ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಆಶ್ರಮದ ಗೇಟು ಕುಸಿದು ಕಾಲ್ತುಳಿತ: 63ಕ್ಕೂ ಹೆಚ್ಚು ಸಾವು (Swami Kripaluji Maharaj | Stampede in UP | Death)
Bookmark and Share Feedback Print
 
ಉತ್ತರ ಪ್ರದೇಶದ ಪ್ರತಾಪಗಢ ಜಿಲ್ಲೆಯ ರಾಮ ಜಾನಕಿ ಮಂದಿರದಲ್ಲಿ ಗುರುವಾರ ಸಂಭವಿಸಿದ ಕಾಲ್ತುಳಿತದಲ್ಲಿ ಸುಮಾರು 65 ಮಂದಿ ಬಲಿಯಾಗಿದ್ದು, 200ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ವರದಿಗಳು ಹೇಳಿವೆ.

ದೆಹಲಿಯಿಂದ ಸುಮಾರು 180 ಕಿಲೋ ಮೀಟರ್ ದೂರದಲ್ಲಿರುವ ಕುಂಡಾ ನಗರದ ಮಂಗಢಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ದುರಂತದಲ್ಲಿ 65 ಮಂದಿ ಸಾವಿಗೀಡಾಗಿರುವುದನ್ನು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಖಚಿತಪಡಿಸಿದ್ದಾರೆ.

ಈಗಾಗಲೇ 60 ದೇಹಗಳನ್ನು ಹೊರ ತೆಗೆಯಲಾಗಿದೆ. ದುರ್ಘಟನೆಯಲ್ಲಿ ಇನ್ನೂ ಹೆಚ್ಚು ಮಂದಿ ಸಾವನ್ನಪ್ಪಿರಬಹುದು ಎಂದು ಕಾನೂನು ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್ ಪ್ರಧಾನ ನಿರ್ದೇಶಕ ಬ್ರಿಜ್ ಲಾಲ್ ತಿಳಿಸಿದ್ದಾರೆ.

ಕೃಪಾಳುಜೀ ಮಹಾರಾಜ್ ಅವರ ಪತ್ನಿಯ ಶ್ರಾದ್ಧದ ಪ್ರಯುಕ್ತ ಅನ್ನದಾನ ನಡೆಯುತ್ತಿದ್ದಾಗ, ಆಶ್ರಮದ ಗೇಟಿನ ಬಳಿ ನೂಕುನುಗ್ಗಲು ಉಂಟಾಗಿತ್ತು. ಈ ಸಂದರ್ಭದಲ್ಲಿ ಒತ್ತಡ ತಡೆದುಕೊಳ್ಳಲಾಗದ ಮುಖ್ಯ ದ್ವಾರ ಕುಸಿದು ಬಿತ್ತು. ಇದನ್ನು ಕಂಡ ಭಕ್ತರು ಭೀತಿಗೊಂಡರು ಎಂದು ಅಧಿಕಾರಿಗಳು ವಿವರಣೆ ನೀಡಿದ್ದಾರೆ.

ಈ ಮಂದಿರದ ಬೃಹದಾಕಾರದ ಮುಖ್ಯ ದ್ವಾರ ಕುಸಿದ ಪರಿಣಾಮ ಭೀತಿಗೊಂಡ ಭಕ್ತರು ಚೆಲ್ಲಾಪಿಲ್ಲಿಯಾಗಿ ಓಡಲಾರಂಭಿಸಿದಾಗ ಕಾಲ್ತುಳಿತ ಸಂಭವಿಸಿತು. ಅವಶೇಷಗಳಡಿಯಲ್ಲೇ 30 ಮಂದಿ ಸಿಲುಕಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.

ಸಿಲುಕಿ ಹಾಕಿಕೊಂಡಿರುವವರಲ್ಲಿ ಹೆಚ್ಚಿನವರು ಮಕ್ಕಳು ಮತ್ತು ಮಹಿಳೆಯರು. ಸ್ವಾಮಿ ಕೃಪಾಳುಜೀ ಮಹಾರಾಜ್ ಅವರ 'ಭಂಡಾರ' (ಭೋಜನ ಕಾರ್ಯಕ್ರಮ) ಕಾರ್ಯಕ್ರಮಕ್ಕೆಂದು ಭಾರೀ ಜನ ಸಂದೋಹ ಸೇರಿತ್ತು. ಮೂಲಗಳ ಪ್ರಕಾರ ಸ್ಥಳದಲ್ಲಿ ಲಕ್ಷಕ್ಕೂ ಹೆಚ್ಚು ಮಂದಿ ಭಕ್ತಾದಿಗಳಿದ್ದರು.

ಪೊಲೀಸರು ಮತ್ತು ಇತರ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಪರಿಹಾರ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ