ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹಿಂಸಾಚಾರ ತ್ಯಜಿಸಿ ಮಾತುಕತೆಗೆ ಬನ್ನಿ: ನಕ್ಸಲರಿಗೆ ರಾಷ್ಟ್ರಪತಿ (Pratibha singh Patil | Indian President | Parliament | Budget session)
Bookmark and Share Feedback Print
 
PTI
ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡುವ ಮೂಲಕ ಬಜೆಟ್ ಅಧಿವೇಶನಕ್ಕೆ ರಾಷ್ಟ್ರಪತಿ ಪ್ರತಿಭಾ ಸಿಂಗ್ ಪಾಟೀಲ್ ಚಾಲನೆ ನೀಡಿದ್ದು, ಹಿಂಚಾಚಾರವನ್ನು ತ್ಯಜಿಸಿ ಮಾತುಕತೆಗೆ ಬರುವಂತೆ ನಕ್ಸಲರಿಗೆ ಆಹ್ವಾನ ನೀಡಿದ್ದಾರೆ.

ನನ್ನ ಸರಕಾರವು ಜನಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸುತ್ತಿದೆ, ಬೆಲೆಯೇರಿಕೆಯನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಯಾವುದೇ ಕಾರಣಕ್ಕೂ ಜನಸಾಮಾನ್ಯರನ್ನು ಸಂಕಷ್ಟಕ್ಕೆ ತಳ್ಳಲು ಸರಕಾರ ಬಯಸದು ಎಂದು ಪಾಟೀಲ್ ತನ್ನ ಭಾಷಣದಲ್ಲಿ ತಿಳಿಸಿದ್ದಾರೆ.

ಹಲವು ರಾಜ್ಯಗಳಲ್ಲಿ ವ್ಯಾಪಕ ಹಿಂಸಾಚಾರ ನಡೆಸುತ್ತಿರುವ ನಕ್ಸಲರು ಈ ಮಾರ್ಗವನ್ನು ತ್ಯಜಿಸಬೇಕೆಂದು ಕರೆ ನೀಡಿರುವ ಅವರು, ಮಾತುಕತೆಗೆ ಬನ್ನಿ ಎಂದು ಆಹ್ವಾನಿಸಿದ್ದಾರೆ. ಇದರ ಜತೆಗೆ ನಕ್ಸಲರು ಅಥವಾ ಮಾವೋವಾದಿಗಳ ವಿರುದ್ಧದ ಹೋರಾಟಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ.

ಪುಣೆ ಜರ್ಮನ್ ಬೇಕರಿ ಸ್ಫೋಟವನ್ನು ತೀವ್ರವಾಗಿ ಖಂಡಿಸಿರುವ ಅವರು, ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕೆ ಸರಕಾರ ಬದ್ಧವಾಗಿದೆ. ಇದರ ಮೂಲೋತ್ಪಾಟನೆಗೆ ಜನತೆ ಕೂಡ ಸಹಕರಿಸಬೇಕು ಎಂದು ರಾಷ್ಟ್ರಪತಿಯವರು ತಿಳಿಸಿದ್ದಾರೆ.

ಆಹಾರ ಭದ್ರತೆ, ಮಹಿಳಾ ಮೀಸಲಾತಿಯ ಕುರಿತು ಮಸೂದೆಗಳನ್ನು ಸರಕಾರ ಮಂಡಿಸಲಿದೆ, ರೈತರ ಅಭಿವೃದ್ಧಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಯುಪಿಎ ಸರಕಾರ ಹಮ್ಮಿಕೊಳ್ಳುತ್ತಿದೆ ಎಂದೂ ಅವರು ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅವರ ಭಾಷಣದ ಪ್ರಮುಖ ಅಂಶಗಳು ಹೀಗಿವೆ...
* ದೇಶಕ್ಕೆ ಆರ್ಥಿಕ ಹಿಂಜರಿತ ತಡೆಯುವ ಶಕ್ತಿಯಿದೆ
* ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತವು ಶೇ.7.5ರ ಪ್ರಗತಿ ದಾಖಲಿಸುವ ಸಾಧ್ಯತೆಗಳಿವೆ
* ಮುಂದಿನ ವರ್ಷ ಶೇ.8 ಮತ್ತು 2011-12ರ ಅವಧಿಯಲ್ಲಿ ಶೇ.9ರ ಪ್ರಗತಿಯನ್ನು ಸರಕಾರ ನಿರೀಕ್ಷಿಸುತ್ತಿದೆ
* ದೇಶಕ್ಕೆ ಆರ್ಥಿಕ ಹಿಂಜರಿತ ತಡೆಯುವ ಶಕ್ತಿ ಇದೆ
* ವಿಶ್ವದ ಇತರ ರಾಷ್ಟ್ರಗಳು ಹಿಂಜರಿತ ಅನುಭವಿಸುತ್ತಿದ್ದರೂ ಭಾರತದ ಪ್ರಗತಿ ಏರುಗತಿಯಲ್ಲಿದೆ
* ಕಪ್ಪುಹಣವನ್ನು ವಶಕ್ಕೆ ತೆಗೆದುಕೊಳ್ಳಲು ಸರಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ
* ಅಗತ್ಯ ವಸ್ತುಗಳ ದರ ಏರಿಕೆ ನಿಯಂತ್ರಿಸಲು ಅಗತ್ಯ ಕ್ರಮ
* ನಿಯಮಾವಳಿಗಳನ್ನು ರೂಪಿಸುವಾಗ ಸರಕಾರವು ಜನಸಾಮಾನ್ಯರನ್ನೇ ಪ್ರಮುಖವೆಂದು ಪರಿಗಣಿಸುತ್ತದೆ
* ಆಹಾರ ವಸ್ತುಗಳ ಬೆಲೆಯನ್ನು ನಿಯಂತ್ರಿಸುವ ಭರವಸೆಯನ್ನು ಸರಕಾರ ಬಡಜನರಿಗೆ ನೀಡುತ್ತಿದೆ
* ಆಹಾರ ಭದ್ರತೆಯನ್ನು ಖಚಿತಪಡಿಸಲು ಕಾಯ್ದೆ ತರುವ ಬಗ್ಗೆ ಸರಕಾರ ಬದ್ಧ
* ಮಹಿಳಾ ಮೀಸಲಾತಿ ಜಾರಿ ಬಗ್ಗೆ ಚಿಂತನೆ
* ಪುಣೆ ಜರ್ಮನ್ ಬೇಕರಿ ಸ್ಫೋಟವನ್ನು ಸರಕಾರ ತೀವ್ರವಾಗಿ ಖಂಡಿಸುತ್ತದೆ
* ಭಯೋತ್ಪಾದನೆ, ನಕ್ಸಲರ ವಿರುದ್ಧ ಹೋರಾಟಕ್ಕೆ ಕರೆ
* ಸಶಸ್ತ್ರಪಡೆಗಳ ಆಧುನೀಕರಣಕ್ಕೆ ನಾವು ಬದ್ಧರಾಗಿದ್ದೇವೆ
* ಹಲವು ರಾಜ್ಯಗಳಲ್ಲಿನ ನಕ್ಸಲ್ ಚಟುವಟಿಕೆಗಳ ಬಗ್ಗೆ ಸರಕಾರವು ತೀವ್ರ ಕಳವಳಗೊಂಡಿದೆ
* ಮಾವೋವಾದಿಗಳು ಹಿಂಸಾಚಾರವನ್ನು ತ್ಯಜಿಸಬೇಕು ಮತ್ತು ಮಾತುಕತೆಗೆ ಮುಂದಾಗಬೇಕು
* ಜಮ್ಮು-ಕಾಶ್ಮೀರದಲ್ಲಿ ಗಡಿಯಾಚೆಯಿಂದ ಒಳನುಸುಳುವಿಕೆ ಯತ್ನಗಳು ಹೆಚ್ಚುತ್ತಿವೆ
* ರೈತರ ಅಭ್ಯುದಯಕ್ಕೆ ಸರಕಾರದಿಂದ ಯೋಜನೆ
* ಭದ್ರತಾ ವಿಚಾರಗಳನ್ನು ನಿರ್ವಹಿಸುವಾಗ ಸರಕಾರವು ಎಚ್ಚರಿಕೆ ವಹಿಸುತ್ತಿದೆ
* ಇದೇ ಅಧಿವೇಶನದ ಅವಧಿಯಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಲಾಗುತ್ತದೆ
* ಶಿಕ್ಷಣದ ಮೂಲವ್ಯವಸ್ಥೆಯಲ್ಲಿನ ದೃಷ್ಟಿಕೋನ ಬದಲಾವಣೆಗೆ ಸರಕಾರ ಬದ್ಧ
* ಕೋಮು ಹಿಂಚಾಸಾರ ಕಾಯ್ದೆ ಪ್ರಸ್ತಾವನೆಯನ್ನು ಸರಕಾರ ಇದೇ ಅವಧಿಯಲ್ಲಿ ಮಂಡಿಸಲಿದೆ
* ಪಾಕಿಸ್ತಾನದ ಜತೆ ಅರ್ಥಪೂರ್ಣ ಸಂಬಂಧ ಹೊಂದಲು ಭಾರತ ಸಿದ್ಧ
ಸಂಬಂಧಿತ ಮಾಹಿತಿ ಹುಡುಕಿ