ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಿತ್ಯಾನಂದನ ಮತ್ತೊಂದು ವೀಡಿಯೋ ಸಂದರ್ಶನ (Swami Nithyananda, Sex Scandal, Ranjitha, Video Interview)
Bookmark and Share Feedback Print
 
PR
ಸ್ವಾಮಿ ನಿತ್ಯಾನಂದರ ಕಾಮಲೀಲೆಗಳು ಚಿತ್ರ ವಿಚಿತ್ರ ತಿರುವುಗಳನ್ನು ಪಡೆದುಕೊಳ್ಳುತ್ತಾ, ನಿತ್ಯಾನಂದ ಸ್ವಾಮಿ ಎಲ್ಲಿದ್ದಾರೆಂಬ ಕುರಿತು ಗೊಂದಲಗಳು ಮುಂದುವರಿದಿರುವಂತೆಯೇ, ಸಂದರ್ಶನವೊಂದರಲ್ಲಿ ನಿತ್ಯಾನಂದ ಸ್ವಾಮಿ ಅವರು, ತಮ್ಮ ಮೇಲಿನ ಆರೋಪಗಳೆಲ್ಲಾ 'ಕುತಂತ್ರ, ಸುಳ್ಳು ಸುದ್ದಿ, ಗಾಳಿ ಸುದ್ದಿ' ಎಂದು ತಳ್ಳಿ ಹಾಕಿದ್ದಾರೆ.

ನಿತ್ಯಾನಂದ ಸ್ವಾಮಿಗೆ ನಟಿ ರಂಜಿತಾ ಮಸಾಜ್ : ಹೊಸ ಚಿತ್ರಗಳು ಬಹಿರಂಗ ಕ್ಲಿಕ್ ಮಾಡಿ.

ಸಂಶೋಧಕರೆಂದು ಹೇಳಿಕೊಂಡ ಅಮೆರಿಕ ನಿವಾಸಿ, ರಾಜೀವ್ ಮಲ್ಹೋತ್ರಾ ಎಂಬವರು ಕುಂಭಮೇಳಕ್ಕೆ ಹೋಗಿದ್ದಾರೆ ಎನ್ನಲಾಗತ್ತಿರುವ ನಿತ್ಯಾನಂದ ಸ್ವಾಮಿಯನ್ನು ಅಲ್ಲೇ ಸಂದರ್ಶಿಸಿರುವ ಕುರಿತಾದ ವೀಡಿಯೋ, ನಿತ್ಯಾನಂದ ಧ್ಯಾನಪೀಠದ ವೆಬ್ ಸೈಟಿನಲ್ಲಿ ಲಭ್ಯವಿದೆ.

ಸಂದರ್ಶನದಲ್ಲಿ ಜಮೀನು ಅಕ್ರಮ, ಶ್ರೀಗಂಧ ಪತ್ತೆ, ಅತ್ಯಾಚಾರ ಆರೋಪ, ನಿಗೂಢ ಸಾವಿನ ಆರೋಪ ಮುಂತಾದ ಪ್ರಶ್ನೆಗಳನ್ನು ಕೇಳಲಾಗಿದ್ದರೂ, ಜನರಲ್ಲಿ ಕುತೂಹಲಕ್ಕೆ ಕಾರಣವಾಗಿರುವ ರಂಜಿತಾ ಜತೆಗಿನ ಕಾಮದಾಟದ ಬಗ್ಗೆ ಪ್ರಸ್ತಾಪವೇ ಇರಲಿಲ್ಲ ಎಂಬುದು ಗಮನಾರ್ಹ. ಮಾತ್ರವಲ್ಲದೆ, ಹೊರಗಿನವರ ಸಂದರ್ಶನಕ್ಕೂ ದೊರೆಯುವ ಈ ಸ್ವಾಮೀಜಿ, ಭಾರತೀಯ ಮಾಧ್ಯಮಗಳ ಕೈಗೆ ಅಥವಾ ಪೊಲೀಸರ ಕೈಗೆ ಸಿಗುತ್ತಿಲ್ಲವೇಕೆ ಎಂಬುದೂ ಕುತೂಹಲಕರವಾಗಿದೆ.

ಜಮೀನು ಕಾನೂನುಬದ್ಧ
ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದ ನಿತ್ಯಾನಂದ, ಬಿಡದಿ ಆಶ್ರಮದ ಜಮೀನನ್ನು ಸಜ್ಜನ್ ರಾವ್ ಎಂಬ ಕೊಡುಗೈ ದಾನಿಯೊಬ್ಬರ ಕುಟುಂಬಿಕರು ನೀಡಿದ್ದು, ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲೆ ಪತ್ರಗಳೂ ಲಭ್ಯವಿದೆ. ಇದನ್ನು ವೆಬ್ ಸೈಟಿನಲ್ಲಿಯೂ ಪ್ರಕಟಿಸಲಾಗುತ್ತದೆ. ವಿನಾಯಕ ರಾವ್, ಪ್ರತಾಪ ರಾವ್, ಜೀವನರಾವ್ ಸಹೋದರರು ಆಧ್ಯಾತ್ಮಿಕತೆಯ ಮೇಲಿನ ಪ್ರೀತಿಯಿಂದ, ಭಕ್ತಿಯಿಂದ 2003ರಲ್ಲಿ ಜಮೀನು ನೀಡಿದ್ದಾರೆ. ಇಲ್ಲೇ ಒಂದು ಅಶ್ವತ್ಥ ವೃಕ್ಷ ಮತ್ತು ಶಿವ ದೇವಾಲಯವಿದ್ದು, ದೀರ್ಘಕಾಲದಿಂದ ಅದಕ್ಕೆ ಪೂಜೆ ನಡೆಯುತ್ತಿತ್ತು. ಈ ಜಮೀನನ್ನು ಕಾನೂನುಬದ್ಧವಾಗಿಯೇ ಪಡೆದುಕೊಂಡಿರುವುದಾಗಿ ಹೇಳಿದರು.

ಸಾವು ಸಹಜ, ಕೊಲೆಯಲ್ಲ
ಕೆನಡಾದ ಭಕ್ತನೊಬ್ಬನ ನಿಗೂಢ ಸಾವಿನ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ನಿತ್ಯಾನಂದ, ಆತ ಮೇಲಿನಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದು, ಆಸ್ಪತ್ರೆಗೆ ಸಾಗಿಸುವಾಗಲೇ ಮೃತಪಟ್ಟಿದ್ದ, ಈ ಬಗ್ಗೆ ಪೋಸ್ಟ್ ಮಾರ್ಟಂ ವರದಿ, ಪೊಲೀಸ್ ವರದಿಗಳು ಎಲ್ಲವೂ ಇದೆ. ಯಾವುದನ್ನೂ ಮುಚ್ಚಿ ಹಾಕಿಲ್ಲ, ಅಪರಾಧವೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಬಲವಂತವಿಲ್ಲ
ಯುವ ಜನರನ್ನು ಬಲವಂತವಾಗಿ ಆಶ್ರಮದಲ್ಲಿ ಕೂಡಿ ಹಾಕಲಾಗುತ್ತಿದ್ದು, ಈ ಬಗ್ಗೆ ಹೆತ್ತವರೆಲ್ಲ ದೂರು ನೀಡುತ್ತಿದ್ದಾರೆ ಆರೋಪಗಳಿಗೆ ಪ್ರತಿಕ್ರಿಯಿಸುತ್ತಾ,
ಎಲ್ಲರೂ ಸ್ವಇಚ್ಛೆಯಿಂದ ಆಶ್ರಮದಲ್ಲಿದ್ದಾರೆ. ಹೋಗಲು ಬಯಸಿದರೆ ಯಾರು ಬೇಕಾದರೂ ಹೋಗಬಹುದು. ಆಶ್ರಮಕ್ಕೆ ಪೂರ್ಣ ಪ್ರಮಾಣದ ಗೇಟ್ ಕೂಡ ಇಲ್ಲ, ಯಾರು ಬೇಕಾದರೂ ಬಂದು-ಹೋಗಬಹುದು ಎಂದು ಹೇಳಿದರು.

ಅತ್ಯಾಚಾರ ಆರೋಪ ಸುಳ್ಳು
ಅತ್ಯಾಚಾರ ಕುರಿತ ಆರೋಪಗಳಿಗೆ ಪ್ರತಿಕ್ರಿಯಿಸುತ್ತಾ, ಯಾರು ಕೂಡ ಇದುವರೆಗೆ ದೂರು ನೀಡಿಲ್ಲ ಎಂದರಲ್ಲದೆ, ಜನರ ದಾರಿ ತಪ್ಪಿಸಲು, ಭಯ ಹುಟ್ಟಿಸಲು ಈ ರೀತಿಯ ಸುಳ್ಳು ಗಾಳಿ ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ ಎಂದು ಆರೋಪಿಸಿದರು.

ಅಕ್ರಮ ಶ್ರೀಗಂಧ ಅಲ್ಲ
ಮಠದಲ್ಲಿ ಅಕ್ರಮ ಶ್ರೀಗಂಧದ ತುಂಡುಗಳು ಲಭಿಸಿರುವ ಆರೋಪಗಳಿಗೆ ಉತ್ತರಿಸಿದ ಅವರು, ಮಠದ ವ್ಯಾಪ್ತಿಯಲ್ಲಿ ಸಾಕಷ್ಟು ಗಂಧದ ಮರಗಳಿವೆ. ಅವುಗಳನ್ನು ಯಾರೋ ಕಳ್ಳರು ತುಂಡು ಮಾಡಿ ಒಯ್ದಿದ್ದಾರೆ. ಹೋಗುವಾಗ ಕೆಲವೊಂದು ಸಣ್ಣಪುಟ್ಟ ತುಂಡುಗಳನ್ನು ಬಿಟ್ಟು ಹೋಗಿದ್ದಾರೆ. ಈ ಬಗ್ಗೆ ನಾವು ಅರಣ್ಯ ಇಲಾಖೆಗೆ ತಿಳಿಸಿದಾಗ, ಅವರು ಇದೆಲ್ಲಾ ಸಾಮಾನ್ಯ ಎಂಬಂತೆ ನಿರ್ಲಕ್ಷಿಸಿದರು. ನೀವೇ ಬಳಸಿ ಎಂದೂ ಹೇಳಿದರು. ಈಗ ಅಕ್ರಮವಾಗಿ ಶ್ರೀಗಂಧ ಸಂಗ್ರಹಿಸಿಟ್ಟಿದ್ದಾರೆ ಎಂದು ದೂರು ನೀಡುತ್ತಿದ್ದಾರೆ. ಇದೆಲ್ಲಾ ಯಾಕೆಂಬುದೇ ಅರ್ಥವಾಗುತ್ತಿಲ್ಲ ಎಂದರು.

ಆರ್ಥಿಕ ಅವ್ಯವಹಾರವಾಗಿಲ್ಲ
ಮಠದಲ್ಲಿ ಯಾವುದೇ ಹಣಕಾಸು ಅವ್ಯವಹಾರ ನಡೆಯುತ್ತಿಲ್ಲ. ನೋಂದಾವಣೆಗೊಂಡಿರುವ ಟ್ರಸ್ಟ್ ಇದೆ. ಮನೋಹರ ಚೌಧುರಿ ಎಂಬ ಖ್ಯಾತ ಆಡಿಟರ್ ಮೂಲಕ ಲೆಕ್ಕ ಪತ್ರ ಇರಿಸಲಾಗುತ್ತಿದೆ. ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳೂ ಪಕ್ಕಾ ಇವೆ. ಇದರಲ್ಲಿ ಮುಚ್ಚಿಡುವಂಥದ್ದು ಏನೂ ಇಲ್ಲ ಎಂದರು.

ಪರಮಹಂಸ ನಿತ್ಯಾನಂದರನ್ನು ಸಂದರ್ಶಿಸಿದ್ದು ತಾವೊಬ್ಬ ಸಂಶೋಧಕ ಎಂದು ತಮ್ಮನ್ನು ಪರಿಚಯಿಸಿಕೊಂಡ ಅಮೆರಿಕದ ಪ್ರಿನ್ಸ್‌ಟನ್ ನಿವಾಸಿ ರಾಜೀವ್ ಮಲ್ಹೋತ್ರಾ. ತಾನು ಕೂಡ ಸ್ವಾಮೀಜಿಯಿಂದಜ ಪ್ರೇರಣೆ, ಬೋಧನೆ ಪಡೆದಿದ್ದು, ಸ್ವಾಮೀಜಿ ಬಗ್ಗೆ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಸತ್ಯಾಂಶ ಅರಿಯಲು ಭಾರತಕ್ಕೆ ಬಂದು, ಕುಂಭ ಮೇಳ ತಾಣದಲ್ಲಿ ಸಂದರ್ಶಿಸುತ್ತಿರುವುದಾಗಿಯೂ ಹೇಳಿಕೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ