ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಾಜಿ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್ ನಾಪತ್ತೆಯಾಗಿದ್ದಾರೆ! (Ex-defence minister | George Fernandes | Alzheimer's disease | JDU)
Bookmark and Share Feedback Print
 
ಭಾರತ ರಾಜಕಾರಣದ ವರ್ಣರಂಜಿತ ಹಾಗೂ ಪ್ರಭಾವಿ ರಾಜಕೀಯ ನಾಯಕರೆಂದೇ ಖ್ಯಾತರಾಗಿದ್ದ ಮಾಜಿ ರಕ್ಷಣಾ ಸಚಿವ ಮಂಗಳೂರು ಮೂಲದ ಜಾರ್ಜ್ ಫೆರ್ನಾಂಡಿಸ್ ಕಾಣೆಯಾಗಿದ್ದಾರೆ.

ಫೆರ್ನಾಂಡಿಸ್ ಅವರಿಗೆ ಚಿಕಿತ್ಸೆ ನೀಡುವ ನೆಪದಿಂದ ಅವರ ಪರಿತ್ಯಕ್ತ ಪತ್ನಿ ಲೈಲಾ ಮತ್ತು ಮಗ ಸೀನ್ ಫೆರ್ನಾಂಡಿಸ್‌ರವರು ಜೆಡಿಯು ನಾಯಕನನ್ನು ರಹಸ್ಯ ತಾಣಕ್ಕೆ ಬಲವಂತವಾಗಿ ಕರೆದೊಯ್ದಿದ್ದಾರೆ ಎಂದು ಫೆರ್ನಾಂಡಿಸ್ ಅವರ ಗೆಳೆಯರು ಆರೋಪಿಸಿದ್ದಾರೆ.

ಫೆರ್ನಾಂಡಿಸ್ ಅವರು ಅಲ್ಜಿಮೀರ್ ಸೋಂಕಿನಿಂದ ಬಳಲುತ್ತಿದ್ದು, ಬಹುತೇಕ ಸ್ಮರಣ ಶಕ್ತಿಯನ್ನು ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ಲಕ್ಷಾಂತರ ಶೋಷಿತರಿಗೆ ಧ್ವನಿಯಾಗಿದ್ದ ಫೆರ್ನಾಂಡಿಸ್ ಅವರಂತವರಿಗೆ ಸ್ವತಃ ತನಗೇ ಸಮಸ್ಯೆ ಎದುರಾದಾಗ ದನಿಯೆತ್ತಲು ಸಾಧ್ಯವಾಗದೇ ಇರುವುದು ನಿಜಕ್ಕೂ ದುರಂತ. ಇದರ ಲಾಭವನ್ನು ಅವರ ಪತ್ನಿ ಪಡೆಯುತ್ತಿದ್ದಾರೆ. ನಮಗೆ ಅವರ ಬಗ್ಗೆ ತಿಳಿಯಬೇಕು ಎಂದು ಫೆರ್ನಾಂಡಿಸ್ ಅವರ ಆಪ್ತ ಗೆಳೆಯ ಅಜಯ್ ಸಿಂಗ್ ತಿಳಿಸಿದ್ದಾರೆ.

ಫೆರ್ನಾಂಡಿಸ್ ಅವರ ಉತ್ತರದಾಯಿತ್ವದ ಕುರಿತು ಪ್ರಸಕ್ತ ಕೌಟುಂಬಿಕ ಕಲಹ ನಡೆಯುತ್ತಿದ್ದು, ಇದುವರೆಗೆ ಫೆರ್ನಾಂಡಿಸ್ ಅವರಿಂದ ದೂರ ಉಳಿದುಕೊಂಡಿದ್ದ ಅವರ ಪತ್ನಿ ಮತ್ತು ಮಗ ಆಸ್ತಿಯ ಆಸೆಗಾಗಿ ಹತ್ತಿರ ಬಂದಿದ್ದಾರೆ ಎಂದು ಅವರ ಸಹೋದರರು ಆರೋಪಿಸುತ್ತಿದ್ದಾರೆ.

ಫೆರ್ನಾಂಡಿಸ್ ಅವರ 25 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಅವರ ಸ್ನೇಹಿತರು ಮತ್ತು ಸಹೋದರರು ನುಂಗಲು ಯತ್ನಿಸುತ್ತಿದ್ದಾರೆ ಎಂದು ಎರಡು ದಶಕಗಳ ನಂತರ ವಾಪಸಾಗಿರುವ ಲೈಲಾ ಮತ್ತು ಸೀನ್ ಆರೋಪಿಸುತ್ತಿದ್ದಾರೆ.

ಆದರೆ ಇದನ್ನು ಅವರ ನಾಲ್ವರು ಸಹೋದರರು ನಿರಾಕರಿಸಿದ್ದು, ಆರೋಪದಲ್ಲಿ ಹುರುಳಿಲ್ಲ ಎಂದಿದ್ದಾರೆ.

ನಮಗೆ ಆತನ ಹಣ ಬೇಡ. ಆತನನ್ನು ನೋಡಲಷ್ಟೇ ನಾವು ಬಯಸುತ್ತಿದ್ದೇವೆ ಎಂದು ತಮ್ಮ ಮೈಕೆಲ್ ಫೆರ್ನಾಂಡಿಸ್ ತಿಳಿಸಿದ್ದಾರೆ.

ಫೆರ್ನಾಂಡಿಸ್ ಅವರ ಬಗ್ಗೆ ಮಾಹಿತಿ ನೀಡಬೇಕೆಂದು ಒತ್ತಾಯಿಸಿ ಅವರ ಗೆಳೆಯರ ನೇತೃತ್ವ ವಹಿಸಿರುವ ಸುಪ್ರೀಂ ಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಅವರು ಸಹಿ ಅಭಿಯಾನ ಆರಂಭಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ