ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತನ್ನದೇ ಮಕ್ಕಳಿಗೆ ಹೆಂಡ ಕುಡಿಸಿ ಅತ್ಯಾಚಾರ ನಡೆಸಿದವನೂ ಅಪ್ಪ! (Uttar Pradesh | raping daughters | Siyaram Rawat | India)
Bookmark and Share Feedback Print
 
ತಂದೆಯ 'ಪರಮಪೂಜ್ಯ' ಎಂಬ ಪದಕ್ಕೆ ಕಳಂಕ ಹಚ್ಚುವ ಕಿರಾತಕರ ಪಟ್ಟಿಗೆ ಇತ್ತೀಚೆಗೆ ಸೇರ್ಪಡೆಗೊಂಡವನು ಇವನು. ತನ್ನದೇ ಇಬ್ಬರು ಹೆಣ್ಮಕ್ಕಳಿಗೆ ಹೆಂಡ ಕುಡಿಸಿ ಸತತ ಎರಡು ವರ್ಷಗಳ ಕಾಲ ಅತ್ಯಾಚಾರ ನಡೆಸಿ ಪಾಪದ ಕೊಡ ತುಂಬಿದ ಮೇಲೆ ಇದೀಗ ಜೈಲು ಸೇರಿದ್ದಾನೆ.

ಉತ್ತರ ಪ್ರದೇಶದ ರಾಜಧಾನಿ ಲಕ್ನೋದಿಂದ 35 ಕಿಲೋ ಮೀಟರ್ ದೂರದಲ್ಲಿರುವ ಬಾರಾಬಂಕಿ ಎಂಬಲ್ಲಿನ ಸರಾಯ್ ಸೈಫ್ ಗ್ರಾಮದ ರೈತನೀತ. ಸಿಯಾರಾಮ್ ರಾವತ್ ಎಂಬ ಈ 50ರ ಹರೆಯದ ಅಪ್ಪ, 17 ಮತ್ತು 14ರ ಹರೆಯದ ತನ್ನ ಸ್ವಂತ ಮಕ್ಕಳ ಮೇಲೆ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿದ್ದಾನೆ.

ಮದ್ಯ ಕುಡಿಸುತ್ತಿದ್ದ....
ಎರಡು ವರ್ಷಗಳ ಹಿಂದೆ ಇಲ್ಲೇ ಪಕ್ಕದ ಗ್ರಾಮ 'ಪಾಹಿ' ಎಂಬಲ್ಲಿ ಚಿಕ್ಕ ಮನೆಯೊಂದನ್ನು ರಾವತ್ ಖರೀದಿಸಿದ್ದ. ಜಮೀನಿಗೆ ಈ ಮನೆ ಹತ್ತಿರದಲ್ಲಿರುವುದರಿಂದ ನಾನು ಅದೇ ಮನೆಯಲ್ಲಿ ವಾಸಿಸುವುದಾಗಿ ಸರಾಯ್ ಸೈಫ್ ಗ್ರಾಮದಲ್ಲಿದ್ದ ಹೆಂಡತಿ-ಮಕ್ಕಳಿಗೆ ಹೇಳಿದ್ದ.

ಸ್ವಲ್ಪ ಸಮಯದ ನಂತರ ಸಹಾಯಕ್ಕೆ ಬೇಕು ಎಂದೆಲ್ಲ ಸಮಜಾಯಿಷಿ ನೀಡಿ ಹೆಂಡತಿಯನ್ನು ಒಪ್ಪಿಸಿ ದೊಡ್ಡ ಮಗಳನ್ನು ತನ್ನೊಂದಿಗೆ ಕರೆದುಕೊಂಡು ಪಾಹಿ ಗ್ರಾಮಕ್ಕೆ ಹೋಗುವಲ್ಲಿ ಯಶಸ್ವಿಯಾಗಿದ್ದ.

ನಂತರ ಆಕೆಗೆ ಲೈಂಗಿಕ ಕಿರುಕುಳ ನೀಡಲಾರಂಭಿಸಿದ. ಪ್ರತೀ ಬಾರಿ ತನ್ನ ಪಾಪಕರ್ಮಗಳಲ್ಲಿ ತೊಡಗುವಾಗಲೂ ಆಕೆಗೆ ಮದ್ಯ ಕುಡಿಸುತ್ತಿದ್ದ. ಸ್ವಲ್ಪ ದಿನಗಳ ನಂತರ ಎರಡನೇ ಮಗಳನ್ನು ಕೂಡ ಅದೇ ಮನೆಗೆ ಕರೆತಂದು ಆಕೆಯನ್ನೂ ಅತ್ಯಾಚಾರ ನಡೆಸಲಾರಂಭಿಸಿದ್ದ.

ಪಾಹಿ ಗ್ರಾಮದ ಪುಟ್ಟ ಮನೆಯಲ್ಲಿ ಗೃಹಬಂಧನಕ್ಕೊಳಗಾಗಿದ್ದ ಇಬ್ಬರೂ ಹೆಣ್ಮಕ್ಕಳು ಹೇಗೋ ತಪ್ಪಿಸಿಕೊಂಡು ಬಂದು ಇತರರ ಸಹಾಯ ಪಡೆದಿದ್ದಾರೆ. ಬಳಿಕ ಪೊಲೀಸ್ ದೂರು ನೀಡಲಾಗಿದೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾವತ್‌ನನ್ನು ಶುಕ್ರವಾರ ರಾತ್ರಿಯೇ ಬಂಧಿಸಿದ್ದೇವೆ. ಮಕ್ಕಳ ಮೇಲೆ ಅತ್ಯಾಚಾರ ನಡೆಸಿರುವುದನ್ನು ಆತ ಒಪ್ಪಿಕೊಂಡಿದ್ದಾನೆ ಎಂದು ಬಾರಬಂಕಿಯಲ್ಲಿನ ಪೊಲೀಸ್ ಇನ್ಸ್‌ಪೆಕ್ಟರ್ ಘನಶ್ಯಾಮ್ ರಾಮ್ ವಿವರಣೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ