ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಒಬ್ಬ ಹಿಂದೂ ಅಲ್ಲದವನು ಭಾರತೀಯನಾಗಲಾರ: ಆರೆಸ್ಸೆಸ್ (Hindu | Indian | RSS | Mohan Bhagwat)
Bookmark and Share Feedback Print
 
ಭಾರತೀಯರಾಗಿರುವವರು ಎಲ್ಲರೂ ಹಿಂದೂಗಳು ಎಂದಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗ್ವತ್, ಒಬ್ಬ ಹಿಂದೂ ಆಗಿರದ ಹೊರತು ಆತ ಭಾರತೀಯನೆನಿಸಿಕೊಳ್ಳಲಾರ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಮ್ಮ ಪ್ರಕಾರ ಹಿಂದೂ ಎನ್ನುವುದರ ಅರ್ಥ ಯಾವುದೇ ಒಂದು ಧರ್ಮವಲ್ಲ. ಅದು ಜೀವನ ಶೈಲಿ. ನಮ್ಮ ಪ್ರಕಾರ ಈ ದೇಶದ ಪ್ರತಿಯೊಬ್ಬರೂ ಹಿಂದೂಗಳೇ. ಹಿಂದೂವೆನಿಸಿಕೊಳ್ಳದ ಹೊರತು ಭಾರತೀಯನಾಗಲಾರ ಎಂದು ಆರೆಸ್ಸೆಸ್ ಮತ್ತು ಹಿಂದೂ ಸಮಾಗಮದ ವಾರ್ಷಿಕ ಕಾರ್ಯಕ್ರಮದಲ್ಲಿ ಭಾನುವಾರ ತಿಳಿಸಿದರು.

ಕೇಂದ್ರ ವಿತ್ತ ಸಚಿವ ಪ್ರಣಬ್ ಮುಖರ್ಜಿಯವರು ಮುಂಗಡ ಪತ್ರ ಮಂಡಿಸುವಾಗ ಭಾಷಣದಲ್ಲಿ ಚಾಣಕ್ಯನನ್ನು ಉಲ್ಲೇಖಿಸಿದ್ದನ್ನು ಪ್ರಸ್ತಾಪಿಸಿದ ಭಾಗ್ವತ್, ಇದು ಈಗಿನ ಸನ್ನಿವೇಶಕ್ಕೆ ಸಂಪೂರ್ಣ ವಿರುದ್ಧವಾಗಿದೆ ಎಂದರು. ಚಾಣಕ್ಯ ಆತನ ಕಾಲಕ್ಕೆ ತನ್ನ ನೀತಿಗಳು ಮೌಲ್ಯಯುತವಾಗಿವೆ ಎಂದಿದ್ದ, ಭಾರತದ ಈಗಿನ ಪರಿಸ್ಥಿತಿಗಲ್ಲ ಎಂದರು.

ಇದೇ ಸಂದರ್ಭದಲ್ಲಿ ಚೀನಾ ಮತ್ತು ಅಮೆರಿಕಾ ಎರಡೂ ದೇಶಗಳ ವಿರುದ್ಧ ಕಿಡಿ ಕಾರಿರುವ ಆರೆಸ್ಸೆಸ್ ಮುಖ್ಯಸ್ಥ, ಭಾರತವನ್ನು ಹಲವು ವಿಧಾನಗಳ ಮೂಲಕ ದುರ್ಬಲಗೊಳಿಸಲು ಈ ದೇಶಗಳು ಯತ್ನಿಸುತ್ತಿವೆ ಎಂದರು.

ಅಮೆರಿಕಾವು ತನ್ನ ದೇಶದಲ್ಲಿ ತಿರಸ್ಕೃತವಾದ ಮತ್ತು ಕಳಪೆ ಗುಣಮಟ್ಟದ ಅಗ್ಗದ ಔಷಧಿಗಳನ್ನು ಭಾರತಕ್ಕೆ ತಂದು ಹಾಕುತ್ತದೆ. ದಕ್ಷಿಣ ಏಷಿಯಾದಲ್ಲಿ ಅತೀ ಹೆಚ್ಚು ಬಲಯುತವಾದ ರಾಷ್ಟ್ರ ತಾನಲ್ಲದೇ ಬೇರೆ ಯಾರೂ ಇರಬಾರದು ಎಂಬುದನ್ನು ಖಚಿತಪಡಿಸಿಕೊಳ್ಳಲು ಚೀನಾ ಪ್ರಯತ್ನಿಸುತ್ತಿರುತ್ತದೆ ಎಂದು ಭಾಗ್ವತ್ ತಿಳಿಸಿದರು.

1947ರಲ್ಲಿ ದೇಶ ವಿಭಜನೆಗೊಂಡದ್ದರಿಂದ ಉಪಖಂಡದ ಯಾರಿಗೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಈಗಲೂ ಪಾಕಿಸ್ತಾನವು ಭಾರತಕ್ಕೆ ದೊಡ್ಡ ತಲೆನೋವಾಗಿಯೇ ಮುಂದುವರಿದಿದೆ. ಪ್ರತೀ ಬಾರಿಯೂ ಕಾಶ್ಮೀರ ವಿಚಾರವನ್ನು ಮುಂದಿಟ್ಟುಕೊಂಡು ಅದು ತಗಾದೆ ಎಬ್ಬಿಸುತ್ತದೆ. ಇದಕ್ಕಿರುವ ಒಂದೇ ಒಂಬು ಪರಿಹಾರವೆಂದರೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಭಾರತದೊಂದಿಗೆ ವಿಲೀನಗೊಳಿಸುವುದು ಎಂದು ಭಾಗ್ವತ್ ಸಲಹೆ ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ