ತಮಿಳು ಸಿನಿಮಾ ನಟಿ ರಂಜಿತಾಳೊಂದಿಗೆ ರಸಮಯ ಭಂಗಿಗಳೊಂದಿಗೆ ಪರಮಹಂಸ ನಿತ್ಯಾನಂದ ಸ್ವಾಮೀಜಿ ಕಾಣಿಸಿಕೊಂಡಿರುವ ವೀಡಿಯೋಗಳು ಟಿವಿಗಳಲ್ಲಿ ಪ್ರಸಾರವಾಗುತ್ತಿದ್ದಂತೆ, ಅದರ ಒರಿಜಿನಲ್ ಪ್ರತಿಗಳಿಗಾಗಿ 'ಭಕ್ತರು' ದುಂಬಾಲು ಬೀಳುತ್ತಿರುವ ವರದಿಗಳು ಬಂದಿವೆ. ಈ ನಡುವೆ ಸ್ವಾಮೀಜಿಯ ಕಾಮಕಾಂಡ ಕುರಿತು ಆಸಕ್ತರು ಟ್ವಿಟ್ಟರ್‌ಗಳಲ್ಲಿ ಸಂದೇಶ ರವಾನಿಸುವುದು ಮತ್ತು ಸರ್ಚ್ ಇಂಜಿನ್‌ಗಳಲ್ಲಿ ಹುಡುಕುವುದು ಕೂಡ ದಾಖಲೆ ನಿರ್ಮಿಸಿದೆ.
ಒರಿಜಿನಲ್ಲೇ ಬೇಕು! ಚೆನ್ನೈ, ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳ ನಕಲಿ ಸಿಡಿ ಅಡ್ಡೆಗಳಲ್ಲಿ 'ಸ್ವಾಮಿಕಾಮ'ದ ಪ್ರತಿಗಳು ಎಗ್ಗಿಲ್ಲದೆ ಮಾರಾಟವಾಗುತ್ತಿವೆ. ತಮಿಳು ಪಾಕ್ಷಿಕ ನಕ್ಕೀರನ್ ಮತ್ತು ಸನ್ ಟಿವಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಸ್ವಾಮಿಯ ಪ್ರಕರಣ ಬಯಲಿಗೆ ಬಂದಿತ್ತಾದರೂ, ಮೂಲ ಪ್ರತಿಗಳು ಮಾರುಕಟ್ಟೆಗೆ ಬರಲು ಹೇಗೆ ಸಾಧ್ಯವಾಯಿತು ಎಂಬುದು ತಮಿಳುನಾಡು ಪೊಲೀಸರ ತಲೆನೋವಿಗೆ ಕಾರಣವಾಗಿದೆ.
PR
'ಟಿವಿಗಳಲ್ಲಿ ಪ್ರಸಾರವಾದ ಕತ್ತರಿ ಹಾಕಲಾದ ಪ್ರತಿಗಳ ಬದಲು ಮೂಲ ಪ್ರತಿಗಳೇ ಬೇಕೆಂದು ಪಟ್ಟು ಹಿಡಿಯುತ್ತಿದ್ದಾರೆ. ಸನ್ ಟಿವಿ ಪ್ರಸಾರ ಮಾಡಿದ್ದ ವೀಡಿಯೋದಲ್ಲಿ ಆಸಕ್ತ ಭಾಗಗಳನ್ನು ಸೆನ್ಸಾರ್ ಹೆಸರಿನಲ್ಲಿ ಕಟ್ ಮಾಡಲಾಗಿತ್ತು. ನಾವು ಮಾರಾಟ ಮಾಡುವ ಸಿಡಿಗಳಲ್ಲಿ ಪೂರ್ಣ ಪ್ರಮಾಣದ ಚಿತ್ರಣವಿದೆ. 80ರಿಂದ 100 ರೂಪಾಯಿಗಳಿಗೆ ಈ ಸಿಡಿಗಳನ್ನು ನಾವು ಮಾರಾಟ ಮಾಡುತ್ತಿದ್ದೇವೆ' ಎಂದು ಚೆನ್ನೈನ ಬರ್ಮಾ ಬಜಾರ್ ವ್ಯಾಪಾರಿ ಗೌಸ್ ಮೊಹಮ್ಮದ್ ಹೇಳುತ್ತಾರೆ.
ಇದೇ ರೀತಿ ಬೆಂಗಳೂರಿನ ಹಲವು ಕಡೆ ಸೆನ್ಸಾರ್ ಮಾಡಿರದ ನಿತ್ಯಾನಂದ-ರಂಜಿತಾ ಸಿಡಿಗಳು ಮಾರಾಟವಾಗುತ್ತಿವೆ. ಬೆಂಗಳೂರಿನಲ್ಲಿ ಹೆಚ್ಚಿನ ದರಗಳನ್ನು ವಿಧಿಸಲಾಗುತ್ತಿದೆ. ಪೊಲೀಸರಿಗೆ ತಿಳಿಯದಂತೆ ಗುಪ್ತವಾಗಿ ಈ ಚಟುವಟಿಕೆಗಳು ನಡೆಯುತ್ತಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ಸಾಮಾಜಿಕ ಸಂಪರ್ಕ ತಾಣಗಳಲ್ಲಿ... ಸಾಮಾಜಿಕ ಸಂಪರ್ಕ ತಾಣಗಳಾದ ಟ್ವಿಟ್ಟರ್, ಫೇಸ್‌ಬುಕ್‌ಗಳಲ್ಲೂ ನಿತ್ಯಾನಂದ ಸ್ವಾಮಿಯದ್ದೇ ಮಹಿಮೆ. ಕಳೆದ ಮೂರು ದಿನಗಳಲ್ಲಿ ಗೂಗಲ್ ಸರ್ಚ್ ಇಂಜಿನ್‌ನಲ್ಲಿ ಅತಿ ಹೆಚ್ಚು ಶೋಧನೆಗೊಳಗಾದ ವಿಷಯಗಳಲ್ಲಿ ಸ್ವಾಮಿಕಾಮವೂ ಒಂದು.
ಟ್ವಿಟ್ಟರ್ ಮತ್ತು ಫೇಸ್‌ಬುಕ್‌ಗಳಲ್ಲಿ ಪರಸ್ಪರ ಹಂಚಿಕೊಂಡಿರುವ ಸಂದೇಶಗಳು ಕೂಡ ತೀರಾ ಮಾರ್ಮಿಕವಾಗಿದ್ದವು. ಅದರ ಕೆಲವು ಉದಾಹರಣೆಗಳು ಇಲ್ಲಿವೆ.
* ಹಗಲು ಹೊತ್ತಿನಲ್ಲಿ 'ಸ್ವಾಮಿಗಳು', ರಾತ್ರಿ ಹೊತ್ತಿನಲ್ಲಿ 'ಸ್ವಾಮಿ+ಗಾಲ್' (ಗಾಲ್- ಗರ್ಲ್).
* ಸ್ವಾಮಿ ನಿತ್ಯಾನಂದರವರು ಬಹುಶಃ ಹರಿದ್ವಾರಕ್ಕೆ ಸೆಕ್ಸ್‌ಕೇಪಾಗಿದ್ದಾರೆ (ಸೆಕ್ಸ್+ಎಸ್ಕೇಪ್).
* ಮುಚ್ಚಿದ ಕೋಣೆಯೊಳಗೆ ಯಾರು ಸೆಕ್ಸ್ ನಡೆಸಿದರೂ ಅದು ತಪ್ಪಲ್ಲ. ಆದರೆ ತನ್ನನ್ನು ಜೀವನಮುಕ್ತ ಎಂದು ಕರೆಸಿಕೊಂಡು ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ.