ಪಕ್ಷದಿಂದ ಪದಚ್ಯುತಗೊಂಡಿದ್ದ ಸಿಪಿಐಎಂ ಮುಖಂಡ ಹಾಗೂ ತ್ರಿಪುರ ವಿಧಾನಸಭೆಯ ಮಾಜಿ ಸ್ಪೀಕರ್ ಜಿತೇಂದ್ರ ಸರ್ಕಾರ್ ಅವರು ತಮ್ಮ 4000ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ನಾನು ಸಾಂಕೇತಿಕವಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದು, ಆ ಪಕ್ಷ ಜನರ ಹಾದಿ ತಪ್ಪಿಸುತ್ತಿರುವ ಸಿಪಿಐಎಂ ವಿರುದ್ಧ ಹೋರಾಡಲು ಶಕ್ತವಾಗಿದೆ ಎಂಬುದು ನನ್ನ ಎಣಿಕೆ ಎಂದು ಸರ್ಕಾರ್ ತಿಳಿಸಿದ್ದಾರೆ.