ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತೆಲಂಗಾಣ ವಿವಾದ; ಶ್ರೀಕೃಷ್ಣ ಸಮಿತಿಯಿಂದ ಅಭಿಪ್ರಾಯ ಸಂಗ್ರಹ (Srikrishna committee | Telangana | political parties | Andhra Pradesh)
Bookmark and Share Feedback Print
 
ಪ್ರತ್ಯೇಕ ತೆಲಂಗಾಣ ರಾಜ್ಯ ಮತ್ತು ಅಖಂಡ ಆಂಧ್ರಪ್ರದೇಶ ಕುರಿತಂತೆ ಕೇಂದ್ರ ಸರಕಾರ ನೇಮಕ ಮಾಡಿರುವ ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ಸಮಿತಿಯ ಕಾರ್ಯದ ಭಾಗವಾಗಿ ಶನಿವಾರ ಸಾರ್ವಜನಿಕರು, ರಾಜಕೀಯ ಪಕ್ಷಗಳು ಮತ್ತು ಇತರ ಸಮಾಜ ಸೇವಾ ಸಂಘಟನೆಗಳ ಅಭಿಪ್ರಾಯಗಳನ್ನು ಕೋರಿ ಪತ್ರಿಕೆಗಳಲ್ಲಿ ನೊಟೀಸ್ ಪ್ರಕಟಿಸುವ ಸಾಧ್ಯತೆಗಳಿವೆ.

ನ್ಯಾಯಮೂರ್ತಿ ಶ್ರೀಕೃಷ್ಣ ಅವರು ತೆಲಂಗಾಣ ವಿರೋಧಿ ಮತ್ತು ಪರ ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳ ಜತೆ ಮಾತುಕತೆ ನಡೆಸಲು ಮುಂದಿನ ತಿಂಗಳು ಹೈದರಾಬಾದ್‌ಗೆ ಪ್ರಯಾಣ ಬೆಳೆಸಲಿದ್ದಾರೆ.

ಫೆಬ್ರವರಿ ಮೂರರಂದು ಕೇಂದ್ರ ಸರಕಾರವು ನೇಮಿಸಿದ್ದ ಐದು ಸದಸ್ಯರ ಸಮಿತಿಯು ಫೆಬ್ರವರಿ 13ರಂದು ಮೊದಲ ಸಭೆ ನಡೆಸಿದ್ದು, ಫೆಬ್ರವರಿ 25ರಂದು ಮತ್ತೆ ಮುಖಾಮುಖಿಯಾಗಲಿದೆ. ಆಂಧ್ರಪ್ರದೇಶದಲ್ಲಿ ರಾಜಕೀಯ ಪಕ್ಷಗಳು ಮತ್ತು ಇತರ ಸಂಘಟನೆಗಳಲ್ಲಿ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಕುರಿತು ಮೂಡಿರುವ ಭಿನ್ನಾಭಿಪ್ರಾಯಗಳ ಕುರಿತ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ತಯಾರಿಸಬೇಕಾದ ವರದಿಗಾಗಿ ಹೇಗೆ ತಯಾರಿ ನಡೆಸಬೇಕು ಎಂಬ ಕುರಿತು ಈ ಸಭೆಯಲ್ಲಿ ಚರ್ಚೆ ನಡೆಯಲಿದೆ.

ಅಖಂಡ ಆಂಧ್ರಪ್ರದೇಶದ ಬೇಡಿಕೆಗಳನ್ನೂ ಪರಿಶೀಲಿಸುವ ನಿಬಂಧನೆಗಳನ್ನು ಹೊತ್ತಿರುವ ಸಮಿತಿಯ ಸದಸ್ಯ ಹಾಗೂ ಕಾರ್ಯದರ್ಶಿಯಾಗಿರುವ (ಇವರು ಮಾಜಿ ಗೃಹ ಕಾರ್ಯದರ್ಶಿಯೂ ಹೌದು) ವಿನೋದ್ ಕೆ. ದುಗ್ಗಲ್ ಮಾತನಾಡುತ್ತಾ, ಈ ಸಂಬಂಧ ದೆಹಲಿಯ ಇಂಗ್ಲೀಷ್ ದಿನಪತ್ರಿಕೆಗಳಲ್ಲಿ ಹಾಗೂ ಆಂಧ್ರಪ್ರದೇಶದ ತೆಲುಗು, ಇಂಗ್ಲೀಷ್, ಉರ್ದು ಮತ್ತು ಹಿಂದಿ ದಿನಪತ್ರಿಕೆಗಳಲ್ಲಿ ಸಾರ್ವಜನಿಕ ನೊಟೀಸುಗಳನ್ನು ಪ್ರಕಟಿಸಲಾಗುತ್ತದೆ ಎಂದಿದ್ದಾರೆ.

ಈ ಸಾರ್ವಜನಿಕ ನೊಟೀಸನ್ನು ಬಹುಶಃ ಫೆಬ್ರವರಿ 20ರಂದು ಬಿಡುಗಡೆ ಮಾಡಲಾಗುತ್ತದೆ. ಈ ನೊಟೀಸಿನಲ್ಲಿ ಸಮಿತಿ ಹೊಂದಿರುವ ಷರತ್ತುಗಳು ಹಾಗೂ ನಿಬಂಧನೆಗಳನ್ನು ನಮೂದಿಸಲಾಗಿರುತ್ತದೆ. ಆಂಧ್ರಪ್ರದೇಶದ ಎಲ್ಲಾ ಪ್ರಾಂತ್ಯಗಳ ಜನತೆ ತಮ್ಮ ಅಭಿಪ್ರಾಯ ಮತ್ತು ಸಲಹೆಗಳನ್ನು ಇದರಲ್ಲಿ ಆಹ್ವಾನಿಸಲಾಗುತ್ತದೆ. ಈ ನೊಟೀಸನ್ನು ಅಂತಿಮಗೊಳಿಸುವ ಮೊದಲು ಹಲವು ಬಾರಿ ಸಮಿತಿಯ ಅಧ್ಯಕ್ಷರನ್ನು ಭೇಟಿ ಮಾಡಿದ್ದೇನೆ ಎಂದು ದುಗ್ಗಲ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ