ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪಾಕ್ ಜತೆ ಇನ್ನುಳಿದಿರುವುದು ಮಾತುಕತೆ ಮಾತ್ರ: ಪ್ರಧಾನಿ ಸಿಂಗ್ (Pakistan | Manmohan Singh | foreign secretary-level talks | Lok Sabha)
Bookmark and Share Feedback Print
 
ಭಾರತ ಮತ್ತು ಪಾಕಿಸ್ತಾನಗಳ ದ್ವಿಪಕ್ಷೀಯ ವಿಚಾರಗಳ ಕುರಿತು ಮತ್ತೊಂದು ದೇಶದ ಮಧ್ಯಪ್ರವೇಶ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿ ಹಾಕಿರುವ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್, ಇಸ್ಲಾಮಾಬಾದ್ ಜತೆ ಉಳಿದಿರುವುದು ಮಾತುಕತೆ ಮಾತ್ರ; ಆದರೆ ಪಾಕಿಸ್ತಾನದ ನೆಲದಿಂದ ಭಯೋತ್ಪಾದನೆ ನಿಲ್ಲದ ಹೊರತು ಅರ್ಥಪೂರ್ಣ ಚರ್ಚೆ ನಡೆಯಲು ಸಾಧ್ಯವಿಲ್ಲ ಎಂದು ಭಾರತದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಪಾಕಿಸ್ತಾನದ ಜತೆ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆ ನಡೆಸಬೇಕೆಂಬುದು ಸರಕಾರದ ಲೆಕ್ಕಾಚಾರದ ನಿರ್ಧಾರವಾಗಿತ್ತು ಎಂದಿರುವ ಅವರು, ಪಾಕಿಸ್ತಾನದ ಕಡೆಗಿನ ಭಾರತದ ನೀತಿಯು ಸ್ಥಿರ, ಎಚ್ಚರಿಕೆಯ ಮತ್ತು ವಾಸ್ತವತೆಯನ್ನು ಆಧರಿಸಿದೆ ಎಂದು ಒತ್ತಿ ಹೇಳಿದ್ದಾರೆ.

ಸೌದಿ ಅರೇಬಿಯಾದ ಮಧ್ಯಸ್ಥಿಕೆಯನ್ನು ತಾನು ಬಯಸಿದ್ದೆ ಎಂಬುದನ್ನು ನಿರಾಕರಿಸಿರುವ ಪ್ರಧಾನಿ, ಎರಡೂ ದೇಶಗಳ ನಡುವಿನ ಎಲ್ಲಾ ಸಮಸ್ಯೆಗಳು ಬಗೆಹರಿಯುವುದಿದ್ದರೆ ಅದು ದ್ವಿಪಕ್ಷೀಯ ಮಾತುಕತೆಯಿಂದಷ್ಟೇ ಸಾಧ್ಯ; ಆದರೆ ಭಾರತವನ್ನು ಗುರಿ ಮಾಡಿಕೊಂಡಿರುವ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಸ್ವೀಕಾರಾರ್ಹ ನಿಲುವನ್ನು ಅದು ಸ್ವೀಕರಿಸಿದರಷ್ಟೇ ಸಮಗ್ರ ಮಾತುಕತೆಗೆ ನಾವು ಸಿದ್ಧ ಎಂದು ಸಿಂಗ್ ಸಂದೇಶ ನೀಡಿದರು.

ನಾವು ದಕ್ಷಿಣ ಏಷಿಯಾದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ್ನು ಪರಸ್ಪರ ಮಾತುಕತೆಯಿಂದ ಪರಿಹರಿಸಿಕೊಳ್ಳಬೇಕು ಎಂಬುದನ್ನು ಅರಿಯಬೇಕು ಎಂದು ರಾಷ್ಟ್ರಪತಿ ಪ್ರತಿಭಾ ಸಿಂಗ್ ಪಾಟೀಲ್ ಅವರ ಭಾಷಣದ ವಂದನಾ ನಿರ್ಣಯ ಚರ್ಚೆ ಸಂದರ್ಭದಲ್ಲಿ ಉತ್ತರಿಸುತ್ತಾ ಸಿಂಗ್ ತಿಳಿಸಿದ್ದಾರೆ.

ಅಮೆರಿಕಾ ಒತ್ತಡದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಜತೆಗೆ ಭಾರತ ಮಾತುಕತೆಗೆ ಮುಂದಾಗಿದೆ ಎಂದು ಎಲ್.ಕೆ. ಅಡ್ವಾಣಿ ಮಾಡಿದ್ದ ಆರೋಪಕ್ಕೆ ತಿರುಗೇಟು ನೀಡಿದ ಮನಮೋಹನ್ ಸಿಂಗ್, ಬಿಜೆಪಿ ಸಂಸತ್ತಿನಲ್ಲಿ ತಪ್ಪು ಮಾಹಿತಿಯನ್ನು ಹರಡುತ್ತಿದೆ ಎಂದು ಆರೋಪಿಸಿದರು.

ಅಮೆರಿಕಾ ಒತ್ತಡದಿಂದ ಪಾಕಿಸ್ತಾನದ ಜತೆಗಿನ ಮಾತುಕತೆಯನ್ನು ಆರಂಭಿಸಿಲ್ಲ ಎಂದು ಇದೇ ಸಂದರ್ಭದಲ್ಲಿ ಅವರು ಸ್ಪಷ್ಟಪಡಿಸಿದರು.

ಫೆಬ್ರವರಿ 25ರಂದು ನವದೆಹಲಿಯಲ್ಲಿ ಭಾರತ ಮತ್ತು ಪಾಕಿಸ್ತಾನಗಳ ವಿದೇಶಾಂಗ ಕಾರ್ಯದರ್ಶಿಗಳ ನಡುವೆ ಮಾತುಕತೆ ನಡೆದಿತ್ತು. ಭಾರತದ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಅವರು ಸಲ್ಮಾನ್ ಬಶೀರ್ ಅವರೊಂದಿಗೆ ಮಾತುಕತೆ ಸಂದರ್ಭದಲ್ಲಿ ಪಾಕಿಸ್ತಾನ ನೆಲದಿಂದ ಭಾರತದ ವಿರುದ್ಧ ನಡೆಯುತ್ತಿರುವ ಭಯೋತ್ಪಾದನೆಯ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ