ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪೆಟ್ರೋಲ್ ಬೆಲೆ; ಪ್ರತಿಪಕ್ಷಗಳ ಒಗ್ಗಟ್ಟಿಗೆ ಮಣಿದೀತೇ ಕೇಂದ್ರ? (Congress | Union Budget 2010-11 | opposition walkout | Pranab Mukherjee)
Bookmark and Share Feedback Print
 
ಬಜೆಟ್ ಮಂಡಿಸುತ್ತಿರುವಾಗ ಲೋಕಸಭೆಯ ಇತಿಹಾಸದಲ್ಲೇ ಒಗ್ಗಟ್ಟಾಗಿ ಮೊತ್ತ ಮೊದಲ ಬಾರಿಗೆ ಹೊರ ನಡೆದ ವಿರೋಧ ಪಕ್ಷಗಳು, ವಿತ್ತ ಸಚಿವ ಪ್ರಣಬ್ ಮುಖರ್ಜಿಯವರು ಪ್ರಸ್ತಾಪಿಸಿರುವ ಪೆಟ್ರೋಲ್ ಬೆಲೆಯೇರಿಕೆಯನ್ನು ಹಿಂದಕ್ಕೆ ಪಡೆದುಕೊಳ್ಳದಿದ್ದರೆ ಸಂಸತ್ ಅಧಿವೇಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಬೆದರಿಕೆ ಹಾಕಿವೆ.

ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಒಂದು ರೂಪಾಯಿಯ ಉತ್ಪಾದನಾ ತೆರಿಗೆಯನ್ನು ವಿಧಿಸುವ ಪ್ರಸ್ತಾಪವನ್ನು ಬಜೆಟ್‌ನಲ್ಲಿ ಮುಖರ್ಜಿಯವರು ಮಾಡುತ್ತಿದ್ದಂತೆ ಆಕ್ರೋಶಗೊಂಡ ಪ್ರತಿಪಕ್ಷಗಳು ಸಭಾ ತ್ಯಾಗ ಮಾಡಿದ್ದವು. ಬಜೆಟ್ ಮಂಡಿಸುತ್ತಿರುವ ಸಂದರ್ಭದಲ್ಲಿ ಇದುವರೆಗೆ ಪ್ರತಿಪಕ್ಷಗಳು ಹೊರ ನಡೆದ ಉದಾಹರಣೆಗಳಿಲ್ಲ. ಆ ಮೂಲಕ ಹೊಸ ಇತಿಹಾಸವೇ ಸೃಷ್ಟಿಯಾಗಿದೆ.

ತೆರಿಗೆ ಹೆಚ್ಚು ಮಾಡಿರುವುದರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಲಿದೆ. ಇದರ ಪರಿಣಾಮ ಈಗಾಗಲೇ ಬೆಲೆಯೇರಿಕೆಯಿಂದ ತತ್ತರಿಸುತ್ತಿರುವ ಜನಸಾಮಾನ್ಯರ ಮೇಲಾಗಲಿದೆ ಎಂದು ಸಭಾತ್ಯಾಗ ನಡೆಸಿದ ತಕ್ಷಣವೇ ಮಾತನಾಡಿದ ವಿರೋಧಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಷ್ಮಾ ಸ್ವರಾಜ್ ಎದ್ದು ನಿಲ್ಲುತ್ತಿದ್ದಂತೆ ಅವರಿಗೆ ಬೆಂಬಲ ಸೂಚಿಸಿದ ಎಡಪಕ್ಷಗಳ ನಾಯಕರಾದ ಗುರುದಾಸ್ ದಾಸ್ ಗುಪ್ತಾ, ಸಮಾಜವಾದಿ ಮುಖಂಡ ಮುಲಾಯಂ ಸಿಂಗ್ ಯಾದವ್, ಆರ್‌ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಕೂಡ ಲೋಕಸಭೆಯಿಂದ ಹೊರ ನಡೆದು ಸಂಸತ್ತಿನ ಹೊರಗಡೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಲಾಲೂ, 'ಜನಸಾಮಾನ್ಯರ ಹಿತಾಸಕ್ತಿಯ ವಿರುದ್ಧ ನಡೆದುಕೊಳ್ಳುತ್ತಿರುವ ಕೇಂದ್ರ ಸರಕಾರದ್ದು ನಿರಂಕುಶ ನಡೆ. ಬಜೆಟ್‌ನಲ್ಲಿ ಹೇಳಲಾಗಿರುವ ಪೆಟ್ರೋಲ್ ಮೇಲಿನ ತೆರಿಗೆಯನ್ನು ಹಿಂದಕ್ಕೆ ಪಡೆಯದ ಹೊರತು ಸಂಸತ್ ಅಧಿವೇಶನಕ್ಕೆ ಅವಕಾಶ ನೀಡುವುದಿಲ್ಲ' ಎಂದರು.

ದಾದಾ ಮತ್ತು ದೀದೀ ಇಬ್ಬರೂ ಜನರನ್ನು ತಲುಪಲು ವಿಫಲರಾಗಿದ್ದಾರೆ. ಇಬ್ಬರೂ ಕೇವಲ ಪಶ್ಚಿಮ ಬಂಗಾಲದ ಕುರಿತು ಮಾತ್ರ ಯೋಚಿಸಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ದೀದೀಯವರನ್ನು ದೇಶ ಕಂಡಿತ್ತು. ಇಂದು ಅದು ದಾದಾರನ್ನೂ ಕಂಡಿದೆ. ಇಬ್ಬರದ್ದೂ ಕೊಲ್ಕತ್ತಾ ಕೇಂದ್ರಿತ ಬಜೆಟ್ ಎಂದು ಲಾಲೂ ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಸಂದರ್ಭದಲ್ಲಿ 'ಜೋ ಸರ್ಕಾರ್ ನಿಕಾಮಿ ಹೈ, ವೋ ಸರ್ಕಾರ್ ಬದಲಾನಿ ಹೈ' ಎಂಬ ಸರಕಾರ ವಿರೋಧಿ ಘೋಷಣೆಗಳನ್ನು (ಈ ಅಸಮರ್ಥ ಸರಕಾರವನ್ನು ನಾವು ಬದಲಾಯಿಸಬೇಕಾಗಿದೆ) ವಿರೋಧ ಪಕ್ಷಗಳ ನಾಯಕರು ಕೂಗಿದರು.

ನಾವು ಬಜೆಟ್‌ನ್ನು ಬಹಿಷ್ಕರಿಸಿದ್ದೇವೆ. ಬೆಲೆ ಏರಿಕೆಯ ಕುರಿತು ಚರ್ಚೆ ನಡೆದ ತಕ್ಷಣವೇ ಸರಕಾರವು ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯನ್ನು ಹೆಚ್ಚಳಗೊಳಿಸಿದೆ. ಇದು ಜನವಿರೋಧಿ ನೀತಿ ಎಂದು ಸುಷ್ಯಾ ಟೀಕಿಸಿದ್ದಾರೆ.

ಎನ್‌ಡಿಎ ಸಂಚಾಲಕ ಹಾಗೂ ಜೆಡಿಯು ಅಧ್ಯಕ್ಷ ಕೂಡ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬೆಲೆಯೇರಿಕೆ ಕುರಿತ ಚರ್ಚೆಯ ನಡೆದ ಬೆನ್ನಿಗೆ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಿಸಲು ನಿರ್ಧರಿಸಿರುವ ಸರಕಾರದ ಚರ್ಚೆಯ ಪಾವಿತ್ರ್ಯತೆಯನ್ನೇ ಅವರು ಪ್ರಶ್ನಿಸಿದ್ದಾರೆ.

ಇದು ಜನ ಸಾಮಾನ್ಯರಿಗೆ ಹೇಳಿದ ಬಜೆಟ್ ಅಲ್ಲ. ಈಗಾಗಲೇ ಬೆಲೆ ಏರಿಕೆಯಿಂದ ಮುಖಭಂಗ ಎದುರಿಸುತ್ತಿರುವ ಸರಕಾರವು ಇದರಿಂದ ಮತ್ತೊಂದು ಸಮಸ್ಯೆಯನ್ನು ಎದುರು ಹಾಕಿಕೊಳ್ಳಲಿದೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ