ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಹಿಳೆಯರ ದಿನದಂದೇ ಕೇಂದ್ರದಿಂದ ಮಹಿಳಾ ಮೀಸಲಾತಿ ಕಾಯ್ದೆ (UPA | Women's Day | Women's Reservation Bill | Lok Sabha)
Bookmark and Share Feedback Print
 
ಈ ಬಾರಿಯ ಮಹಿಳಾ ದಿನಾಚರಣೆಯಂದು ಭಾರತೀಯ ಮಹಿಳೆಯರಿಗೆ ಕಾಂಗ್ರೆಸ್ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಕೇಂದ್ರ ಸರಕಾರವು ದೊಡ್ಡ ಕೊಡುಗೆಯನ್ನೇ ನೀಡಲಿದೆ. ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರ ಮೀಸಲಾತಿ ಕಲ್ಪಿಸುವ ಈ ಮಸೂದೆ ಮುಂದಿನ ಸೋಮವಾರ ಮಂಡನೆಯಾಗಲಿದೆ ಎಂದು ಮೂಲಗಳು ಹೇಳಿವೆ.

ಯುಪಿಎ ಕೂಟದ ಎಲ್ಲಾ ಮಿತ್ರಪಕ್ಷಗಳೂ ಈ ಮೀಸಲಾತಿ ವಿಧೇಯಕವನ್ನು ಬೆಂಬಲಿಸುತ್ತಿರುವುದರಿಂದ ಸಂಸತ್ತಿನಲ್ಲಿ ಮುಂದಿನ ವಾರ ಮಂಡನೆಯಾಗಲಿರುವ ಮಸೂದೆ ಸುಲಭವಾಗಿ ಅಂಗೀಕಾರ ಪಡೆದುಕೊಳ್ಳಬಹುದು ಎನ್ನುವುದು ಸರಕಾರದ ನಿರೀಕ್ಷೆ.

ವಿರೋಧ ಪಕ್ಷಗಳತ್ತ ಗಮನ ಹರಿಸಿದಾಗ ಬಿಜೆಪಿ ಮತ್ತು ಎಡಪಕ್ಷಗಳು ಈಗಾಗಲೇ ತಮ್ಮ ಬೆಂಬಲವನ್ನು ನೀಡಿವೆ. ರಾಷ್ಟ್ರೀಯ ಜನತಾದಳ, ಸಮಾಜವಾದಿ ಪಕ್ಷ, ಬಹುಜನ ಸಮಾಜವಾದಿ ಪಕ್ಷಗಳು ಈ ಮಸೂದೆಯನ್ನು ಈಗ ಇರುವ ಸ್ಥಿತಿಯಲ್ಲಿ ವಿರೋಧಿಸುವ ನಿಲುವನ್ನು ಈಗಾಗಲೇ ವ್ಯಕ್ತಪಡಿಸಿವೆ. ಈ ಹಿಂದೆಯೂ ಸಂಸತ್ತಿನಲ್ಲಿ ಈ ಕುರಿತು ಕೆಲವು ಪಕ್ಷಗಳು ತಮ್ಮ ವಿರೋಧವನ್ನು ತೋರಿಸಿದ್ದವು.

ಕೆಲವು ಪಕ್ಷಗಳು ಮಹಿಳಾ ಮೀಸಲಾತಿಯೊಳಗೆ ಹಿಂದುಳಿದ ವರ್ಗಗಳ ಮಹಿಳೆಯರಿಗಾಗಿ ಮೀಸಲಾತಿಯನ್ನು ನೀಡಬೇಕೆಂದು ಬೇಡಿಕೆ ಸಲ್ಲಿಸುತ್ತಿವೆ. ಇದಕ್ಕೆ ಸಂಬಂಧಪಟ್ಟಂತೆ ಹಿಂಬಾಗಿಲಿನ ಚರ್ಚೆಯೂ ಆರಂಭವಾಗಿದೆ. ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಗುರುವಾರ ಪ್ರಣಬ್ ಮುಖರ್ಜಿಯವರನ್ನು ಕಂಡು ಮಾತನಾಡಿಸಿದ್ದಾರೆ. ಕಾಂಗ್ರೆಸ್ ಪ್ರಮುಖರು ಕೂಡ ಎಲ್ಲಾ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕ್ರಮಗಳಿಗೆ ಮುಂದಾಗಿದ್ದಾರೆ ಎಂದು ಮೂಲಗಳು ಹೇಳಿವೆ.

ಈ ಕುರಿತು ಸ್ಪಷ್ಟವಾದ ನಿಲುವಿಗೆ ಬರಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಎಲ್ಲಾ ಮಹಿಳಾ ಸಂಸದೆಯರನ್ನು ಭೇಟಿ ಮಾಡಿದ್ದಾರೆ. ಲೋಕಸಭೆಯಲ್ಲಿ ಸಾಕಷ್ಟು ಸಂಖ್ಯಾಬಲವನ್ನು ಕಾಂಗ್ರೆಸ್ ಹೊಂದಿದ್ದರೂ, ಮಸೂದೆಯನ್ನು ಮೇಲ್ಮನೆಯಲ್ಲಿ ಮೊದಲು ಮಂಡಿಸಲಾಗುವುದರಿಂದ ವಿರೋಧ ಪಕ್ಷಗಳಿಂದ ತೀವ್ರ ವಿರೋಧ ಎದುರಿಸಬೇಕಾಗಬಹುದು ಎಂಬ ಭೀತಿ ಕಾಂಗ್ರೆಸ್ಸಿನದ್ದು.

ಪ್ರಸಕ್ತ ರಾಜ್ಯಸಭೆಯಲ್ಲಿ ಕಾಂಗ್ರೆಸ್ 71 ಸದಸ್ಯರನ್ನಷ್ಟೇ ಹೊಂದಿದೆ. ಎಡಪಕ್ಷಗಳು 22, ಬಿಜೆಪಿ 45 ಹಾಗೂ ಇತರ ಪಕ್ಷಗಳು 26 ಸ್ಥಾನಗಳನ್ನು ಹೊಂದಿವೆ. ರಾಜ್ಯಸಭೆಯ 233 ಸ್ಥಾನಗಳಲ್ಲಿ ಸರಕಾರಕ್ಕೆ 155 ಮತಗಳ ಬೆಂಬಲದ ಅಗತ್ಯವಿದೆ.

ಲೋಕಸಭೆಯ 544 ಸ್ಥಾನಗಳಲ್ಲಿ ಮಸೂದೆ ಅಂಗೀಕಾರಕ್ಕೆ 363 ಪರವಾದ ಮತಗಳ ಅಗತ್ಯವಿದೆ. ಯುಪಿಎ ಸರಕಾರ 410 ಸದಸ್ಯರ ಬೆಂಬಲ ಹೊಂದಿದೆ.
ಸಂಬಂಧಿತ ಮಾಹಿತಿ ಹುಡುಕಿ