ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಖಾಸಗಿ ಶಾಲೆಗಳು ಬೇಕಾದಷ್ಟು ಶುಲ್ಕ ವಿಧಿಸಬಹುದು: ಕೇಂದ್ರ (Private schools | fees | Union HRD minister | Kapil Sibal)
Bookmark and Share Feedback Print
 
ಶಾಲಾ ಶುಲ್ಕಗಳನ್ನು ನಿಯಂತ್ರಿಸಲು ಹೆತ್ತವರು ವಿವಿಧ ವೇದಿಕೆಗಳ ಮೂಲಕ ಹರಸಾಹಸ ಪಡುತ್ತಿದ್ದರೆ, ಇತ್ತ ಕೇಂದ್ರ ಸರಕಾರ ಖಾಸಗಿ ಶಾಲೆಗಳಿಗೆ ಶುಲ್ಕ ವಿಧಿಸುವ ವಿಚಾರದಲ್ಲಿ ಸಂಪೂರ್ಣ ಸ್ವಾತಂತ್ರ್ಯ ನೀಡಲಿದೆ.

ಖಾಸಗಿ ಶಾಲೆಗಳ ಶುಲ್ಕವನ್ನು ನಿಯಂತ್ರಿಸುವುದಿಲ್ಲ. ಪ್ರತೀ ಶಾಲೆಗಳೂ ತಮ್ಮ ಶಿಕ್ಷಕರಿಗೆ ಎಷ್ಟು ವೇತನ ಕೊಡಬೇಕು ಎಂಬ ಸ್ವಾತಂತ್ರ್ಯವನ್ನೂ ಹೊಂದಿವೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ತಿಳಿಸಿದ್ದಾರೆ.

1973ರ ದೆಹಲಿ ಶಾಲಾ ಶಿಕ್ಷಣ ಕಾಯ್ದೆಯ ಪ್ರಕಾರ ಸರಕಾರಿ ಶಾಲೆಗಳಲ್ಲಿ ಶಿಕ್ಷಕರಿಗೆ ನೀಡುವ ವೇತನಕ್ಕಿಂತ ಖಾಸಗಿ ಶಾಲೆಯ ಶಿಕ್ಷಕರ ವೇತನ ಕಡಿಮೆಯಿರಬಾರದು ಎಂದು ಷರತ್ತಿಗೆ ಸಿಬಲ್ ಅವರ ಹೇಳಿಕೆ ಸಂಪೂರ್ಣ ವಿರುದ್ಧವಾಗಿದೆ. ಆದರೆ ಕೇಂದ್ರದ 'ಶಿಕ್ಷಣದ ಹಕ್ಕು' (ಆರ್‌ಟಿಇ) ಕಾಯ್ದೆ ಜಾರಿಗೊಂಡಾಗ ರಾಜ್ಯದ ಕಾನೂನು ತನ್ನಿಂತಾನೆ ಮಹತ್ವ ಕಳೆದುಕೊಳ್ಳಲಿದೆ; ಇದೇ ವರ್ಷದ ಏಪ್ರಿಲ್ 1ರಿಂದ ಇದು ಜಾರಿಗೆ ಬರಲಿದೆ ಎಂದು ಸಿಬಲ್ ತಿಳಿಸಿದ್ದಾರೆ.

ಶಿಕ್ಷಕರ ಸಂಭಾವನೆ ಕುರಿತು ಮಾತನಾಡುತ್ತಾ ಅವರು, 'ಆರ್‌ಟಿಇಯಲ್ಲಿ ಇಂತಹ ಯಾವುದೇ ನಿಬಂಧನೆಗಳಿಲ್ಲ. ಸರಕಾರದ ಒಪ್ಪಿಗೆಯಂತೆ ಖಾಸಗಿ ಶಾಲೆಗಳ ಶಿಕ್ಷಕರಿಗೆ ವೇತನ ನೀಡಬೇಕಾಗಿಲ್ಲ. ಅವರಿಗೆ ಎಷ್ಟು ಬೇಕೋ, ಅಷ್ಟು ವೇತನವನ್ನು ನೀಡಬಹುದಾಗಿದೆ' ಎಂದರು.

ಅದೇ ಹೊತ್ತಿಗೆ ಆರನೇ ವೇತನ ಆಯೋಗದ ನಿಯಮದಂತೆ ಎಲ್ಲಾ ಶಾಲೆಗಳು ತಮ್ಮ ಶಿಕ್ಷಕರಿಗೆ 22,000 ರೂಪಾಯಿ ಕನಿಷ್ಠ ವೇತನ ನೀಡಬೇಕಾಗಿಲ್ಲ. ಆದರೆ ಶಿಕ್ಷಕರ ಅರ್ಹತೆಯ ಬಗ್ಗೆ ಯಾವುದೇ ರಾಜಿಗೆ ಅವಕಾಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇನ್ನು ನಗರಗಳಲ್ಲಿನ ಖಾಸಗಿ ಶಾಲೆಗಳು ತಮ್ಮ ಶಿಕ್ಷಕರ ವೇತನವನ್ನು ನಿರ್ಧರಿಸಲು ಸ್ವತಂತ್ರವಾಗಿದ್ದು, ವಿದ್ಯಾರ್ಥಿಗಳಿಗೆ ವಿಧಿಸಲಾಗುವ ಶುಲ್ಕದಲ್ಲಿ ಕೂಡ ಯಾವುದೇ ನಿಯಂತ್ರಣವನ್ನು ಸರಕಾರ ಹೊಂದಿರುವುದಿಲ್ಲ ಎಂದು ಸಚಿವರ ಈ ನೂತನ ಹೇಳಿಕೆಯು ಸ್ಪಷ್ಟಪಡಿಸಿದೆ. ಇದು ಹೆತ್ತವರ ತೀವ್ರ ಪ್ರತಿರೋಧಕ್ಕೆ ಕಾರಣವಾಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ.

ಆರನೇ ವೇತನ ಆಯೋಗ ಜಾರಿಯಾದ ನಂತರ 2008ರ ಮಧ್ಯಭಾಗದಲ್ಲಿ ಶಾಲೆಗಳು ತಮ್ಮ ಶಿಕ್ಷಕರಿಗೆ ಹೆಚ್ಚುವರಿ ವೇತನ ನೀಡಲು ಹೆಚ್ಚು ಸಂಪಾದನೆ ಮಾಡುವ ಅಂಗವಾಗಿ ಶುಲ್ಕವನ್ನು ಇದ್ದಕ್ಕಿದ್ದಂತೆ ಹೆಚ್ಚಿಸಿದ್ದವು. ಕಳೆದ ವರ್ಷ ಈ ಖಾಸಗಿ ಶಾಲೆಗಳ ವಿರುದ್ಧ ಹೆತ್ತವರು ಭಾರೀ ಪ್ರತಿಭಟನೆಯನ್ನೂ ನಡೆಸಿದ್ದರು.

ವಿದ್ಯಾರ್ಥಿಗಳಿಗೆ ಶಾಲೆಗಳು ವಿಧಿಸುವ ಶುಲ್ಕದ ಬಗ್ಗೆ ವಿವರಣೆ ನೀಡುತ್ತಾ ಸಿಬಲ್, 'ಖಾಸಗಿ ಶಾಲೆಗಳ ಶುಲ್ಕಗಳಿಗೆ ಷರತ್ತು ವಿಧಿಸಬಾರದು ಎಂದು ಸುಪ್ರೀಂ ಕೋರ್ಟ್ ಕೂಡ ಹೇಳಿದೆ. ಇದುವರೆಗೆ ಕೆಲವು ರಾಜ್ಯ ಸರಕಾರಗಳು ಇಂತಹ ಕಾಯ್ದೆಗಳನ್ನು ಜಾರಿಗೊಳಿಸಿವೆ' ಎಂದರು.
ಸಂಬಂಧಿತ ಮಾಹಿತಿ ಹುಡುಕಿ