ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ರೊಫೆಸರ್ ಸಲಿಂಗಕಾಮ; ಮುಸ್ಲಿಂ ವಿ.ವಿ.ಯಿಂದ ಅಮಾನತು (Aligarh Muslim University | professor | sex with rickshaw-puller | Shrinivas Ramchandra)
Bookmark and Share Feedback Print
 
ಆಲಿಘಢ ಮುಸ್ಲಿಂ ವಿಶ್ವವಿದ್ಯಾಲಯದ ನಿವೃತ್ತಿಯಂಚಿನಲ್ಲಿದ್ದ ಪ್ರೊಫೆಸರ್ ಒಬ್ಬರು ರಿಕ್ಷಾವಾಲಾನೊಬ್ಬನ ಜತೆ ಕಾಲೇಜು ಕ್ಯಾಂಪಸ್ಸಿನಲ್ಲೇ ಸೆಕ್ಸ್ ನಡೆಸುತ್ತಿದ್ದಾಗ ವಿದ್ಯಾರ್ಥಿಗಳ ಕೈಗೆ ಸಿಕ್ಕಿಬಿದ್ದಿದ್ದು, ಅಮಾನತಿಗೊಳಗಾಗಿದ್ದಾರೆ.

ಆಲಿಘಢ ಮುಸ್ಲಿಂ ಯುನಿವರಿರ್ಸಿಟಿಯಲ್ಲಿ 'ಭಾರತದ ಆಧುನಿಕ ಭಾಷೆಗಳು' ವಿಭಾಗದ ಅಧ್ಯಕ್ಷ ಹಾಗೂ ರೀಡರ್ ಆಗಿದ್ದ ಡಾ. ಶ್ರೀನಿವಾಸ್ ರಾಮಚಂದ್ರ ಸಿರಸ್ ಅವರು ಹೊರಗಿನ ವ್ಯಕ್ತಿಯೊಬ್ಬನ ಜತೆ ಸಲಿಂಗಕಾಮ ನಡೆಸುತ್ತಿದ್ದ ವೇಳೆ ವಿದ್ಯಾರ್ಥಿಗಳನ್ನು ಇದನ್ನು ವೀಡಿಯೋ ಶೂಟಿಂಗ್ ಮಾಡಿದ್ದರು. ಬಳಿಕ ವಿಶ್ವವಿದ್ಯಾಲಯದ ಉನ್ನತ ಅಧಿಕಾರಿಗಳಿಗೆ ಇದನ್ನು ಕಳುಹಿಸಿದ್ದರು.

ರಿಕ್ಷಾವಾಲಾನ ಜತೆ ಲೈಂಗಿಕ ಚಟುವಟಿಕೆ ನಡೆಸುತ್ತಿದ್ದಾಗ ಅದನ್ನು ವೀಡಿಯೋ ಚಿತ್ರೀಕರಣ ಮಾಡಲಾಗಿತ್ತು. ಈ ರೀತಿಯ ಯಾವುದೇ ಪ್ರಕರಣವನ್ನು ವಿದ್ಯಾಲಯದ ಕ್ಷಮಿಸಲು ಸಾಧ್ಯವಿಲ್ಲ. ಹೀಗಾಗಿ ಅವರನ್ನು ಫೆಬ್ರವರಿ 9ರಿಂದ ಅಮಾನತುಗೊಳಿಸಲಾಗಿದೆ ಎಂದು ಆಲಿಘಢ ಮುಸ್ಲಿಂ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಪಿ.ಕೆ. ಅಬ್ದುಲ್ ಅಜೀಜ್ ತಿಳಿಸಿದ್ದಾರೆ.

ಯುನಿವರ್ಸಿಟಿ ಕ್ಯಾಂಪಸ್ಸಿನಲ್ಲೇ ತನಗೆ ನೀಡಲಾಗಿದ್ದ ಮನೆಯಲ್ಲಿ ಫೆಬ್ರವರಿ 8ರಂದು ಸಿರಸ್ ಅವರು ನಗರದ ಜಮಾಲ್‌ಪುರ ಪ್ರದೇಶದ ಯುವ ರಿಕ್ಷಾವಾಲಾನ ಜತೆ ತಂಗಿದ್ದರು. ಅವರು ಮನೆಯಲ್ಲಿ ಚಟುವಟಿಕೆ ನಡೆಸುವಾಗ ಬಾಗಿಲು ಹಾಕಿರದ ಕಾರಣ ಸ್ಥಳೀಯ ಟೀವಿ ಚಾನೆಲ್‌ನ ಇಬ್ಬರು ವರದಿಗಾರರು ಇದನ್ನು ಚಿತ್ರೀಕರಿಸಿದ್ದರು. ಬಳಿಕ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅವರು ವಿವರಣೆ ನೀಡಿದ್ದಾರೆ.

ಗಂಭೀರ ಆರೋಪ ತನ್ನ ಮೇಲೆ ಬಂದಿದ್ದರೂ ಯುನಿವರ್ಸಿಟಿ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸುವ ಯಾವುದೇ ಇಚ್ಛೆ ಸಿರಸ್ ಅವರಿಗೆ ಇದ್ದಂತಿಲ್ಲ. ಪತ್ರಿಕೆಯೊಂದರ ಜತೆ ದೂರವಾಣಿಯಲ್ಲಿ ಮಾತನಾಡುತ್ತಿದ್ದ ಅವರು, 'ತನಿಖೆ ನಡೆಸುತ್ತಿರುವ ಸಮಿತಿಗೆ ಮೇಲ್ಮನವಿ ಸಲ್ಲಿಸುವುದಿಲ್ಲ. ಅವರೇನು ಮಾಡುತ್ತಾರೋ ಮಾಡಲಿ. ಇದಕ್ಕೆ ಸಂಬಂಧಪಟ್ಟಂತೆ ಯಾವುದೇ ಸ್ಪಷ್ಟನೆ ನೀಡಲಾರೆ. ಯಾರಾದರೂ ನಿಮ್ಮನ್ನು ನಿಂದಿಸುತ್ತಿದ್ದಾಗ ನೀವು ಮರಳಿ ನಿಂದಿಸುವುದು ಸರಿಯಲ್ಲ. ಈಗಾಗಲೇ ನಿವೃತ್ತಿಯ ಅಂಚಿನಲ್ಲಿದ್ದೇನೆ. ಹಾಗಾಗಿ ಇದರ ಬಗ್ಗೆ ಹೆಚ್ಚಿನ ಚಿಂತೆ ಮಾಡುವುದಿಲ್ಲ' ಎಂದಿದ್ದಾರೆ.

ಸಿರಸ್ ಮೇಲ್ಮನವಿ ಸಲ್ಲಿಸದೇ ಇರಲು ನಿರ್ಧರಿಸಿರುವುದು ಯುನಿವರ್ಸಿಟಿಗೇ ಹೆಚ್ಚು ಖುಷಿ ತಂದಿದೆ. ಅಲ್ಲದೆ ಕಾನೂನು ಹೋರಾಟ ಮಾಡುತ್ತಿದ್ದರೆ, ಪ್ರಸಕ್ತ ದೇಶದಲ್ಲಿ ಸಲಿಂಗಕಾಮ ಅಪರಾಧವಲ್ಲ; ಅಷ್ಟಕ್ಕೂ ಅವರು ಸಾರ್ವಜನಿಕ ಪ್ರದೇಶದಲ್ಲಿ ತಮ್ಮ ಚಟುವಟಿಕೆ ನಡೆಸಿಲ್ಲ. ಹಾಗಾಗಿ ವಿಶ್ವವಿದ್ಯಾಲಯ ರಾಷ್ಟ್ರ ಮಟ್ಟದಲ್ಲಿ ಅವಮಾನಕ್ಕೊಳಗಾಗುವುದು ತಪ್ಪಿ ಹೋಗಿದೆ ಎಂಬಷ್ಟಕ್ಕೆ ವಿಶ್ವವಿದ್ಯಾಲಯ ನಿಟ್ಟುಸಿರು ಬಿಟ್ಟಿದೆ.
ಸಂಬಂಧಿತ ಮಾಹಿತಿ ಹುಡುಕಿ