯ. ಕುಟುಂಬ ರಾಜಕಾರಣ ನಡೆಸುತ್ತಿರುವ ಇತರ ಪಕ್ಷಗಳಂತೆ ಬಿಜೆಪಿಯಲ್ಲ. ನನ್ನ ತಂದೆ ಅಥವಾ ಅಜ್ಜಿ ಅಥವಾ ಮುತ್ತಜ್ಜ ಈ ದೇಶದ ಪ್ರಧಾನ ಮಂತ್ರಿಯಾಗಿರಲಿಲ್ಲ. ನಮ್ಮದು ಭಿನ್ನ ಪಕ್ಷ ಎಂದು ನೆಹರೂ ಕುಟುಂಬದತ್ತ ಬೆಟ್ಟು ಮಾಡಿ ತೋರಿಸಿದರು.

ಭಾರತದ ಮಾಜಿ ಪ್ರಧಾನಿಗಳಾದ ರಾಹುಲ್ ಗಾಂಧಿಯವರ ತಂದೆ ರಾಜೀವ್ ಗಾಂಧಿ, ಅಜ್ಜಿ ಇಂದಿರಾ ಗಾಂಧಿ, ಮುತ್ತಜ್ಜ ಜವಾಹರ್ ಲಾಲ್ ನೆಹರು ಅವರ ಕುರಿತೇ ಗಡ್ಕರಿಯವರು ಪರೋಕ್ಷವಾಗಿ ಪ್ರಸ್ತಾಪಿಸಿದ್ದು ಈ ಸಂದರ್ಭದಲ್ಲಿ ಸ್ಪಷ್ಟವಾಗಿತ್ತು.

ಮೂರು ದಿನಗಳ ಕಾಲ ನಡೆಯುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ನಾಳೆ ಮುಕ್ತಾಯಗೊಳ್ಳಲಿದೆ. ಎರಡನೇ ದಿನದ ಕಾರ್ಯಕ್ರಮದ ಆರಂಭದಲ್ಲಿ ಗಡ್ಕರಿ ಭಾಷಣ ಮಾಡುವ ಮೊದಲು ಅವರ ಅಧ್ಯಕ್ಷೀಯತೆಯನ್ನು ರಾಷ್ಟ್ರೀಯ ಕಾರ್ಯಕಾರಿಣಿಯು ಅನುಮೋದಿಸಿತು.

ಪಕ್ಷದ ಹಿರಿಯ ಮುಖಂಡರು ಗಡ್ಕರಿಯವರು ಅಧ್ಯಕ್ಷರಾಗಿರುವುದನ್ನು ಅಭಿನಂದಿಸುತ್ತಾ, ಮಾಲಾರ್ಪಣೆ ಮಾಡಿದರು. ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಇದೇ ತಿಂಗಳು ಅವರು ಅಧಿಕಾರ ವಹಿಸಿಕೊಂಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ