ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಏಳು ವರ್ಷದೊಳಗಿನ ಮಕ್ಕಳಿಗೆ ಟೀವಿ ರಿಯಾಲಿಟಿ ಶೋ ನಿಷೇಧ? (NCPCR | age limit | reality TV shows | Child Rights)
Bookmark and Share Feedback Print
 
ರಿಯಾಲಿಟಿ ಪ್ರದರ್ಶನಗಳಲ್ಲಿ ಮಕ್ಕಳು ಭಾಗವಹಿಸುತ್ತಿರುವ ಬಗ್ಗೆ ಭಾರೀ ಟೀಕೆಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಕೊನೆಗೂ ಕಾರ್ಯಪ್ರವೃತ್ತವಾಗಿರುವ ಮಕ್ಕಳ ಹಕ್ಕುಗಳ ರಾಷ್ಟ್ರೀಯ ರಕ್ಷಣಾ ಆಯೋಗವು, ಏಳು ವರ್ಷದೊಳಗಿನ ಮಕ್ಕಳು ಇಂತಹ ಟಿವಿ ಪ್ರದರ್ಶನಗಳಲ್ಲಿ ಭಾಗವಹಿಸದಂತೆ ನಿಷೇಧ ಹೇರಲು ಶಿಫಾರಸು ಮಾಡಿದೆ.

ಮಕ್ಕಳ ಹಕ್ಕುಗಳ ರಾಷ್ಟ್ರೀಯ ರಕ್ಷಣಾ ಆಯೋಗದ (ಎನ್‌ಸಿಪಿಸಿಆರ್) ಆಂತರಿಕ ಸಮಿತಿಯ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದ್ದು, ಎರಡು ವಾರಗಳೊಳಗೆ ಈ ಶಿಫಾರಸನ್ನು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಹಸ್ತಾಂತರಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಈ ವಯೋಮಾನ ಮಿತಿಯನ್ನು ಕೇವಲ ರಿಯಾಲಿಟಿ ಟಿವಿ ಶೋಗಳಿಗೆ ಮಾತ್ರ ನಿಗದಿಪಡಿಸಲಾಗಿದೆ. ಧಾರಾವಾಹಿಗಳು ಅಥವಾ ಚಲನಚಿತ್ರಗಳ ಚಿತ್ರೀಕರಣ ಒತ್ತಡಪೂರ್ಣವಾಗಿಲ್ಲದೇ ಇರುವುದರಿಂದ ಇಲ್ಲಿ ಮಕ್ಕಳನ್ನು ಬಳಸಿಕೊಂಡು ನಿರ್ದೇಶಕರು ರೀಟೇಕ್‌ಗಳನ್ನು ತೆಗೆಯಬಹುದಾಗಿದೆ ಎಂದು ಎನ್‌ಸಿಪಿಸಿಆರ್ ಸದಸ್ಯೆ ಸಂಧ್ಯಾ ಬಜಾಜ್ ತಿಳಿಸಿದ್ದಾರೆ.

ಹಲವು ಟಿವಿ ಪ್ರದರ್ಶನಗಳನ್ನು ಯಾವ ರೀತಿ ಪರಿವೀಕ್ಷಣೆಗೊಳಪಡಿಸಬೇಕು ಎಂಬುದನ್ನು ಕೂಡ ಸಭೆಯಲ್ಲಿ ನಿರ್ಧರಿಸಲಾಗಿದೆ.

'ಪತಿ ಪತ್ನಿ ಔರ್ ವೋ' ಎಂಬ ಟಿವಿ ರಿಯಾಲಿಟಿ ಶೋ ಪ್ರದರ್ಶನದ ನಂತರ ಮಕ್ಕಳನ್ನು ಇಂತಹ ಪ್ರದರ್ಶನಗಳಲ್ಲಿ ಬಳಸುವ ಬಗ್ಗೆ ತೀವ್ರ ಟೀಕೆಗಳು ಕೇಳಿ ಬಂದಿದ್ದವು. ಈ ಪ್ರದರ್ಶನದಲ್ಲಿ ನೈಜ ತಂದೆ-ತಾಯಿಗಳ ಬದಲು ಇತರರನ್ನು ಹೆತ್ತವರೆಂದು ಬಿಂಬಿಸಿ ಕಾರ್ಯಕ್ರಮ ಚಿತ್ರಿಸಲಾಗಿತ್ತು.

ಅಲ್ಲದೆ ಇತ್ತೀಚಿನ ವರ್ಷದ ಅವಧಿಯಲ್ಲಿ ಹಲವು ಮಕ್ಕಳು ರಿಯಾಲಿಟಿ ಶೋಗಳ ಕಾರಣದಿಂದ ಆತ್ಮಹತ್ಯೆಗೆ ಶರಣಾಗಿರುವುದು, ಖಿನ್ನತೆಗೊಳಗಾಗಿರುವ ಪ್ರಸಂಗಗಳು ಕೂಡ ನಡೆದಿರುವುದರಿಂದ ಇಂತಹ ಮತ್ತೊಂದು ಶಿಫಾರಸನ್ನು ಮಕ್ಕಳ ಹಕ್ಕುಗಳ ರಾಷ್ಟ್ರೀಯ ರಕ್ಷಣಾ ಆಯೋಗ ಮಾಡಿದೆ.

ವರ್ಷದ ಹಿಂದೆಯೇ ಎನ್‌ಸಿಪಿಸಿಆರ್ ಇಂತಹ ಒಂದು ಶಿಫಾರಸನ್ನು ಮಾಡಲಾಗಿದ್ದರೂ ಯಾವುದೇ ಕ್ರಮಕ್ಕೆ ಸರಕಾರ ಮುಂದಾಗಿರಲಿಲ್ಲ. 16 ವರ್ಷದೊಳಗಿನವರಿಗೆ ಟಿವಿ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಲು ಅವಕಾಶ ನೀಡಬಾರದು ಎಂದು ಶಿಫಾರಸು ಮಾಡಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ