ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಿಜೆಪಿಯಿಂದ ಹುತಾತ್ಮ ಕರಸೇವಕರಿಗೆ ಅವಮಾನ: ಠಾಕ್ರೆ ಗುಡುಗು (Ram temple | Shiv Sena | BJP | Bal Thackeray, Saamna)
Bookmark and Share Feedback Print
 
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಿಸಲು ಮುಸ್ಲಿಮರು ಉದಾರಿಗಳಾಗುವ ಮೂಲಕ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿಯವರ ಹೇಳಿಕೆಯನ್ನು ಖಂಡಿಸಿರುವ ಶಿವಸೇನೆ, ಇದು ಹುತಾತ್ಮರಾದ ನೂರಾರು ಕರಸೇವಕರಿಗೆ ಬಗೆದ ಅಪಮಾನ ಎಂದು ಬಣ್ಣಿಸಿದೆ.

ರಾಮ ಮಂದಿರ ನಿರ್ಮಾಣಕ್ಕೆ ಸಹಕಾರ ನೀಡಬೇಕು ಎಂದು ಮುಸ್ಲಿಮರಲ್ಲಿ ಮನವಿ ಮಾಡಿರುವುದು ಅಯೋಧ್ಯೆ ಚಳುವಳಿಯಲ್ಲಿ ತಮ್ಮ ಪ್ರಾಣಗಳನ್ನೇ ಪಣವಾಗಿಟ್ಟ ನೂರಾರು ಕರಸೇವಕರಿಗೆ ಮಾಡಿದ ಅವಮಾನ ಎಂದು ಶಿವಸೇನೆ ಮುಖವಾಣಿ 'ಸಾಮ್ನಾ'ದಲ್ಲಿ ಬಾಳ ಠಾಕ್ರೆ ಬಿಜೆಪಿ ನಿಲುವನ್ನು ಟೀಕಿಸಿದ್ದಾರೆ.

ಅದೇ ಹೊತ್ತಿಗೆ ಅವರು ಬಿಜೆಪಿಯು ಹಿಂದುತ್ವ ಸಿದ್ಧಾಂತಕ್ಕೆ ಅಂಟಿಕೊಳ್ಳಬೇಕೆಂಬ ಪ್ರಾಮಾಣಿಕ ಮನವಿಯನ್ನೂ ಮಾಡಿದ್ದಾರೆ.

ಭಾರತದ ಸಂಪತ್ತುಗಳ ಮೇಲೆ ಮೊದಲ ಹಕ್ಕಿರುವುದು ಮುಸ್ಲಿಮರಿಗೆ ಎಂದು ಈ ದೇಶದ ಪ್ರಧಾನ ಮಂತ್ರಿಯವರು ಹೇಳುತ್ತಾರೆ. ಇದನ್ನು 80 ಕೋಟಿ ಹಿಂದೂಗಳು ತೀರಾ ನಮ್ರರಾಗಿ ಸಹಿಸಿಕೊಳ್ಳುತ್ತಾರೆ. ಮುಸ್ಲಿಮರಿಗೆ ಎಲ್ಲವೂ ಲಭ್ಯ, ಆದರೆ ಹಿಂದೂಗಳಿಗೆ ಕನಿಷ್ಠ ಒಂದು ರಾಮ ಮಂದಿರಕ್ಕೂ ಅವಕಾಶವಿಲ್ಲ. ಪರಿಸ್ಥಿತಿ ಎಲ್ಲಿಯವರೆಗೆ ಬಂದು ಮುಟ್ಟಿದೆ ಎಂದರೆ, ನಮಗೆ ರಾಮ ಮಂದಿರ ಕಟ್ಟಲು ಅವಕಾಶ ಮಾಡಿಕೊಡಿ ಎಂದು ಮುಸ್ಲಿಮರಲ್ಲಿ ಬೇಡಿಕೊಳ್ಳುವವರೆಗೆ ಎಂದು ಠಾಕ್ರೆ ವ್ಯಂಗ್ಯವಾಡಿದ್ದಾರೆ.

ಗಡ್ಕರಿಯವರು ಮುಸ್ಲಿಮರಲ್ಲಿ ಮನವಿ ಮಾಡಿಕೊಂಡಿದ್ದಾರೆ. ನಿಜಕ್ಕೂ ಅವರು ಮನವಿ ಮಾಡಿಕೊಂಡಿರುವುದು ಭಾರತದಲ್ಲಿಲ್ಲದ, ಆದರೆ ಪಾಕಿಸ್ತಾನದಲ್ಲಿರುವ ಮೂಲಭೂತವಾದಿ ಮತ್ತು ಜಿಹಾದಿ ಮುಸ್ಲಿಮರ ನಾಯಕತ್ವವನ್ನು, ಭಯೋತ್ಪಾದನಾ ಸಂಘಟನೆಗಳನ್ನು ನಿಯಂತ್ರಿಸುತ್ತಿರುವವರನ್ನು ಮತ್ತು ಭಾರತದಲ್ಲಿನ ಮುಸ್ಲಿಮರು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂದೆಲ್ಲ ನಿರ್ದೇಶಿಸುತ್ತಿರುವವರನ್ನು ಎಂದು ಸೇನಾ ವರಿಷ್ಠ ತನ್ನದೇ ರಾಜ್ಯದ ಗಡ್ಕರಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ರಾಮ ಮಂದಿರ ನಿರ್ಮಾಣಕ್ಕೆ ಮುಸ್ಲಿಮರ ಅನುಮತಿಯನ್ನು ಪಡೆಯುವ ಅಗತ್ಯವಿದ್ದರೆ ಅಯೋಧ್ಯಾ ಚಳುವಳಿಯನ್ನು ಯಾಕೆ ಮೊದಲು ನಡೆಸಲಾಯಿತು ಎಂದು ಠಾಕ್ರೆ ಇದೇ ಸಂದರ್ಭದಲ್ಲಿ ಪ್ರಶ್ನಿಸಿದ್ದಾರೆ.

ಜಾಮಾ ಮಸೀದಿಯಲ್ಲಿನ ಇಮಾಮ್ ಕಾಲ ಬುಡದಲ್ಲಿ ಬಿದ್ದು ರಾಮ ಮಂದಿರ ನಿರ್ಮಾಣಕ್ಕೆ ಒಂದು ತುಂಡು ಭೂಮಿಯನ್ನು ನೀಡಬೇಕು ಎಂದು ಹಿಂದೂಗಳು ಬೇಡಬಹುದಿತ್ತು. ಆ ಮೂಲಕ ಸುಲಭವಾಗಿ ಸಮಸ್ಯೆ ಬಗೆಹರಿಯುತ್ತಿತ್ತು. ಆದರೆ ರಾಮ ಮಂದಿರಕ್ಕಾಗಿ ಹಿಂದೂಗಳು ತಮ್ಮ ರಕ್ತವನ್ನು ಹರಿಸಿದ್ದಾರೆ ಎಂದು ಸಂಪಾದಕೀಯದಲ್ಲಿ ಠಾಕ್ರೆ ವ್ಯಂಗ್ಯವಾಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ