ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಠಾಕ್ರೆ, ರಾಜ್, ರಾಣೆಗೆ ಮಹಾರಾಷ್ಟ್ರ ಸರಕಾರ ಕ್ಲೀನ್ ಚಿಟ್ (Shiv Sena | Bal Thackeray | Raj Thackeray | Congress)
Bookmark and Share Feedback Print
 
ಕಳೆದ ವರ್ಷದ ಪ್ರತ್ಯೇಕ ನಾಲ್ಕು ರಾಜಕೀಯ ಗಲಭೆಗಳಲ್ಲಿ ಶಿವಸೇನೆ ಮುಖ್ಯಸ್ಥ ಬಾಳ ಠಾಕ್ರೆ, ಎಂಎನ್ಎಸ್ ಅಧ್ಯಕ್ಷ ರಾಜ್ ಠಾಕ್ರೆ ಮತ್ತು ಕಾಂಗ್ರೆಸ್ ನಾಯಕ ನಾರಾಯಣ ರಾಣೆ ವಿರುದ್ಧ ಯಾವುದೇ ಸಾಕ್ಷ್ಯಗಳಿಲ್ಲ ಎಂದು ಮಹಾರಾಷ್ಟ್ರ ಸರಕಾರ ಬಾಂಬೆ ಹೈಕೋರ್ಟ್‌ಗೆ ತಿಳಿಸಿದೆ.

ಶಿವಸೇನೆ, ಮಹಾರಾಷ್ಟ್ರ ನವನಿರ್ಮಾಣ ಸೇನೆ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಈ ಎಲ್ಲಾ ಪ್ರಕರಣಗಳಲ್ಲಿ ಹಿಂಸಾಚಾರ ಮತ್ತು ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿ ಮಾಡಿದ್ದರು.

ಯಾವುದೇ ಅಗ್ರ ನಾಯಕರ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತೇ ಎಂದು ಈ ಹಿಂದಿನ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯವು ಪ್ರಶ್ನಿಸಿತ್ತು.

ಈ ಸಂಬಂಧ ಗುರುವಾರ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿದಾವತ್‌ನಲ್ಲಿ ರಾಜ್ಯ ಗೃಹ ಹೆಚ್ಚುವರಿ ಕಾರ್ಯದರ್ಶಿ ಚಂದ್ರ ಅಯ್ಯಂಗಾರ್, 'ಅಗ್ರ ನಾಯಕರು ತಮ್ಮ ಪಕ್ಷದ ಕಾರ್ಯಕರ್ತರುಗಳನ್ನು ದುಷ್ಕೃತ್ಯಗಳನ್ನೆಸಗುವಂತೆ ಪ್ರಚೋದಿಸಿದ್ದಾರೆ ಅಥವಾ ಸಹಾಯ ಮಾಡಿದ್ದಾರೆ ಎಂಬ ಬಗ್ಗೆ ಈ ನಾಲ್ಕು ಪ್ರಕರಣಗಳ ತನಿಖೆ ಸಂದರ್ಭದಲ್ಲಿ ಯಾವುದೇ ಪುರಾವೆಗಳು ಸಿಕ್ಕಿಲ್ಲ. ನಾಯಕರುಗಳು ಘಟನೆಗಳಲ್ಲಿ ಪಾಲ್ಗೊಂಡ ಬಗ್ಗೆ ಅಥವಾ ಪಿತೂರಿ ನಡೆಸಿರುವುದು ಕೂಡ ತನಿಖೆಯಲ್ಲಿ ಕಂಡು ಬಂದಿಲ್ಲ. ಹಾಗಾಗಿ ಯಾವುದೇ ನಾಯಕರನ್ನು ಬಂಧಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿಲ್ಲ' ಎಂದು ತಿಳಿಸಿದ್ದಾರೆ.

ಈ ನಾಲ್ಕು ಪ್ರಕರಣಗಳನ್ನು ಉಲ್ಲೇಖಿಸಿದ್ದ ಮಾಜಿ ಐಪಿಎಸ್ ಅಧಿಕಾರಿ ಜೂಲಿಯೋ ರೋಬಾರಿಯೋ ಎಂಬವರು ಹೈಕೋರ್ಟ್‌ಗೆ ಪತ್ರ ಬರೆದ ಪತ್ರದಲ್ಲಿ, ನಷ್ಟದ ಪರಿಹಾರವನ್ನು ಅಪರಾಧಿಗಳಿಂದಲೇ ಭರಿಸಬೇಕೆಂದು ಹೇಳಿದ್ದರು. ಈ ಪತ್ರವನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂದು ನ್ಯಾಯಾಲಯ ಪರಿಗಣಿಸಿತ್ತು.

ಸಂಸದ ಸಂಜಯ್ ರಾವುತ್ ನೇತೃತ್ವದ ಶಿವಸೇನಾ ಕಾರ್ಯಕರ್ತರ ಗುಂಪು ಕಳೆದ ವರ್ಷದ ಜನವರಿಯಲ್ಲಿ ಮುಂಬೈ ವಿಮಾನ ನಿಲ್ದಾಣದ ಸಮೀಪದ ಹೊಟೇಲ್ ಇಂಟರ್ ಕಾಂಟಿನೆಂಟಲ್ ಮೇಲೆ ಕಾರ್ಮಿಕ ವಿವಾದಕ್ಕೆ ಸಂಬಂಧಪಟ್ಟಂತೆ ದಾಳಿ ನಡೆಸಿತ್ತು. ಅದೇ ತಿಂಗಳಲ್ಲಿ ನಾರಾಯಣ ರಾಣೆಯವರ ವಿರುದ್ಧ 'ನವ ಕಾಲ್' ಎಂಬ ಪತ್ರಿಕೆ ಸಂಪಾದಕೀಯ ಲೇಖನದಲ್ಲಿ ಟೀಕಿಸಿದ್ದನ್ನು ಪ್ರತಿಭಟಿಸಿ ಬೆಂಬಲಿಗರು ಪತ್ರಿಕಾ ಕಚೇರಿ ಮೇಲೆ ದಾಳಿ ನಡೆಸಿದ್ದರು.

ಮೂರನೇ ಪ್ರಕರಣ ಜನವರಿ 28ರಂದು ನಡೆದಿತ್ತು. ಎಂಎನ್ಎಸ್ ಕಾರ್ಯಕರ್ತರು ಮುಂಬೈ ಯುನಿವರ್ಸಿಟಿ ರಿಜಿಸ್ಟ್ರಾರ್ ಅವರ ಕಚೇರಿಯನ್ನು ಧ್ವಂಸಗೊಳಿಸಿತ್ತು. ಮರಾಠಿಯನ್ನು ಐಚ್ಛಿಕ ವಿಷಯವನ್ನಾಗಿ ಮಾಡಲಾಗುತ್ತದೆ ಎಂಬ ಗಾಳಿ ಸುದ್ದಿ ಹಿನ್ನೆಲೆಯಲ್ಲಿ ಈ ದಾಳಿ ನಡೆದಿತ್ತು.

ನಂತರ ಪೆಬ್ರವರಿಯಲ್ಲಿ ಪುಣೆ ಸಮೀಪದ ಬ್ಯೂಟಿ ಪಾರ್ಲರ್ ಒಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂದು ಆರೋಪಿಸಿ ಎಂಎನ್ಎಸ್ ಕಾರ್ಯಕರ್ತರು ದಾಂಧಲೆ ನಡೆಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ