ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನನ್ನ ರಾಷ್ಟ್ರೀಯತೆಯನ್ನು ಪ್ರಶ್ನಿಸಿದಾಗ ನೋವಾಗಿತ್ತು: ಶಾರೂಖ್ (Indianness | Shah Rukh Khan | Shiv Sena | Pakistani cricketers)
Bookmark and Share Feedback Print
 
ಐಪಿಎಲ್‌ನಲ್ಲಿ ಪಾಕಿಸ್ತಾನ ಆಟಗಾರರನ್ನು ಬೆಂಬಲಿಸಿದ ನಂತರ ಶಿವಸೇನೆಯಿಂದ ಭಾರೀ ಪ್ರತಿರೋಧ ಎದುರಿಸಿದ ಶಾರೂಖ್ ಖಾನ್, ತನ್ನ ರಾಷ್ಟ್ರೀಯತೆಯನ್ನು ಪದೇ ಪದೇ ಪ್ರಶ್ನಿಸಿದ್ದು ತೀವ್ರ ನೋವನ್ನುಂಟು ಮಾಡಿತ್ತು ಎಂದು ತಿಳಿಸಿದ್ದಾರೆ.

ದೇಶದ ಕಾನೂನು ಅವಕಾಶ ನೀಡುವಾಗ ಐಪಿಎಲ್‌ನಲ್ಲಿ ಪಾಕಿಸ್ತಾನಿ ಆಟಗಾರರನ್ನು ಸೇರಿಸಿಕೊಳ್ಳದೇ ಇದ್ದದ್ದು ತಪ್ಪು, ನನ್ನ ತಂಡದಲ್ಲೇನಾದರೂ ಖಾಲಿ ಜಾಗ ಇದ್ದಿದ್ದರೆ ನಾನು ಗಡಿಯಾಚೆಗಿನ ಆಟಗಾರರನ್ನು ಆರಿಸಿಕೊಳ್ಳುತ್ತಿದ್ದೆ ಎಂದು ಶಾರೂಖ್ ಹೇಳಿದ್ದರು.

ಆದರೆ ಇದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಇದೇ ಕಾರಣದಿಂದ ಅವರ 'ಮೈ ನೇಮ್ ಈಸ್ ಖಾನ್' ಚಿತ್ರ ಬಿಡುಗಡೆಗೂ ಅಡ್ಡಿಪಡಿಸುವ ಬೆದರಿಕೆ ಹಾಕಲಾಗಿತ್ತು. ಆದರೆ ಮಹಾರಾಷ್ಟ್ರ ಸರಕಾರ ಸಂಪೂರ್ಣ ಭದ್ರತೆ ನೀಡಿದ ಕಾರಣ ಶಿವಸೇನೆಯ ತಂತ್ರ ವಿಫಲಗೊಂಡಿತ್ತು.

ಈ ವಿವಾದದ ಹಿಂದಿನ ತರ್ಕವೇ ನನಗೆ ಅರ್ಥವಾಗುತ್ತಿಲ್ಲ. ಶಿವಸೇನೆಯು ನನ್ನ ಚಿತ್ರದಲ್ಲಿ ಏನಾದರೂ ಸಮಸ್ಯೆಗಳು ಅಥವಾ ಹಾನಿಕಾರಕ ವಿಚಾರಗಳಿದ್ದರೆ ನಾನು ಕ್ಷಮೆ ಯಾಚಿಸುತ್ತಿದ್ದೆ. ಈ ಹಿಂದೆಯೂ ನಾನು ಅದನ್ನು ಮಾಡಿದ್ದೇನೆ. ಯಾಕೆಂದರೆ ನನ್ನ ಚಿತ್ರಗಳಿಂದ ಮತ್ತೊಬ್ಬರಿಗೆ ನೋವುಂಟು ಮಾಡುವುದನ್ನು ನಾನು ಬಯಸುವುದಿಲ್ಲ. ನನ್ನ ಗುರಿ ಏನಿದ್ದರೂ ಜನರನ್ನು ರಂಜಿಸುವುದು ಎಂದು ಶಾರೂಖ್ ವಿವಾದದ ಬಗ್ಗೆ ಮತ್ತೆ ಮಾತಿಗಿಳಿದಿದ್ದಾರೆ.

ಆದರೆ ಇಲ್ಲಿ ನನ್ನ ವ್ಯಕ್ತಿತ್ವ ಮತ್ತು ನನ್ನ ರಾಷ್ಟ್ರೀಯತೆಯನ್ನೇ ಪ್ರಶ್ನಿಸಲಾಯಿತು. ನನ್ನನ್ನು ಪದೇ ಪದೇ ಇದಕ್ಕೆ ಸ್ಪಷ್ಟನೆ ಬಯಸಿದಾಗ ನನಗಿದು ತೀವ್ರವಾಗಿ ನೋವುಂಟು ಮಾಡಿತ್ತು ಎಂದು ವಾರ್ತಾವಾಹಿನಿಯೊಂದರ ಜತೆ ಮಾತನಾಡುತ್ತಾ ಚಿತ್ರನಟ ವಿವರಣೆ ನೀಡಿದ್ದಾರೆ.

ಶಿವಸೇನೆಯ ನಾಯಕರ ಬಗ್ಗೆ ನನಗೆ ಉನ್ನತ ಗೌರವವಿದೆ. ಆದರೆ ರಾಜಕೀಯ ಮತ್ತು ದೇಶಭಕ್ತಿಯನ್ನು ಮನರಂಜನೆಯ ಜತೆ ಮಿಳಿತಗೊಳಿಸಬಾರದಿತ್ತು ಎಂದರು.

ಅವರು ನನಗಿಂತ ತುಂಬಾ ಹಿರಿಯರು. ಅವರೆಡೆಗೆ ನನ್ನಲ್ಲಿ ಶ್ರೇಷ್ಠ ಗೌರವವಿದೆ. ಆದರೆ ವಿವಾದಕ್ಕೆ ನನ್ನ ಚಿತ್ರವನ್ನು ಯಾಕೆ ತರಲಾಯಿತು ಎನ್ನುವುದು ನನಗೆ ಅರ್ಥವಾಗಲಿಲ್ಲ. ಮನರಂಜನೆ ಮತ್ತು ರಾಜಕೀಯವನ್ನು ಮಿಶ್ರಣಗೊಳಿಸಬಾರದು ಎಂಬ ನಂಬಿಕೆಯಿಟ್ಟವರಲ್ಲಿ ನಾನೂ ಒಬ್ಬ ಎಂದು ಶಾರೂಖ್ ತಿಳಿಸಿದ್ದಾರೆ.

ನನ್ನ ಭಾರತೀಯತೆಯನ್ನು (ರಾಷ್ಟ್ರೀಯತೆ) ಯಾಕೆ ಪ್ರಶ್ನಿಸಲಾಯಿತು ಎಂದು ನನಗೆ ಅರ್ಥವಾಗಲಿಲ್ಲ. ನನ್ನ ತಂದೆ ಓರ್ವ ಸ್ವಾತಂತ್ರ್ಯ ಹೋರಾಟಗಾರರಾಗಿದ್ದವರು. ಇದರ ಬಗ್ಗೆ ನನಗೆ ಶ್ರೇಷ್ಠ ಹೆಮ್ಮೆಯಿದೆ ಎಂದರು.

ಪಾಕಿಸ್ತಾನೀಯರನ್ನು ಬೆಂಬಲಿಸುವ ಶಾರೂಖ್ ದೇಶದ್ರೋಹಿ ಎಂದು ಶಿವಸೇನೆ ವರಿಷ್ಠ ಬಾಳ್ ಠಾಕ್ರೆ ಜರೆದಿದ್ದರಲ್ಲದೆ, ಅವರ ಚಿತ್ರವನ್ನು ಹಿಂದೂಗಳು ನೋಡಬಾರದು ಎಂದು ಫರ್ಮಾನು ಹೊರಡಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ