ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕೇಂದ್ರ ಬಜೆಟ್; ಸಂಸತ್ತಿಗೆ ಆಗಮಿಸಿದ ಪ್ರಣಬ್ ಮುಖರ್ಜಿ (Union budget 2010-11 | Pranab Mukherjee | India | Price raise)
Bookmark and Share Feedback Print
 
ಬೆಲೆ ಏರಿಕೆಯ ಬಿಸಿಯನ್ನು ಗಮನದಲ್ಲಿಟ್ಟುಕೊಂಡಿರುವ ಪ್ರಣಬ್ ಮುಖರ್ಜಿಯವರು, ಕೇಂದ್ರ ವಿತ್ತ ಸಚಿವರಾಗಿ ಸತತ ಎರಡನೇ ಹಾಗೂ ಒಟ್ಟಾರೆ ತನ್ನ ಐದನೇ ಬಜೆಟ್ ಮಂಡಿಸಲು ಸಂಸತ್ತಿಗೆ ಆಗಮಿಸಿದ್ದು, ಕ್ಷಣಗಣನೆ ಆರಂಭವಾಗಿದೆ.

ದೇಶವೇ ಬೆಲೆಯೇರಿಕೆಯಿಂದ ತತ್ತರಿಸುತ್ತಿರುವ ಹೊತ್ತಿನಲ್ಲಿ ಅವರಿಂದ ಹೆಚ್ಚಿನ ಕೊಡುಗೆಗಳನ್ನು ನಿರೀಕ್ಷಿಸಲಾಗುತ್ತಿದ್ದು, ಹಣದುಬ್ಬರ ನಿಯಂತ್ರಣಕ್ಕೆ ಮುಂಗಡ ಪತ್ರದಲ್ಲಿ ಅಗತ್ಯ ಕ್ರಮಗಳನ್ನು ಅವರು ಘೋಷಿಸುವ ನಿರೀಕ್ಷೆ ಜನರಲ್ಲಿದೆ.

ಜತೆಗೆ ಕೃಷಿಕರಿಗೆ ಹೆಚ್ಚಿನ ಸೌಲಭ್ಯಗಳನ್ನು ಪ್ರಕಟಿಸುವುದು, ಗ್ರಾಮೀಣಾಭಿವೃದ್ಧಿ, ಶಿಕ್ಷಣ, ಆರೋಗ್ಯ ಕ್ಷೇತ್ರಗಳಿಗೆ ಆದ್ಯತೆ ನೀಡುವ ನಿರೀಕ್ಷೆಯಿದ್ದು, ಯುಪಿಎ ಸರಕಾರ ಪಾಲಿಸಿಕೊಂಡು ಬರುತ್ತಿರುವ ಸರಕಾರಿ ವೆಚ್ಚ ಕಡಿತಕ್ಕೆ ಇನ್ನೂ ಹೆಚ್ಚಿನ ನಿಯಮಗಳನ್ನು ಜಾರಿಗೆ ತರುವ ಸಾಧ್ಯತೆಗಳಿವೆ.

ಕಳೆದ ಬಾರಿಯೂ ಆದಾಯ ತೆರಿಗೆ ಮಿತಿಯನ್ನು ಹೆಚ್ಚಳಗೊಳಿಸಿದ್ದ ಮುಖರ್ಜಿಯವರು ಈ ಬಾರಿ ಮತ್ತೆ ಆದಾಯ ತೆರಿಗೆ ಮಿತಿ ಹೆಚ್ಚಳ ಮಾಡುವ ಸಾಧ್ಯತೆಗಳಿವೆ.

ಕಳೆದ ವರ್ಷವೂ ಜನಪ್ರಿಯ ಬಜೆಟ್ ಮೊರೆ ಹೋಗಿದ್ದ ಮುಖರ್ಜಿಯವರು ಈ ಬಾರಿಯೂ ಜನರ ಆಶೋತ್ತರಗಳಿಗೆ ಸ್ಪಂದಿಸುವ ಭರವಸೆಯನ್ನು ನೀಡಿದ್ದು, ಕೆಲವೇ ಕ್ಷಣಗಳಲ್ಲಿ ಹೆಚ್ಚಿನ ವಿವರಗಳು ಲಭ್ಯವಾಗಲಿವೆ.
ಸಂಬಂಧಿತ ಮಾಹಿತಿ ಹುಡುಕಿ