ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಯುವತಿ ಅಪಹರಿಸಿ ಕಾಮಿ ಸ್ವಾಮಿ ಅನೂಪ್ ಸಾಯಿ ಎಸ್ಕೇಪ್ ! (Ghaziabad | Priyanka | kidnapped | Sudha Srivastava | Anup Kumar Sahai,)
Bookmark and Share Feedback Print
 
ತಮಿಳುನಾಡು ಮೂಲದ ಧ್ಯಾನಪೀಠದ ನಿತ್ಯಾನಂದ ಸ್ವಾಮಿಯ ರಾಸಲೀಲೆ ವಿವಾದದ ಬೆನ್ನಲ್ಲೇ ಇದೀಗ ಉತ್ತರಪ್ರದೇಶದ 40 ಹರೆಯದ ಸ್ವಯಂಘೋಷಿತ ಸ್ವಾಮೀಜಿಯೊಬ್ಬ 27ರ ಹರೆಯದ ಯುವತಿಯನ್ನು ಅಪಹರಿಸಿಕೊಂಡು ಪರಾರಿಯಾಗಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸ್ವಯಂಘೋಷಿತ ದೇವಮಾನವ ಅನೂಪ್ ಕುಮಾರ್ ಸಾಯಿ ಅಲಿಯಾಸ್ ಸ್ವಾಮೀಜಿ(40) ಕಳೆದ ತಿಂಗಳು ಎಂಬಿಎ ಪದವೀಧರೆಯಾಗಿರುವ ಪ್ರಿಯಾಂಕಾ ಶ್ರೀವಾಸ್ತವ್ ಅಲಿಯಾಸ್ ಡೋಲ್ಲಿ (27) ಎಂಬ ಯುವತಿಯನ್ನು ಅಪಹರಿಸಿಕೊಂಡು ಹೋಗಿರುವುದಾಗಿ ಪೊಲೀಸರು ವಿವರಿಸಿದ್ದಾರೆ. ಇದೀಗ ಆತನ ವಿರುದ್ಧ ದೂರು ದಾಖಲಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.

ಘಾಜಿಯಾಬಾದ್‌ನ ರಾಜ್ ನಗರ್ ಸೆಕ್ಟರ್7ರಲ್ಲಿರುವ ಮನೆಯಿಂದ ಪ್ರಿಯಾಂಕಾ ಫೆಬ್ರುವರಿ 15ರಿಂದ ನಾಪತ್ತೆಯಾಗಿದ್ದಳು. ಆಕೆಯನ್ನು ಕಾಮಿ ಸ್ವಾಮಿ ಅನೂಪ್ ಅಪಹರಿಸಿಕೊಂಡು ಹೋಗಿರುವುದಾಗಿ ಮನೆಯವರು ದೂರು ಸಲ್ಲಿಸಿರುವುದಾಗಿ ಕಾವಿ ನಗರ ಪೊಲೀಸ್ ಠಾಣೆಯ ಪ್ರಭಾರ ಇನ್ಸ್‌ಪೆಕ್ಟರ್ ರಾಜೇಶ್ ಚೌಧರಿ ಮಾಹಿತಿ ನೀಡಿದ್ದಾರೆ.

ಹಾಲು ತರುವುದಾಗಿ ಮನೆಯಿಂದ ಹೊರಹೋಗಿದ್ದ ಪ್ರಿಯಾಂಕಾ ಮತ್ತೆ ಮನೆಗೆ ವಾಪಸಾಗಿಲ್ಲ ಎಂದು ಪ್ರಿಯಾಂಕಾ ತಾಯಿ ಸುಧಾ ಶ್ರೀವಾಸ್ತವ್ ತಿಳಿಸಿದ್ದಾರೆ.

ಯುವತಿಯ ಅಪಹರಣದ ಹಿಂದೆ ಸ್ವಾಮಿ ಅನೂಪ್ ಹಾಗೂ ಆತನ ಸಹೋದರ ಅಶುತೋಷ್ ಸಾಯಿ ಶಾಮೀಲಾಗಿರುವುದಾಗಿ ಚೌಧರಿ ಶಂಕಿಸಿದ್ದಾರೆ. ಸಾಯಿ ಘಾಜಿಯಾಬಾದ್‌ನ ಪ್ರತಾಪ್ ವಿಹಾರ್ ಸೆಕ್ಟರ್ 12ರ ಪ್ಲ್ಯಾಟ್‌ವೊಂದರಲ್ಲಿ ವಾಸ್ತವ್ಯ ಹೂಡಿದ್ದ. ಅಲ್ಲದೇ ಈ ಸ್ವಾಮಿಗೆ ಮದುವೆ ಕೂಡ ಆಗಿದ್ದು, 7ವರ್ಷದ ಮಗಳು ಇದ್ದಾಳೆ. ಅನೂಪ್‌ನ ಹೆಂಡತಿ ಮತ್ತು ಮಗಳು ಗೋರಖ್‌ಪುರದಲ್ಲಿರುವ ತಾಯಿ ಮನೆಯಲ್ಲಿದ್ದಿರುವುದಾಗಿ ಚೌಧರಿ ವಿವರಿಸಿದ್ದಾರೆ.

'ತಮ್ಮ ಮಗಳನ್ನು ಮದುವೆಯಾಗುವುದಾಗಿ ಸಾಯಿ ಇಚ್ಛೆ ವ್ಯಕ್ತಪಡಿಸಿದ್ದ. ಆದರೆ ಆತನೊಂದಿಗೆ ಮದುವೆ ಮಾಡಿಸಲು ನಾವು ಒಪ್ಪಿಗೆ ನೀಡದಿದ್ದಾಗ, ಪ್ರಿಯಾಂಕಾಳನ್ನು ಅಪಹರಿಸುವುದಾಗಿಯೂ ಆತ ಬೆದರಿಕೆಯೊಡ್ಡಿದ್ದ' ಎಂದು ಸುಧಾ ಶ್ರೀವಾಸ್ತವ್ ಹೇಳಿದ್ದಾರೆ.

ಪರಿಚಯ ಹೇಗಾಯಿತು?: 2004ರಲ್ಲಿ ಪ್ರಿಯಾಂಕಾಳ ತಂದೆ ಸಾವನ್ನಪ್ಪಿದ್ದರು. ಈ ಘಟನೆ ಬಳಿಕ ಪ್ರಿಯಾಂಕಾ ಸಾಕಷ್ಟು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಳು. ಅದಕ್ಕಾಗಿಯೇ ಆಕೆಯನ್ನು ಹಲವಾರು ವೈದ್ಯರಲ್ಲಿ ಚಿಕಿತ್ಸೆ ಕೂಡ ಮಾಡಿಸಲಾಗಿತ್ತು. ವೈದ್ಯರ ಚಿಕಿತ್ಸೆಯ ನಂತರ ಸ್ವಾಮಿ ಅನೂಪ್ ಇದಕ್ಕೆ ಉತ್ತಮ ಪರಿಹಾರ ನೀಡಬಹುದು ಎಂದು ಸ್ವತಃ ತಾಯಿಯೇ ಸಲಹೆ ನೀಡಿದ್ದರು.

ಹೀಗೆ ಸ್ವಾಮಿಯ ಬಳಿ ಕರೆದೊಯ್ದು ಪರಿಹಾರಕ್ಕಾಗಿ ಹೋಗಿ ಬರುತ್ತಿದ್ದ ನಂತರ ಪರಿಚಯ ಬೆಳೆದಿತ್ತು. ನಂತರ ಸ್ವಾಮಿ ನೇರವಾಗಿಯೇ ಮನೆಗೆ ಬರಲು ಆರಂಭಿಸಿದ್ದ. ಆ ಸಂದರ್ಭದಲ್ಲಿ ಆತನ ಮನಸ್ಸಿನಲ್ಲಿ ಚಿಕಿತ್ಸೆ ಕೊಡುವ ಉದ್ದೇಶಕ್ಕಿಂತ ಮದುವೆಯಾಗುವ ಇಚ್ಛೆಯೇ ಹೆಚ್ಚಾಗಿತ್ತು. ಮನೆಗೆ ಬಂದಾಗಲೆಲ್ಲಾ ಪ್ರಿಯಾಂಕಳನ್ನು ಮದುವೆಯಾಗುವುದಾಗಿ ಇಚ್ಛೆ ವ್ಯಕ್ತಪಡಿಸಿ, ತಾನು 50ರಿಂದ 1ಕೋಟಿ ರೂಪಾಯಿ ಕೊಡುವುದಾಗಿ ಭರವಸೆ ನೀಡಿದ್ದ ಎಂಬುದು ಸುಧಾ ಶ್ರೀವಾಸ್ತವ್ ಅಳಲು. ಇದೀಗ ಕೊನೆಗೂ ಕಪಟಿ ಸ್ವಾಮಿ ಪ್ರಿಯಾಂಕಾಳನ್ನು ಅಪಹರಿಸಿಕೊಂಡು ಪರಾರಿಯಾಗಿದ್ದಾನೆ. ಆತನ ಪತ್ತೆಗಾಗಿ ಪೊಲೀಸರು ಶೋಧ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ