ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪಾಕ್ ಜತೆ ಸಮಗ್ರ ಮಾತುಕತೆಗೆ ವಿಶ್ವಾಸ ವೃದ್ಧಿ ಅಗತ್ಯ: ಭಾರತ (Pakistan | India | SM Krishna | foreign secretary-level talks)
Bookmark and Share Feedback Print
 
ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆಯನ್ನು ಪ್ರೋತ್ಸಾಹಕರ ಹೆಜ್ಜೆ ಎಂದು ಬಣ್ಣಿಸಿರುವ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ, ಪಾಕಿಸ್ತಾನದ ಜತೆಗಿನ ದ್ವಿಪಕ್ಷೀಯ ಮಾತುಕತೆಯು ಭಯೋತ್ಪಾದನೆ ವಿರುದ್ಧದ ಆ ದೇಶದ ಪ್ರತಿಕ್ರಿಯೆಯನ್ನು ಅವಲಂಬಿಸಿದೆ ಎಂದು ಶುಕ್ರವಾರ ಸಂಸತ್ತಿಗೆ ತಿಳಿಸಿದರು.

ಪಾಕಿಸ್ತಾನದ ಪ್ರಕಾರ ಉಭಯ ದೇಶಗಳ ನಡುವಿನ ಸಮಗ್ರ ಮಾತುಕತೆಯನ್ನು ಪುನರಾರಂಭಗೊಳಿಸಬೇಕು. ಆದರೆ ಶ್ರೇಷ್ಠ ನಂಬಿಕೆ ಮತ್ತು ಆತ್ಮವಿಶ್ವಾಸವನ್ನು ಮರು ಸ್ಥಾಪಿಸುವವರೆಗೆ ನಾವು ಇಂತಹ ದ್ವಿಪಕ್ಷೀಯ ಮಾತುಕತೆಗಾಗಿ ಕಾಯುತ್ತೇವೆ ಎಂದು ಭಾರತ ಪ್ರತಿಕ್ರಿಯೆ ನೀಡಿದೆ ಎಂದು ಲೋಕಸಭೆಗೆ ಕೃಷ್ಣ ವಿವರಣೆ ನೀಡಿದ್ದಾರೆ.

ಭಾರತ ಮತ್ತು ಪಾಕಿಸ್ತಾನಗಳ ನಡುವೆ ಗುರುವಾರ ನವದೆಹಲಿಯಲ್ಲಿ ನಡೆದ ವಿದೇಶಾಂಗ ಕಾರ್ಯದರ್ಶಿಗಳ ಮಾತುಕತೆಯ ಕುರಿತು ಅವರು ಸಂಸತ್ತಿನಲ್ಲಿ ಹೇಳಿಕೆ ನೀಡುತ್ತಿದ್ದರು.

ಎರಡು ಸರಕಾರಗಳ ನಡುವೆ ಅತ್ಯುತ್ತಮ ಸಂಬಂಧ ಮತ್ತು ಮಾತುಕತೆಯ ಪುನರಾರಂಭಕ್ಕೆ ಈ ಮಾತುಕತೆ ಪ್ರೋತ್ಸಾಹ ನೀಡಿದೆ. ಇದೇ ರೀತಿಯ ಸಂಬಂಧವನ್ನು ಮುಂದುವರಿಸಲು ಮತ್ತು ಸಂಬಂಧವನ್ನು ಉಳಿಸಿಕೊಳ್ಳಲು ಎರಡೂ ದೇಶಗಳ ವಿದೇಶಾಂಗ ಕಾರ್ಯದರ್ಶಿಗಳು ಒಪ್ಪಿಕೊಂಡಿದ್ದಾರೆ ಎಂದು ಕೃಷ್ಣ ತಿಳಿಸಿದರು.

ಅದೇ ಹೊತ್ತಿಗೆ ಭಾರತವು ಭಯೋತ್ಪಾದನೆಯ ಅಜೆಂಡಾವನ್ನು ಬದಿಗೆ ಸರಿಸಿದೆ ಎಂಬ ಆರೋಪಗಳನ್ನು ತಳ್ಳಿ ಹಾಕಿರುವ ಅವರು, ಭಾರತವು ಈ ಅಂಶದ ಕುರಿತೇ ಪಾಕಿಸ್ತಾನದ ಜತೆ ಮಾತುಕತೆಯಲ್ಲಿ ಚರ್ಚೆ ನಡೆಸಿದೆ. ಭಯೋತ್ಪಾದನೆ ನಿಗ್ರಹದ ಕುರಿತ ಭಾರತದ ನಿಲುವು ಬದಲಾಗಿಲ್ಲ ಎಂದು ಸ್ಪಷ್ಟಪಡಿಸಿದರು.

2008ರ ಮುಂಬೈ ದಾಳಿ ನಂತರ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಮಾತುಕತೆಯನ್ನು ಭಾರತ ಸ್ಥಗಿತಗೊಳಿಸಿತ್ತು. ಆದರೆ ಅಮೆರಿಕಾದ ತೀವ್ರ ಒತ್ತಡದ ಬಳಿಕ ಭಾರತವು ಪಾಕಿಸ್ತಾನದ ಜತೆ ಮಾತುಕತೆಗೆ ಮುಂದಾಗಿದ್ದು, ಗುರುವಾರ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆ ದೆಹಲಿಯಲ್ಲಿ ನಡೆದಿತ್ತು.

ಈ ಸಂದರ್ಭದಲ್ಲಿ ಭಾರತವು ಭಯೋತ್ಪಾದನೆಯ ಕುರಿತು ತನ್ನ ತೀವ್ರ ಕಳವಳವನ್ನು ವ್ಯಕ್ತಪಡಿಸಿದ್ದು, ಮುಂಬೈ ದಾಳಿಯ ಸಂಬಂಧ ಮತ್ತಷ್ಟು ಸಾಕ್ಷ್ಯಗಳನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ