ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕದನವಿರಾಮ: ಕೇಂದ್ರ ಫ್ಯಾಕ್ಸ್ ನಂ.; ನಕ್ಸಲರಿಂದ ಮೊಬೈಲ್ ನಂ..! (truce offer | Kishanji | P Chidamabram | ceasefire)
Bookmark and Share Feedback Print
 
ಮಾವೋವಾದಿಗಳು ಕದನವಿರಾಮಕ್ಕೆ ಸಿದ್ಧರಿರುವುದಾದರೆ ಈ ಕುರಿತ ವಿವರಗಳನ್ನು ನನಗೆ ಫ್ಯಾಕ್ಸ್ ಮಾಡಿ ಎಂದು ಕೇಂದ್ರ ಗೃಹಸಚಿವರು ತನ್ನ ಫ್ಯಾಕ್ಸ್ ನಂಬರನ್ನು ನೀಡಿದರೆ, ಅತ್ತ ಪ್ರತಿಕ್ರಿಯಿಸಿರುವ ನಕ್ಸಲ್ ಮುಖಂಡ ಕಿಶನ್‌ಜೀ ತನ್ನ ಫೋನ್ ನಂಬರನ್ನೇ ನೀಡಿ ಕರೆ ಮಾಡುವಂತೆ ಆಹ್ವಾನಿಸಿದ್ದಾನೆ.

ಕಿಶನ್‌ಜೀ ಷರತ್ತುಬದ್ಧ ಯುದ್ಧವಿರಾಮದ ಪ್ರಸ್ತಾಪವನ್ನು ಮುಂದಿಟ್ಟ ಒಂದು ದಿನದ ಬಳಿಕ ಈ ಪ್ರಸ್ತಾಪವನ್ನು ತಿರಸ್ಕರಿಸದ್ದ ಚಿದಂಬರಂ, ಷರತ್ತುರಹಿತ ಹಿಂಚಾಚಾರ ಸ್ಥಗಿತಕ್ಕೆ ಮುಂದಾಗಿ ಎಂದು ಹೇಳಿದ್ದರು.

ಸರಕಾರವು 'ಆದರೆ, ಹೋದರೆ' ಮುಂತಾದ ಷರತ್ತುಗಳಿಗೆ ಸಿದ್ಧವಿಲ್ಲ. ಅದನ್ನು ಸ್ವೀಕರಿಸುವುದಿಲ್ಲ. ಮಾವೋವಾದಿಗಳ ಜತೆ ಮಾತುಕತೆ ಆರಂಭಿಸಲು ಸರಕಾರ ಸಿದ್ಧವಿದೆ, ಆದರೆ ಅವರು ಹಿಂಸಾಚಾರ ನಡೆಸುವುದಿಲ್ಲ ಎಂಬ ಭರವಸೆ ನೀಡಬೇಕು. ಇದಕ್ಕೆ ನಕ್ಸಲರು ಸಿದ್ಧರಿದ್ದಲ್ಲಿ, ತಮ್ಮ ಲಿಖಿತ ಕದನವಿರಾಮ ಪತ್ರವನ್ನು ನನಗೆ 011-23093155 ಸಂಖ್ಯೆಗೆ ನೇರವಾಗಿ ಫ್ಯಾಕ್ಸ್ ಮಾಡಿ ಎಂದು ಹೇಳಿದ್ದರು.

ಗೃಹ ಸಚಿವರು ತನ್ನ ಸಚಿವಾಲಯದ ಫ್ಯಾಕ್ಸ್ ನಂಬರ್ ಕೊಟ್ಟಿದ್ದರೆ ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿರುವ ಕಿಶನ್‌ಜೀ ತನ್ನ ಮೊಬೈಲ್ ನಂಬರನ್ನೇ ನೀಡಿದ್ದಾನೆ.

'ಚಿದಂಬರಂ ಅವರು ಕದನವಿರಾಮ ಪ್ರಸ್ತಾಪದ ಕುರಿತು ಮಾತನಾಡಲು ಬಯಸುತ್ತಾರಾದರೆ ನನ್ನ ದೂರವಾಣಿ 09734695789 ಸಂಖ್ಯೆಗೆ ಕರೆ ಮಾಡಲಿ. ಫೆಬ್ರವರಿ 25ರಂದು ಸಂಜೆ ಐದು ಗಂಟೆಯ ನಂತರ ಅವರು ಕರೆ ಮಾಡುವುದಾದರೆ ನನ್ನ ಸ್ವಾಗತವಿರುತ್ತದೆ' ಎಂದು ತಿಳಿಸಿದ್ದಾನೆ.

ಆದರೆ ಚಿದಂಬರಂ ಅವರು ಹೇಳಿದಂತೆ ಷರತ್ತುರಹಿತ ಕದನವಿರಾಮಕ್ಕೆ ಸಿದ್ಧನಿರುವ ಕುರಿತು ಯಾವುದೇ ಮಾಹಿತಿಯನ್ನು ಈ ಸಂದರ್ಭದಲ್ಲಿ ಕಿಶನ್‌ಜೀ ನೀಡಿಲ್ಲ. ಅದರ ಬದಲು, ಫೆಬ್ರವರಿ 25ರಂದು ಹುತಾತ್ಮ ಕಾಮ್ರೇಡ್‌ಗಳ ಪುಣ್ಯತಿಥಿ ದಿನವಾದ್ದರಿಂದ ಅಂದು ಸಚಿವರೊಂದಿಗೆ ಮಾತನಾಡಲು ನಾನು ಬಯಸುತ್ತೇನೆ ಎಂದು ಹೇಳಿದ್ದಾನೆ.

ಫೆಬ್ರವರಿ 25ರಿಂದ ಆರಂಭವಾಗುವಂತೆ 72 ದಿನಗಳ ಕಾಲ ಕದನವಿರಾಮಕ್ಕೆ ನಾವು ಸಿದ್ಧರಿದ್ದೇವೆ. ಈ ಸಂದರ್ಭದಲ್ಲಿ ನಮ್ಮಿಂದ ಯಾವುದೇ ರೀತಿಯ ಹಿಂಸಾಚಾರ ನಡೆಯುವುದಿಲ್ಲ. ಆದರೆ ಭದ್ರತಾ ಪಡೆಗಳು ತಮ್ಮ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬೇಕು ಎಂದು ಕಿಶನ್‌ಜೀ ಮಾಧ್ಯಮಗಳ ಮೂಲಕ ಕೆಲವು ದಿನಗಳ ಹಿಂದಷ್ಟೇ ಕದನವಿರಾಮ ಪ್ರಸ್ತಾಪ ಮುಂದಿಟ್ಟಿದ್ದ.
ಸಂಬಂಧಿತ ಮಾಹಿತಿ ಹುಡುಕಿ