ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಇನ್ನು ರೈಲು ಟಿಕೆಟುಗಳು ಆಸ್ಪತ್ರೆ, ಕೋರ್ಟುಗಳಲ್ಲೂ ಲಭ್ಯ! (Rail budget 2010 | Mamata Banerjee | railway minister | UPA)
Bookmark and Share Feedback Print
 
ರೈಲು ಟಿಕೆಟಿಗಾಗಿ ರೈಲ್ವೇ ನಿಲ್ದಾಣಗಳ ಮೈಲುದ್ದ ಸಾಲಿನ ಕೊನೆಯಲ್ಲಿ ನಿಲ್ಲಲೇಬೇಕಾದ ಅನಿವಾರ್ಯತೆಯನ್ನು 'ಇ-ಟಿಕೆಟ್' ಮೂಲಕ ಕಡಿಮೆ ಮಾಡಿಕೊಂಡಿರುವ ರೈಲ್ವೇ ಇಲಾಖೆಯು ಇದೀಗ ತನ್ನ ಇ-ಟಿಕೆಟಿಂಗ್ ಮೊಬೈಲ್ ವ್ಯಾನನ್ನು ಜಿಲ್ಲಾ ಕೇಂದ್ರಗಳು ಸೇರಿದಂತೆ ಹಲವು ಕಡೆ ವಿಸ್ತರಿಸಲಿದೆ.

'ಮುಷ್ಕಿಲ್ ಆಸನ್' ಎಂದು ಹೆಸರಿಸಲಾಗಿರುವ ಈ ಯೋಜನೆಯ ಪ್ರಕಾರ ಇ-ಟಿಕೆಟ್ ಹೊತ್ತ ಸಂಚಾರಿ ವಾಹನವು ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು, ಉಚ್ಚ ನ್ಯಾಯಾಲಯಗಳು, ಜಿಲ್ಲಾ ನ್ಯಾಯಾಲಯಗಳು, ವಿಶ್ವವಿದ್ಯಾಲಯ ಕ್ಯಾಂಪಸ್ಸುಗಳು, ಮಾಹಿತಿ ತಂತ್ರಜ್ಞಾನ ಹಬ್‌ಗಳು, ಐಐಟಿಗಳು ಮತ್ತು ಐಐಎಂಗಳಿಗೆ ತೆರಳಲಿವೆ.

ಗ್ರಾಮಾಂತರ ಪ್ರದೇಶಗಳ ಜನತೆಗೂ ರೈಲ್ವೇ ಸೇವೆ ಲಭ್ಯವಾಗಬೇಕೆನ್ನುವ ನಿಟ್ಟಿನಲ್ಲಿ ಮತ್ತೂ ಮುಂದುವರಿದಿರುವ ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ, ಜಿಲ್ಲಾ ಕೇಂದ್ರಗಳು ಮತ್ತು ಗ್ರಾಮ ಪಂಚಾಯತ್ ಮಟ್ಟಗಳಲ್ಲೂ ಟಿಕೆಟ್ ಕೇಂದ್ರಗಳನ್ನು ತೆರೆಯುವ ಆಸಕ್ತಿ ತೋರಿಸಿದ್ದಾರೆ.

ಆದರೆ ಇದಕ್ಕಾಗಿ ಸ್ಥಳೀಯ ಆಡಳಿತ ಮತ್ತು ಖಾಸಗಿ ಸಂಘ-ಸಂಸ್ಥೆಗಳ ಸಹಕಾರ ಬೇಕು. ಇಂತಹ ಪ್ರಸ್ತಾಪಕ್ಕೆ ಸ್ಥಳೀಯಾಡಳಿತಗಳು ಒಪ್ಪಿಗೆ ಸೂಚಿಸಿದಲ್ಲಿ ಟಿಕೆಟ್ ವಿತರಣಾ ಕೇಂದ್ರಗಳನ್ನು ತೆರೆಯಲು ಇಲಾಖೆ ಮುಂದಾಗಲಿದೆ ಎಂದು ಬಜೆಟ್ ಭಾಷಣದಲ್ಲಿ ಮಮತಾ ತಿಳಿಸಿದ್ದಾರೆ.

ಇ-ಟಿಕೆಟ್ ಸೇವಾದರ ಕಡಿತ...
ಈ ನಡುವೆ ಐಆರ್‌ಸಿಟಿಸಿ ಇಂಟರ್ನೆಟ್ ಸೇವೆಗಳ ಮೂಲಕ ಇ-ಟಿಕೆಟು ಪಡೆಯುವಾಗ ವಿಧಿಸಲಾಗುತ್ತಿದ್ದ ದರದಲ್ಲಿ ಕೂಡ ಕಡಿತಗೊಳಿಸಲಾಗಿದೆ.

ಪ್ರಸಕ್ತ ಸ್ಲೀಪರ್ ದರ್ಜೆಗಳ ಮೇಲೆ 15 ರೂಪಾಯಿಗಳವರೆಗೆ ಮತ್ತು ಹವಾನಿಯಂತ್ರಿತ ದರ್ಜೆಯ ಟಿಕೆಟಿನ ಮೇಲೆ 40 ರೂಪಾಯಿಗಳವರೆಗೆ ಸೇವಾ ಶುಲ್ಕ ವಿಧಿಸಲಾಗುತ್ತಿದೆ. ಆದರೆ ಇದನ್ನು ಕ್ರಮವಾಗಿ ಗರಿಷ್ಠ 10 ರೂಪಾಯಿ ಮತ್ತು 20 ರೂಪಾಯಿಗಳಿಗೆ ಇಳಿಕೆಗೊಳಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ