ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪರಮಹಂಸ ನಿತ್ಯಾನಂದ ಸ್ವಾಮೀಜಿ ಕಾಮಕಾಂಡ: ಬಿಡದಿ ಪ್ರಕ್ಷುಬ್ಧ (Swami Nithyananda | Sun TV | Tamil actress | Bidadi)
Bookmark and Share Feedback Print
 
ಸ್ವಾಮೀಜಿ ಕರ್ಮಕಾಂಡ
PR
ಬೆಂಗಳೂರಿನ ಬಿಡದಿಯಲ್ಲಿ ಪ್ರಧಾನ ಆಶ್ರಮ ಹೊಂದಿರುವ ಪರಮಹಂಸ ನಿತ್ಯಾನಂದ ಸ್ವಾಮೀಜಿಯವರು ಇಬ್ಬರು ತಮಿಳು ನಟಿಯರೊಂದಿಗೆ ರಾಸಲೀಲೆ ನಡೆಸುತ್ತಿರುವ ವೀಡಿಯೋಗಳನ್ನು ತಮಿಳು ವಾಹಿನಿಯೊಂದು ಬಹಿರಂಗಪಡಿಸುತ್ತಿರುವಂತೆಯೇ, ವಿದೇಶಗಳಲ್ಲಿಯೂ ಆಶ್ರಮಗಳನ್ನು ಹೊಂದಿರುವ ಸ್ವಾಮೀಜಿ ವಿರುದ್ಧ, ಕರ್ನಾಟಕ ಮತ್ತು ತಮಿಳುನಾಡು ಸೇರಿದಂತೆ ಎಲ್ಲೆಡೆಯಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿವೆ.

ನಿತ್ಯಾನಂದ ಸ್ವಾಮೀಜಿಯ ಚೆನ್ನೈನ ಧ್ಯಾನ ಮಂದಿರ ಅಥವಾ ಹೊಟೇಲೊಂದರಲ್ಲಿ ಈ ಚಿತ್ರೀಕರಣ ನಡೆಸಲಾಗಿದೆ ಎಂದು ಹೇಳಲಾಗಿದೆ. ಆದರೆ ಇದನ್ನು ಪ್ರಸಾರ ಮಾಡಿರುವ 'ಸನ್ ನ್ಯೂಸ್' ವಾರ್ತಾವಾಹಿನಿ ಕಾಮಕಾಂಡ ನಡೆದಿರುವ ಸ್ಥಳವನ್ನು ತಿಳಿಸಿಲ್ಲ.
ನಿತ್ಯಾನಂದ ಸ್ವಾಮೀಜಿ
PR


ಇಬ್ಬರು ಜನಪ್ರಿಯ ತಮಿಳು ನಟಿಯರೊಂದಿಗೆ ಪ್ರತ್ಯೇಕ ಸಂದರ್ಭಗಳಲ್ಲಿ ಕಾಮದಾಟ ನಡೆಸುವ ಚಿತ್ರಣ ವೀಡಿಯೋ ತುಣುಕುಗಳಲ್ಲಿದ್ದು, ಮಂಗಳವಾರ ರಾತ್ರಿಯಿಂದಲೇ ವಾಹಿನಿ ಪ್ರಸಾರ ಮಾಡುತ್ತಿದೆ. ಇದರ ಬೆನ್ನಿಗೇ ಸ್ವಾಮೀಜಿ ತಲೆ ಮರೆಸಿಕೊಂಡಿದ್ದಾರೆ ಎಂದು ವರದಿಗಳು ಹೇಳಿವೆ.

ಸುಮಾರು 13 ದೇಶಗಳಲ್ಲಿ ಆಶ್ರಮಗಳನ್ನು ಹೊಂದಿರುವ ನಿತ್ಯಾನಂದ ಸ್ವಾಮೀಜಿ ಭಾರೀ ಪ್ರಮಾಣದಲ್ಲಿ ವಿದೇಶಿ ಭಕ್ತರನ್ನೂ ಆಕರ್ಷಿಸಿದ್ದರು. ತಮಿಳುನಾಡು ಸಂಜಾತ ಸ್ವಾಮೀಜಿ ಭಾರತದಾದ್ಯಂತ ನೂರಾರು ಆಶ್ರಮಗಳನ್ನು ಹೊಂದಿದ್ದಾರೆ. ಈಗ ಅವರು ವಿದೇಶಕ್ಕೆ ಪರಾರಿಯಾಗಿರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಬೆಂಗಳೂರಿನಲ್ಲಿ ಪ್ರತಿಭಟನೆ...
ಪರಮಹಂಸ ನಿತ್ಯಾನಂದ ಸ್ವಾಮೀಜಿಯ ಪ್ರಧಾನ ಆಶ್ರಮ ಬೆಂಗಳೂರಿನ ಬಿಡದಿಯಲ್ಲಿದ್ದು, ವೀಡಿಯೋ ಬಹಿರಂಗವಾಗುತ್ತಿದ್ದಂತೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಭಕ್ತರು ಸ್ವಾಮೀಜಿಗೆ ಸೇರಿದ ಆಶ್ರಮಗಳಿಗೆ ದಾಳಿ ನಡೆಸುತ್ತಾ ತಮ್ಮ ಕೋಪವನ್ನು ಪ್ರದರ್ಶಿಸುತ್ತಿದ್ದಾರೆ.

ಹಲವು ಕಡೆ ಸ್ವಾಮೀಜಿಯ ಪ್ರತಿಕೃತಿ ದಹಿಸಲಾಗಿದೆ. ಅವರಿಗೆ ಸೇರಿದ ಸೊತ್ತುಗಳಿಗೂ ಹಾನಿ ಮಾಡಲಾಗಿದೆ. ಸ್ವಾಮೀಜಿಯನ್ನು ತಕ್ಷಣವೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗುತ್ತಿದೆ. ಇದೀಗ ಪೊಲೀಸರು ಭಾರೀ ಭದ್ರತೆಯನ್ನು ಆಶ್ರಮಗಳಿಗೆ ನೀಡಿದ್ದಾರೆ ಎಂದು ವರದಿಗಳು ಹೇಳಿವೆ.

ಇಲ್ಲ.. ಇದು ಪಿತೂರಿ: ಆಶ್ರಮ
ಸೆಕ್ಸ್ ವೀಡಿಯೋ ಬಹಿರಂಗವಾಗುತ್ತಿದ್ದಂತೆ ಸ್ಪಷ್ಟನೆ ನೀಡಿರುವ ಬಿಡದಿ ಆಶ್ರಮದ ವಕ್ತಾರ ಸಚ್ಚಿದಾನಂದ ಸ್ವಾಮೀಜಿ, ಇದರ ಹಿಂದೆ ಪಿತೂರಿಯಿದೆ ಎಂದು ಆರೋಪಿಸಿದ್ದಾರೆ.

ನಿತ್ಯಾನಂದ ಸ್ವಾಮೀಜಿಯವರು ಅಪಾರ ಭಕ್ತವೃಂದವನ್ನು ಹೊಂದಿದ್ದು, ಕಳೆದ ಏಳು ವರ್ಷಗಳಿಂದ ಲಕ್ಷಗಟ್ಟಲೆ ಭಕ್ತರನ್ನು ಆಕರ್ಷಿಸಿದ್ದಾರೆ. ಅವರು ವಿವಿಧ ರೀತಿಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸನ್ ಟಿವಿ ಪ್ರಸಾರ ಮಾಡಿರುವ ವೀಡಿಯೋ ನಿಜವಾದುದಲ್ಲ, ಇದರಲ್ಲಿ ಗ್ರಾಫಿಕ್ಸ್ ಮತ್ತು ಪಿತೂರಿಗಳು ಅಡಗಿವೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ