ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಿತ್ಯಾನಂದ ಸ್ವಾಮಿ ಲೀಲೆಯ ನಟಿ ರಂಜಿತಾ ಆತ್ಮಹತ್ಯೆ ಯತ್ನ? (Ranjitha | Paramahamsa Nityananda Swami | Swami scandal | Kannada films)
Bookmark and Share Feedback Print
 
PR
ಪರಮಹಂಸ ನಿತ್ಯಾನಂದ ಸ್ವಾಮೀಜಿಯ ರಾಸಲೀಲೆಯ ವೀಡಿಯೋ ಮಾಧ್ಯಮಗಳಲ್ಲಿ ಬಹಿರಂಗವಾಗುತ್ತಿದ್ದಂತೆ ಇದರಲ್ಲಿ ಪಾಲ್ಗೊಂಡಿದ್ದಾಳೆ ಎಂದು ಹೇಳಲಾಗಿರುವ ತಮಿಳು ನಟಿ ರಂಜಿತಾ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಮೂಲಗಳು ಹೇಳಿವೆ.

ಮಾಧ್ಯಮಗಳಲ್ಲಿ ತನ್ನ ಹೆಸರು ರಾರಾಜಿಸುತ್ತಿರುವಂತೆ ಕಂಗೆಟ್ಟ ನಟಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆಂದು ಹೇಳಲಾಗಿದೆಯಾದರೂ, ಪ್ರಸಕ್ತ ಆಕೆ ಎಲ್ಲಿದ್ದಾಳೆ ಮತ್ತು ಯಾವ ಸ್ಥಿತಿಯಲ್ಲಿದ್ದಾಳೆ ಎಂಬ ವಿವರಗಳು ಲಭ್ಯವಿಲ್ಲ.

ರಂಜಿತಾ ತಮಿಳುನಾಡಿನಲ್ಲಿ ಹೊಂದಿರುವ ಎರಡೂ ಮನೆಗಳು (ಸೆಂಟ್ರಲ್ ಚೆನ್ನೈ ಮತ್ತು ಟಿ-ನಗರದ ಹಬೀಬುಲ್ಲಾ ರಸ್ತೆಯಲ್ಲಿ) ಮುಚ್ಚಿದ ಬಾಗಿಲಿನೊಂದಿಗೆ ಸ್ವಾಗತಿಸುತ್ತಿವೆ. ಆಕೆಯ ಕುಟುಂಬದವರೂ ಪ್ರತಿಕ್ರಿಯೆಗೆ ಸಿಗುತ್ತಿಲ್ಲ. ಈ ನಡುವೆ ಆಕೆ ಬೆಂಗಳೂರಿನಲ್ಲೇ ಇದ್ದಾಳೆ ಎಂದೂ ಹೇಳಲಾಗುತ್ತಿದೆ.

ರಂಜಿತಾಳಿಗೆ ತಿರುಗುಬಾಣ?
ಮೂಲವೊಂದರ ಪ್ರಕಾರ ಈ ವೀಡಿಯೋವನ್ನು ಮಾಡಿಸಿದ್ದು ಸ್ವತಃ ರಂಜಿತಾಳೇ. ಆದರೆ ಇದು ಈ ರೀತಿ ತಿರುಗುಬಾಣವಾಗುತ್ತದೆ ಎಂಬುದನ್ನು ಆಕೆ ನಿರೀಕ್ಷಿಸಿರಲಿಲ್ಲ. ಆಧ್ಯಾತ್ಮಿಕ ಗುರುವನ್ನು ಬ್ಲ್ಯಾಕ್‌ಮೇಲ್ ಮಾಡಲೆಂದು ಈ ತಂತ್ರ ರೂಪಿಸಿ ಕೃತ್ಯವನ್ನೆಸಗಿದ ಬಳಿಕ ಉರುಳು ಸ್ವತಃ ತನ್ನ ಕತ್ತಿಗೆ ಬರುತ್ತಿದ್ದಂತೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಹೇಳಲಾಗುತ್ತಿದೆ.

ಇದಕ್ಕೆ ಪೂರಕವೆನ್ನುವಂತೆ ರಂಜಿತಾ ಸ್ವಾಮೀಜಿಯವರ ಆಶ್ರಮಕ್ಕೆ ಆಗಾಗ ಭೇಟಿ ನೀಡುತ್ತಿದ್ದುದನ್ನು ಸ್ವತಃ ಸ್ವಾಮೀಜಿಯ ವಕೀಲರು ಒಪ್ಪಿಕೊಂಡಿದ್ದಾರೆ.

ನಿತ್ಯಾನಂದ ಸ್ವಾಮೀಜಯವರ ವಕೀಲ ಎಂ. ಶ್ರೀಧರ್ ಎನ್ನುವವರು ಮಾಹಿತಿ ನೀಡುತ್ತಾ, 'ಪ್ರಪಾತದತ್ತ ಹೋಗುತ್ತಿರುವ ತನ್ನ ವೈಯಕ್ತಿಕ ಜೀವನವನ್ನು ಸರಿಪಡಿಸಿಕೊಳ್ಳಲು ಆಕೆ ಸ್ವಾಮೀಜಿಯವರ ಮೊರೆ ಹೋಗಿದ್ದಳು. ತನ್ನ ಸಂಸಾರ ನೌಕೆಯನ್ನು ಸರಿಪಡಿಸಿಕೊಳ್ಳುವುದು ಆಕೆಯ ಉದ್ದೇಶವಾಗಿತ್ತು. ಸ್ವಲ್ಪವೇ ಸಮಯದಲ್ಲಿ ಆಕೆ ಸ್ವಾಮೀಜಿಯವರ ಭಕ್ತಳಾಗಿ ಹೋದಳು' ಎನ್ನುತ್ತಾರೆ.

ಆದರೆ ವೀಡಿಯೋದಲ್ಲಿರುವ ಚಿತ್ರಣವನ್ನು ಅವರು ಸಂಪೂರ್ಣವಾಗಿ ನಿರಾಕರಿಸುತ್ತಾರೆ.

'ವೀಡಿಯೋದಲ್ಲಿರುವ ಯುವತಿ ದೃಶ್ಯದುದ್ದಕ್ಕೂ ಕತ್ತು ಮುಚ್ಚಿಕೊಳ್ಳುವ ಬಟ್ಟೆ ಧರಿಸಿದ್ದಾಳೆ. ಅಲ್ಲದೆ ಆಕೆಯ ಹಣೆಯಲ್ಲಿರುವ ಬಿಂದಿ ಒಂಚೂರೂ ಹಾನಿಗೀಡಾಗುವುದಿಲ್ಲ. ಬೆಡ್‌ರೂಂ ದೃಶ್ಯವೂ ಕೃತಕವೆನಿಸುವಂತೆ ಸಾಕಷ್ಟು ಬೆಳಕು ಹೊಂದಿದೆ. ಇದರಿಂದಲೇ ಇದೊಂದು ನಕಲಿ ವೀಡಿಯೋ ಎಂದು ಹೇಳಬಹುದಾಗಿದೆ' ಎಂದು ಶ್ರೀಧರ್ ವಿವರಣೆ ನೀಡಿದ್ದಾರೆ.

ರಂಜಿತಾ ಎಲ್ಲಿದ್ದಾರೆ ಎಂಬ ಪ್ರಶ್ನೆಗವರು, 'ಆಕೆ ಈಗ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಾರಳು. ಸ್ವಾಮೀಜಿ ವಿರುದ್ಧ ದೂರು ನೀಡುವಂತೆ ಆಕೆಯ ಮೇಲೆ ಭಾರೀ ಒತ್ತಡ ಹೇರಲಾಗುತ್ತಿದೆ. ಆದರೆ ಅವರು ಇದಕ್ಕೆ ಒಪ್ಪುತ್ತಿಲ್ಲ' ಎಂದಿದ್ದಾರೆ.
Ranjitha
PR

ಡೈವೋರ್ಸ್‌ಗಾಗಿ ಕಾಯುತ್ತಿದ್ದಾಳೆ ರಂಜಿತಾ..
ಮಿಲಿಟರಿ ಅಧಿಕಾರಿ ರಾಕೇಶ್ ಮೆನನ್ ಎಂಬವರನ್ನು ಮದುವೆಯಾಗಿದ್ದ ರಂಜಿತಾ ಬದುಕು ಮೂರಾಬಟ್ಟೆಯಾಗಿದ್ದು, ಡೈವೋರ್ಸ್‌ಗಾಗಿ ಆಕೆ ಕಾಯುತ್ತಿದ್ದಾಳೆ. ಇದನ್ನು ಸರಿಪಡಿಸಲೆಂದೇ ಆಕೆ ಸ್ವಾಮೀಜಿ ಮೊರೆ ಹೋಗಿದ್ದಳು.

ಮೂಲತಃ ಕೇರಳದವಳು ಎಂದು ಹೇಳಲಾಗಿರುವ ರಂಜಿತಾ, ಭಾರತೀರಾಜಾ ಅವರ 'ನಾಡೋಡಿ ತೆಂಡ್ರಾಲ್' ಚಿತ್ರದ ಮೂಲಕ ಬೆಳಕಿಗೆ ಬಂದವಳು. ಬಳಿಕ ಅರ್ಜುನ್ ಸರ್ಜಾ, ಕಾರ್ತಿಕ್, ಮಮ್ಮೂಟ್ಟಿ, ವಿಜಯಕಾಂತ್, ನಾನಾ ಪಾಟೇಕರ್ ಸೇರಿದಂತೆ ಹಲವರ ಜತೆ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಂಡು ಬಳಿಕ ಗೃಹಿಣಿಯಾಗುವ ನಿರ್ಧಾರಕ್ಕೆ ಬಂದಿದ್ದಳು.

ಆದರೆ ಸಂಸಾರ ನೌಕೆ ದಿಕ್ಕೆಟ್ಟಾಗ ಮತ್ತೆ ಚಿತ್ರರಂಗದತ್ತ ಮುಖ ಮಾಡಿದ್ದಳು. ಆರಂಭದಲ್ಲಿ ಕಿರುತೆರೆಯ 'ರೋಜಾ', 'ತೇಕಟ್ಟಿ ಪೊನ್ನು' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಕಾಣಿಸಿಕೊಂಡು ಬಳಿಕ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ್ದಳು. ಆಗಲೂ ತನ್ನ ಕುಟುಂಬದಲ್ಲಿ ಬಿರುಗಾಳಿಯೆದ್ದಿದೆ ಎಂಬ ವರದಿಗಳನ್ನು ಆಕೆ ತಳ್ಳಿ ಹಾಕಿದ್ದಳು.

ಕನ್ನಡದಲ್ಲೂ ನಟಿಸಿದ್ದಳು ರಂಜಿತಾ..
ಕಾಮಕಾಂಡದಲ್ಲಿ ಸಿಲುಕಿರುವ ನಟಿ ರಂಜಿತಾ ಕೆಲವು ಕನ್ನಡ ಸಿನಿಮಾಗಳಲ್ಲೂ ನಟಿಸಿದ್ದಳು. 1996ರಲ್ಲಿನ ಸಾಯಿಕುಮಾರ್ ಹೀರೋ ಆಗಿದ್ದ 'ಪೊಲೀಸ್ ಸ್ಟೋರಿ', 'ಇಂಡಿಪೆಂಡೆನ್ಸ್ ಡೇ', ಎಸ್.ವಿ. ರಾಜೇಂದ್ರಬಾಬು ನಿರ್ದೇಶನದ 'ಹೂವು-ಹಣ್ಣು' ಚಿತ್ರದಲ್ಲಿ ಲಕ್ಷ್ಮೀ, ಶ್ರುತಿ, ಪ್ರಮೀಳಾ ಜೋಶಾಯ್ ಜತೆ ರಂಜಿತಾ ನಟಿಸಿದ್ದಳು.

ಅಲ್ಲದೆ 1992ರಲ್ಲಿ ಬಿಡುಗಡೆಯಾಗಿದ್ದ ಶಿವರಾಜ್ ಕುಮಾರ್ ನಾಯಕ ನಟರಾಗಿದ್ದ 'ಪುರುಷೋತ್ತಮ' ಚಿತ್ರದಲ್ಲಿ ರಂಜಿತಾ ನಟಿಸಿದ್ದಳು ಎಂದು ಹೇಳಲಾಗುತ್ತಿದೆಯಾದರೂ ಈ ಬಗ್ಗೆ ಹೆಚ್ಚಿನ ಮಾಹಿತಿಗಳು ಲಭಿಸಿಲ್ಲ.

ಪುರಿ ಜಗನ್ನಾಥ್-ರಂಜಿತಾ ಕುಚ್ ಕುಚ್!?
ಶಿವರಾಜ್ ಕುಮಾರ್ ನಾಯಕರಾಗಿದ್ದ 'ಯುವರಾಜ', ಪುನೀತ್ ರಾಜ್‌ಕುಮಾರ್ ನಾಯಕರಾಗಿದ್ದ 'ಅಪ್ಪು' ಕನ್ನಡ ಚಿತ್ರಗಳನ್ನು ನಿರ್ದೇಶಿಸಿರುವ ಪುರಿ ಜಗನ್ನಾಥ್ ಮತ್ತು ರಂಜಿತಾ ನಡುವೆ ಏನೋ ಇತ್ತು ಎನ್ನುತ್ತಿದ್ದಾರೆ ಈ ಹಲವರು.

ತೆಲುಗಿನ ಖ್ಯಾತ ನಿರ್ದೇಶಕ ಜಗನ್ನಾಥ್ ಮತ್ತು ರಂಜಿತಾ ಹತ್ತಿರವಾಗಿದ್ದರಿಂದಲೇ ಚಿರಂಜೀವಿ ಪುತ್ರ ರಾಮ್ ಚರಣ್ ತೇಜಾ ಹೀರೋ ಆಗಿದ್ದ 'ಚಿರುತ' ಚಿತ್ರದಲ್ಲಿ ಆಕೆಗೂ ಅವಕಾಶ ನೀಡಲಾಗಿತ್ತು. ದಿನಾ ಚಿತ್ರೀಕರಣ ಮುಗಿದ ಬಳಿಕ ಅವರಿಬ್ಬರೂ ಬೇಕಾಬಿಟ್ಟಿ ಸುತ್ತಾಡುತ್ತಿದ್ದರು ಎಂದು ಟಾಲಿವುಡ್ ಹೇಳುತ್ತಿದೆ.

ಇವರಿಬ್ಬರೂ ಒಟ್ಟಿಗೆ ಬ್ಯಾಂಕಾಕ್‌ಗೂ ತೆರಳಿದ್ದರು ಎಂದೂ ವರದಿಯಾಗಿದೆ. ಆದರೆ ಜಗನ್ನಾಥ್ ಆಪ್ತರ ಪ್ರಕಾರ ಇದೆಲ್ಲ ಸುಳ್ಳು. ಅವರಿಬ್ಬರು ಹತ್ತಿರ ಬಂದಿದ್ದು ನಿಜವಾದರೂ, ಆಕೆಯ ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸುವುದು ಮಾತ್ರ ಅವರ ಉದ್ದೇಶವಾಗಿತ್ತು. ಇಲ್ಲಿ ಯಾವುದೇ ಅನೈತಿಕ ವಿಚಾರಗಳಿರಲಿಲ್ಲ ಎನ್ನುತ್ತಾರೆ.
PR

ನಿತ್ಯಾನಂದ ಭಕ್ತರಾಗಿದ್ದರು ಮೋದಿ!
ಈ ರೀತಿ ಆರೋಪಿಸುತ್ತಿರುವುದು ಗುಜರಾತ್ ಕಾಂಗ್ರೆಸ್ ಮುಖಂಡ ಅರ್ಜುನ್ ಮೊದವಾಡಿಯಾ. ನರೇಂದ್ರ ಮೋದಿಯವರು ಕಳಂಕಿತ ಸ್ವಾಮೀಜಿಯ ಜತೆ ಹಲವು ಬಾರಿ ವೇದಿಕೆ ಹಂಚಿಕೊಂಡಿದ್ದಲ್ಲದೆ, ನಿಕಟ ಸಂಬಂಧ ಹೊಂದಿದ್ದರು ಎಂದು ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಮುಖ್ಯಮಂತ್ರಿಯವರು ರಾಜ್ಯದ ಹೆಣ್ಮಕ್ಕಳ ಶಿಕ್ಷಣಕ್ಕಾಗಿ ಜಾರಿಗೊಳಿಸಿದ್ದ 'ಕನ್ಯಾ ಕೇಲಾವ್ನಿ' ಕಾರ್ಯಕ್ರಮಕ್ಕೆ ನಿತ್ಯಾನಂದ ಸ್ವಾಮಿ ಭಾರೀ ನಿಧಿಯನ್ನು ನೀಡಿದ್ದರು. ಬಳಿಕ ಸ್ವಾಮೀಜಿಯ 'ಜೀವನ ಮುಕ್ತಿ' ಎಂಬ ಪುಸ್ತಕವನ್ನು ಕೂಡ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಬಿಡುಗಡೆಗೊಳಿಸಿದ್ದರು ಎಂದು ಎಂದು ಅರ್ಜುನ್ ಹೇಳಿದ್ದಾರೆ.

ಗುಜರಾತ್ ಸರಕಾರಿ ಯೋಜನೆಗಾಗಿ ಸ್ವಾಮಿ 2.5 ಲಕ್ಷ ರೂಪಾಯಿಗಳನ್ನು ನೀಡಿದ್ದರು.

ಸ್ವಾಮಿ ಕುಂಭಮೇಳದಲ್ಲಿದ್ದಾರೆ..
ನಿತ್ಯಾನಂದ ಧ್ಯಾನಪೀಠ ಆಶ್ರಮ ನೀಡಿರುವ ಸ್ಪಷ್ಟನೆಯಿದು. ಸ್ವಾಮೀಜಿಯವರು ತಲೆ ಮರೆಸಿಕೊಂಡಿಲ್ಲ. ಅವರು ಕುಂಭಮೇಳಕ್ಕಾಗಿ ಹರಿದ್ವಾರಕ್ಕೆ ತೆರಳಿದ್ದಾರೆ. ಅಗತ್ಯ ಬಿದ್ದರೆ ಅವರು ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳುತ್ತಾರೆ ಎಂದು ಆಶ್ರಮದ ವಕ್ತಾರ ಸ್ವಾಮಿ ಆತ್ಮಕೃಪಾನಂದ ಹೇಳಿದ್ದಾರೆ.

ಸೆಕ್ಸ್ ವೀಡಿಯೋ ಬಹಿರಂಗವಾಗುತ್ತಿದ್ದಂತೆ ಕಣ್ಮರೆಯಾಗಿರುವ ಸ್ವಾಮೀಜಿ ವಿದೇಶಕ್ಕೆ ಪರಾರಿಯಾಗಿರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಅದೇ ಹೊತ್ತಿಗೆ ಮೈಸೂರಿನ ಹೊಟೇಲ್ ಅಥವಾ ಆಪ್ತರ ಮನೆಯೊಂದರಲ್ಲಿದ್ದಾರೆ ಎಂದೂ ಶಂಕಿಸಲಾಗಿದೆ.

ಬೆಂಗಳೂರು ವಿಮಾನ ನಿಲ್ದಾಣ ಸೇರಿದಂತೆ ಹಲವೆಡೆ ಮುಂಜಾಗ್ರತಾ ಕ್ರಮವಾಗಿ ಸ್ವಾಮೀಜಿಯ ಭಾವಚಿತ್ರವನ್ನು ಹಾಕಲಾಗಿದ್ದು, ಮಾಹಿತಿಯಿದ್ದರೆ ಪೊಲೀಸರಿಗೆ ತಿಳಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ