ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮೊಟ್ಟೆಗಾಗಿ ಅಪ್ಪ-ಮಗಳಿಗೆ ಕಲ್ಲು ಹೊಡೆದು ಕೊಂದರು! (Egg | Father Daughter | Stone throwing)
Bookmark and Share Feedback Print
 
ರಾಂಚಿ: ಒಂದೆರಡು ರೂಪಾಯಿ ಬೆಲೆಬಾಳುವ ಕೋಳಿ ಮೊಟ್ಟೆಗಾಗಿ ತಂದೆ, ಮಗಳು ಪ್ರಾಣ ತೆರಬೇಕಾದ ವಿಚಿತ್ರ ಪ್ರಸಂಗವೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗಭೂಮ್ ಜಿಲ್ಲೆಯಿಂದ ವರದಿಯಾಗಿದೆ.

ಪೆರ್ಟೋಲ್ ಎಂಬ ಗ್ರಾಮದಲ್ಲಿ ಮುಗೈ ಸಿರ್ಕಾ ಎಂಬಾತನ ಪುತ್ರಿ ನೀತು ಎಂಬ ಏಳರ ಹರೆಯದ ಬಾಲಕಿ ನೆರೆಮನೆಯಿಂದ ಮೊಟ್ಟೆ ಕಳವು ಮಾಡಿದ್ದಳು ಎಂದು ಆರೋಪಿಸಲಾಗಿದೆ. ಇದರಿಂದಾಗಿ ಮುಗೈ ಮನೆ ಮುಂದೆ ಜಮಾಯಿಸಿದ ಆರೇಳು ಮಂದಿ, ಮನೆಯೊಳಗೆ ಕಲ್ಲುಗಳನ್ನು ತೂರತೊಡಗಿದರು. ಕಲ್ಲು ಯಾಕೆ ತೂರುತ್ತಿದ್ದೀರಿ ಎಂದು ಮುಗೈ ಕೇಳಿದಾಗ, ಅವರೆಲ್ಲರೂ ಸೇರಿಕೊಂಡು ಆತನಿಗೆ ಕಲ್ಲಿನಿಂದಲೇ ಚಚ್ಚತೊಡಗಿದರು. ಆಗ ಸಂಭವಿಸಿದ ಮೇಲಾಟದಲ್ಲಿ, ಮಗಳಿಗೂ ಹೊಡೆಯಲಾಯಿತು. ಇಬ್ಬರೂ ಸಾವನ್ನಪ್ಪಿದರು.

ಅವರಿಬ್ಬರ ತಲೆಯನ್ನು ದೊಡ್ಡ ಕಲ್ಲುಗಳಿಂದ ಚಚ್ಚಲಾಗಿತ್ತು ಮತ್ತು ದೇಹಗಳನ್ನು ಸಮೀಪದ ಅರಣ್ಯದಲ್ಲಿ ಅವಿತಿರಿಸಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಕುರಿತು ಮುಗೈ ಪತ್ನಿ ಸುಮಿತ್ರಾ ಅವರು ಪೊಲೀಸರಿಗೆ ದೂರು ನೀಡಿದ್ದು, ಐವರು ಆರೋಪಿಗಳನ್ನು ಹೆಸರಿಸಲಾಗಿದೆ. ಆರೋಪಿಗಳೀಗ ತಲೆ ಮರೆಸಿಕೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ