ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 6,470 ಭಾರತೀಯರು ವಿದೇಶಗಳ ಜೈಲುಗಳಲ್ಲಿದ್ದಾರೆ..! (Indians | prisons | Lok Sabha | Shashi Tharoor)
Bookmark and Share Feedback Print
 
ಅತ್ಯಾಚಾರ, ಕೊಲೆ, ದರೋಡೆ, ವಂಚನೆ, ಬೇಟೆ, ಮಾನವ ಕಳ್ಳಸಾಗಾಟ, ಅಕ್ರಮ ಪ್ರವೇಶ ಸೇರಿದಂತೆ ಸೇರಿದಂತೆ ಹಲವು ಅಪರಾಧ ಪ್ರಕರಣಗಳಿಂದಾಗಿ 6,470 ಭಾರತೀಯರು ಜಗತ್ತಿನಾದ್ಯಂತದ 71 ದೇಶಗಳಲ್ಲಿನ ಸೆರೆಮನೆಗಳಲ್ಲಿದ್ದಾರೆ.

6,313 ಪುರುಷರು ಹಾಗೂ 157 ಮಹಿಳೆಯರು ವಿದೇಶಗಳ ಜೈಲುಗಳಲ್ಲಿದ್ದಾರೆ ಎಂಬ ಈ ಮಾಹಿತಿಯನ್ನು ವಿದೇಶಾಂಗ ಇಲಾಖೆಯ ರಾಜ್ಯ ಸಚಿವ ಶಶಿ ತರೂರ್ ಲೋಕಸಭೆಗೆ ಲಿಖಿತವಾಗಿ ತಿಳಿಸಿದ್ದಾರೆ.

1,226 ಭಾರತೀಯರು ಸೌದಿ ಅರೇಬಿಯಾ ಜೈಲುಗಳಲ್ಲಿದ್ದರೆ, 1092 ಮಂದಿ ಯುಎಇ ಸೆರೆಮನೆಗಳಲ್ಲಿದ್ದಾರೆ. ಅಕ್ರಮ ಪ್ರವೇಶ ಮತ್ತು ಭದ್ರತಾ ಸಮಸ್ಯೆಗಳನ್ನು ಹುಟ್ಟು ಹಾಕಿದ ಆರೋಪದ ಮೇಲೆ 842 ಭಾರತೀಯರು ಪಾಕಿಸ್ತಾನದ ಜೈಲುಗಳಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.

ಕೊಲೆ, ದರೋಡೆ, ಅಕ್ರಮ ಪ್ರಾಣಿಗಳ ಕಳ್ಳಸಾಗಣೆ, ಬೇಟೆ ಮುಂತಾದ ಹಲವು ಪ್ರಕರಣಗಳಲ್ಲಿ ಸಿಕ್ಕಿ ಬಿದ್ದಿರುವ 365 ಪುರುಷರು ಮತ್ತು 12 ಮಹಿಳೆಯರು ನೇಪಾಳದ ಜೈಲಿನಲ್ಲಿದ್ದಾರೆ.

ಕ್ರೆಡಿಟ್ ಕಾರ್ಡ್ ವಂಚನೆ, ಹಣಕಾಸು ಅವ್ಯವಹಾರ, ಅತ್ಯಾಚಾರ, ಮಾದಕ ವಸ್ತುಗಳ ಕಳ್ಳ ಸಾಗಣಿಕೆ ಮುಂತಾದ ಪ್ರಕರಣಗಳಲ್ಲಿ 174 ಭಾರತೀಯರು ಚೀನಾದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.

ವಿದೇಶಗಳ ಜೈಲುಗಳಲ್ಲಿರುವ ಭಾರತೀಯರಿಗೆ ಸಹಕಾರ ನೀಡುವ ನಿಟ್ಟಿನಲ್ಲಿ ನಾವು ವಿದೇಶಗಳ ಸರಕಾರಗಳ ಜತೆ ಸಾಧ್ಯವಾದಷ್ಟು ಯತ್ನಗಳನ್ನು ನಡೆಸಿದ್ದೇವೆ ಮತ್ತು ಅದನ್ನು ಮುಂದುವರಿಸುತ್ತೇವೆ. ಇದಕ್ಕೆ ನಮ್ಮ ದೂತವಾಸ ಕಚೇರಿಗಳು ಸಹಕಾರ ನೀಡುತ್ತಿವೆ. ಜೈಲುಗಳಲ್ಲಿರುವ ಭಾರತೀಯ ಸಂಬಂಧಿಕರ ಜತೆ ಸಂಪರ್ಕ ಸಾಧಿಸಲು ಕುಟುಂಬಗಳಿಗೆ ಇದು ಸಹಾಯ ಮಾಡುತ್ತಿವೆ ಎಂದು ತರೂರ್ ತಿಳಿಸಿದ್ದಾರೆ.

ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, 2004-10ರ ಅವಧಿಯಲ್ಲಿ ಪಾಕಿಸ್ತಾನಿ ಜೈಲುಗಳಲ್ಲಿ ಆರು ಮಂದಿ ಭಾರತೀಯ ಬೆಸ್ತರು ಸಾವನ್ನಪ್ಪಿದ್ದಾರೆ; 1,909 ಭಾರತೀಯ ದೋಣಿಗಳನ್ನು ಪಾಕಿಸ್ತಾನವು 2005-10ರ ಅವಧಿಯಲ್ಲಿ ಪಾಕಿಸ್ತಾನ ಬಿಡುಗಡೆ ಮಾಡಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ