ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಿಜೆಪಿ ಆಂತರಿಕ ಸಂಘರ್ಷದಿಂದ ನರಳುತ್ತಿದೆ: ಗೋವಿಂದಾಚಾರ್ಯ (BJP | K N Govindacharya | Nitin Gadkari | Ram Temple)
Bookmark and Share Feedback Print
 
ಬಿಜೆಪಿಯು ಆಂತರಿಕ ಸಂಘರ್ಷ ಮತ್ತು ವಿರೋಧಾಭಾಸಗಳಿಂದ ಬಳಲುತ್ತಿದೆ ಎಂದು ಪಕ್ಷದ ಮಾಜಿ ಪ್ರಧಾನ ಕಾರ್ಯದರ್ಶಿ ಮತ್ತು ಸಿದ್ಧಾಂತವಾದಿ ಕೆ.ಎನ್. ಗೋವಿಂದಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.

ನಿತಿನ್ ಗಡ್ಕರಿ ನೇತೃತ್ವದ ಬಿಜೆಪಿಯು ಅನುಭವದ ಕೊರತೆಯನ್ನು ಎದುರಿಸುತ್ತಿದ್ದು, ರಾಮಮಂದಿರ ವಿವಾದ ಸೇರಿದಂತೆ ಹಲವು ವಿಚಾರಗಳಲ್ಲಿ ಯಾವುದೇ ಪೂರ್ವಸಿದ್ಧತೆಗಳನ್ನು ಸಮರ್ಥವಾಗಿ ಮಾಡಿಲ್ಲ ಎಂದೂ ಗೋವಿಂದಾಚಾರ್ಯ ಆರೋಪಿಸಿದ್ದಾರೆ.

ಬಿಜೆಪಿಯು ಆಂತರಿಕ ಭಿನ್ನಮತ ಮತ್ತು ವಿರೋಧಾಭಾಸಗಳ ಬಲೆಯಲ್ಲಿ ಸಿಕ್ಕಿ ಬಿದ್ದಿದೆ. ಈಗ ಅದನ್ನು ರಕ್ಷಿಸುವುದು ಸುಲಭ ಸಾಧ್ಯವಲ್ಲ ಎಂದಿದ್ದಾರೆ.

ಉದಾರವಾದ ಮತ್ತು ಧರ್ಮಾಂಧತೆ ಕುರಿತು ಪಕ್ಷದೊಳಗೆ ಭಿನ್ನಾಭಿಪ್ರಾಯಗಳಿದ್ದು, ಇದೇ ಫೆಬ್ರವರಿ 17ರಿಂದ 19ರವರೆಗೆ ನಡೆದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲೂ ಪ್ರತಿಬಿಂಬಿಸಿದೆ ಎಂದು ಹಿರಿಯ ನಾಯಕ ಅಭಿಪ್ರಾಯಪಟ್ಟಿದ್ದಾರೆ.

ರಾಮಮಂದಿರದ ಕುರಿತು ಮುಸ್ಲಿಮರಿಗೆ ಗಡ್ಕರಿ ಮಾಡಿರುವ ಮನವಿಯನ್ನು ಉಲ್ಲೇಖಿಸುತ್ತಾ, ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ ಎಂದರು. 'ಅವರು ಅನುಭವ ಕೊರತೆಯಿಂದ ಬಳಸುತ್ತಿದ್ದಾರೆ ಎಂಬುದನ್ನು ಅವರ ಹೇಳಿಕೆ ತೋರಿಸುತ್ತಿದೆ. ಅಗತ್ಯ ಪೂರ್ವಸಿದ್ಧತೆಗಳು ಮತ್ತು ಸಹಕಾರದ ಕೊರತೆಯೂ ಅವರಿಗಿದೆ' ಎಂದು ವಿವರಣೆ ನೀಡಿದರು.

ಈ ಕುರಿತು ಗಡ್ಕರಿಯವರಿಗೆ ಸಲಹೆ ನೀಡಿರುವ ಗೋವಿಂದಾಚಾರ್ಯ, 'ಮಹತ್ವದ ವಿವಾದಗಳ ಕುರಿತು ಹೇಳಿಕೆ ನೀಡುವಾಗ ಸರಿಯಾಗಿ ಯೋಚಿಸಿ. ಯಾಕೆಂದರೆ ರಾಜಕೀಯ ಕ್ಷೇತ್ರವೆನ್ನುವುದು ಬೆಂಕಿಯ ಅಂಗಣ. ಇಲ್ಲಿ ಜ್ಞಾನದ ಅಥವಾ ಮಾಹಿತಿಯ ಕೊರತೆಯು ನಿಮಗೆ ಕ್ಷಮೆ ನೀಡದು' ಎಂದಿದ್ದಾರೆ.

ಪಕ್ಷವು ತೀರಾ ಸಂಕಷ್ಟದಲ್ಲಿರುವಾಗ ಗಡ್ಕರಿಯವರು ಅಧಿಕಾರ ವಹಿಸಿಕೊಂಡಿದ್ದಾರೆ. ಹಾಗಾಗಿ ಅವರ ಮೇಲೆ ಜವಾಬ್ದಾರಿಗಳು ಹೆಚ್ಚಿವೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿಯ ಕಾರ್ಪೊರೇಟ್ ಸಂಸ್ಕೃತಿಗೆ 'ಕೇಸರೀಕರಣಗೊಂಡ ಕಾಂಗ್ರೆಸ್' ಎಂದು ಬಣ್ಣಿಸಿರುವ ಅವರು, ಪಕ್ಷವನ್ನು ಕಾರ್ಪೊರೇಟ್ ಆಳುತ್ತಿದೆ; ಪಕ್ಷದ ನಾಯಕರುಗಳ ಸ್ಥಾನಕ್ಕೆ ಮ್ಯಾನೇಜರುಗಳು ಬಂದಿದ್ದಾರೆ. ಹಾಗಾಗಿ ಕಾರ್ಯಕರ್ತರನ್ನು ಕೆಲಸಗಾರರಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ