ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಆಕೆ ಬಯಸಿದರೆ ಅತ್ಯಾಚಾರಿಯನ್ನೇ ಮದುವೆಯಾಗಲು ಅವಕಾಶ ನೀಡಿ' (rapist | KG Balakrishnan | Brinda Karat | Rape victim)
Bookmark and Share Feedback Print
 
ಅತ್ಯಾಚಾರದಿಂದ ಹುಟ್ಟುವ ಮಗು ಬೇಕೆಂದು ಮಹಿಳೆ ಬಯಸಿದರೆ ಅಥವಾ ಅತ್ಯಾಚಾರಿ ವ್ಯಕ್ತಿಯನ್ನೇ ಮದುವೆಯಾಗಲು ಮತ್ತು ಆತನ ಮೇಲಿನ ಅತ್ಯಾಚಾರ ಆರೋಪವನ್ನು ಕೈ ಬಿಡಲು ಬಯಸಿದರೆ ಅದಕ್ಕೆ ಅವಕಾಶ ನೀಡಬೇಕು ಎಂದು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಅಭಿಪ್ರಾಯಪಟ್ಟಿದ್ದಾರೆ.

ಅತ್ಯಾಚಾರ ಬಲಿಪಶುಗಳ ಕಲ್ಯಾಣ ಕುರಿತ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ರಾಜಾರೋಷವಾಗಿ ಪಿತ್ವತ್ವ ನಿಲುವನ್ನು ಸ್ವೀಕರಿಸಲು ಮುಂದಾಗುತ್ತಿಲ್ಲ ಎಂಬುದನ್ನು ನ್ಯಾಯಾಧೀಶರು, ವಕೀಲರು ಮತ್ತು ಸಾಮಾಜಿಕ ಕಾರ್ಯಕರ್ತರು ಖಚಿತಪಡಿಸಿಕೊಳ್ಳಬೇಕು ಎಂದು ಭಾನುವಾರ ವಿಚಾರಗೋಷ್ಠಿಯೊಂದರಲ್ಲಿ ಸಲಹೆ ನೀಡಿದರು.

2008ರಲ್ಲಿ 20,000ಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳು (ಅಂದಾಜುಗಳ ಪ್ರಕಾರ 69 ಪ್ರಕರಣಗಳಲ್ಲಿ ಕೇವಲ ಒಂದು ಮಾತ್ರ ಬಹಿರಂಗವಾಗುತ್ತದೆ) ಭಾರತದಾದ್ಯಂತ ನಡೆದಿರುವುದು ದಾಖಲಾಗಿದ್ದು, ಇವುಗಳಲ್ಲಿ ಶೇ.92ರಷ್ಟು ಬಲಿಪಶುಗಳಿಗೆ ಅತ್ಯಾಚಾರ ಮಾಡಿರುವುದು ಯಾರೆಂದು ತಿಳಿದಿರುತ್ತದೆ ಎಂದು ದಾಖಲೆಗಳು ಹೇಳುತ್ತಿರುವುದರಿಂದ ಬಾಲಕೃಷ್ಣನ್ ಅವರ ಸಲಹೆಗಳು ಮಹತ್ವದ್ದಾಗಿದೆ.

ಬಲವಂತದ ಸಂಭೋಗದಿಂದ ಗರ್ಭಿಣಿಯಾದ ಮಹಿಳೆಯು ಮಗುವಿಗೆ ಜನ್ಮ ನೀಡಲು ಬಯಸಿದರೆ ಅಥವಾ ಅತ್ಯಾಚಾರ ಮಾಡಿದ ವ್ಯಕ್ತಿಯನ್ನು ಬಲಿಪಶು ಮದುವೆಯಾಗಲು ಬಯಸಿದರೆ ಅದನ್ನು ಆಕೆಯ ಆಯ್ಕೆಗೆ ಬಿಡಬೇಕು. ಅತ್ಯಾಚಾರಿಯನ್ನು ಕ್ಷಮಿಸಲು ಆಕೆ ಒಪ್ಪಿಗೆ ಸೂಚಿಸಿದಲ್ಲಿ ಅದಕ್ಕೂ ಅವಕಾಶ ನೀಡಬೇಕು. ಇಲ್ಲಿ ಬಲಿಪಶುವಿನ ಮುಂದಿನ ಜೀವನ ಮುಖ್ಯವೆಂದು ಪರಿಗಣಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದ್ದಾರೆ.

ಅತ್ಯಾಚಾರ ಬಲಿಪಶುಗಳ ಖಚಿತ ಪುನಶ್ಚೇತನಕ್ಕೆ ಅಗತ್ಯವಿರುವ ಸಾಂಸ್ಥಿಕ ಸಾಮರ್ಥ್ಯವನ್ನು ನಿರ್ಮಿಸಲು ನಾವು ಪ್ರಾಮಾಣಿಕ ಯತ್ನಗಳನ್ನು ಮಾಡಬೇಕಿದ್ದು, ಒಂದೇ ನಿಯಮ ಎಲ್ಲರಿಗೂ ಅನ್ವಯಿಸಬೇಕು ಎಂಬ ನೀತಿಯನ್ನು ನ್ಯಾಯಾಧೀಶರು ಮತ್ತು ನೀತಿ ನಿರೂಪಕರು ರೂಪಿಸಲು ಸಾಧ್ಯವಿಲ್ಲ ಎಂದರು.

ಅತ್ಯಾಚಾರ ಪ್ರಕರಣಗಳ ತನಿಖೆಯನ್ನು ತ್ವರಿತಗತಿಯಲ್ಲಿ ನಡೆಸಲು ನ್ಯಾಯಾಲಯಗಳನ್ನು ಸ್ಥಾಪಿಸುವ ಸರಕಾರದ ಕ್ರಮವನ್ನು ಪ್ರಸ್ತಾಪಿಸಿದ ಬಾಲಕೃಷ್ಣನ್, ಆಪಾದಿತರಿಗೆ ಶಿಕ್ಷೆ ನೀಡಿದರಿಂದಷ್ಟೇ ಅತ್ಯಾಚಾರಕ್ಕೊಳಗಾದವರಿಗೆ ಒಳಿತು ಮಾಡಿದಂತಾಗುವುದಿಲ್ಲ. ಬಲಿಪಶುಗಳಿಗೆ ಸೂಕ್ತ ನೆಲೆ, ಸಮಾಲೋಚನೆ, ವೈದ್ಯಕೀಯ ಮತ್ತು ಕಾನೂನು ನೆರವು ದೊರಕಬೇಕು. ಇದಕ್ಕೆ ಸಂಬಂಧಪಟ್ಟವರು ಹೆಚ್ಚಿನ ಒತ್ತು ಕೊಡಬೇಕು ಎಂದರು.

ಆದರೆ ನ್ಯಾಯಮೂರ್ತಿಗಳ ಹೇಳಿಕೆ ಮಾನವ ಹಕ್ಕುಗಳ ಕಾರ್ಯಕರ್ತರಿಗೆ ಸಮಾಧಾನ ತಂದಂತಿಲ್ಲ.

ಅಖಿಲ ಭಾರತ ಪ್ರಜಾಸತ್ತೀಯ ಮಹಿಳಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬೃಂದಾ ಕಾರಟ್ ಪ್ರತಿಕ್ರಿಯಿಸುತ್ತಾ, 'ಅವರ ಹೇಳಿಕೆ ತೀರಾ ದುರದೃಷ್ಟಕರ ಸಂಗತಿ. ಇತ್ತೀಚಿನ ದಿನಗಳಲ್ಲಿ ಅತ್ಯಾಚಾರಿಗಳಿಗೆ ಶಿಕ್ಷೆ ಕಡಿಮೆಯಾಗುತ್ತಿದೆ. ಜತೆಗೆ ಬಲಿಪಶುಗಳಿಗೆ ಸೂಕ್ತ ಪುನಶ್ಚೇತನ ಕ್ರಮಗಳನ್ನು ಕೈಗೊಳ್ಳಲಾಗುತ್ತಿಲ್ಲ. ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳುತ್ತಿರುವುದರ ಬಗ್ಗೆ ನ್ಯಾಯಮೂರ್ತಿಗಳು ಕಳವಳ ವ್ಯಕ್ತಪಡಿಸುವುದನ್ನು ನಾವು ನಿರೀಕ್ಷಿಸುತ್ತೇವೆ' ಎಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ