ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕರುಣಾನಿಧಿ ಬೆಂಬಲವಿಲ್ಲದೆ ಮಹಿಳಾ ವಿಧೇಯಕವಿಲ್ಲ: ಸೋನಿಯಾ (Manmohan Singh | TN Assembly Secretariat | Sonia Gandhi | Karunanidhi M)
Bookmark and Share Feedback Print
 
ತಮಿಳುನಾಡು ವಿಧಾನಸಭೆಯ ನೂತನ ಕಟ್ಟಡವನ್ನು ಉದ್ಘಾಟನೆ ಬಳಿಕ ಮಾತನಾಡಿರುವ ಯುಪಿಎ ಹಾಗೂ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಮುಖ್ಯಮಂತ್ರಿ ಕರುಣಾನಿಧಿಯವರ ಬೆಂಬಲವಿಲ್ಲದೆ ಮಹಿಳಾ ಮೀಸಲಾತಿ ವಿಧೇಯಕವು ಜಾರಿಗೆ ಬರದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಸುಮಾರು 425 ಕೋಟಿ ರೂಪಾಯಿ ಮೊತ್ತದ ಆರು ಮಹಡಿಗಳ ವಿಧಾನಸಭಾ ನೂತನ ಕಟ್ಟಡವನ್ನು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಉದ್ಘಾಟನೆ ನಡೆಸಿದ ನಂತರ ಮಾತನಾಡಿದ ಸೋನಿಯಾ, ಮಹಿಳಾ ಮೀಸಲಾತಿ ವಿಧೇಯಕಕ್ಕೆ ಕರುಣಾನಿಧಿಯವರ ಡಿಎಂಕೆ ಸಂಪೂರ್ಣ ಬೆಂಬಲ ನೀಡಿರುವುದನ್ನು ಶ್ಲಾಘಿಸಿದರು. ಅಲ್ಲದೆ ಡಿಎಂಕೆ ಬೆಂಬಲವಿಲ್ಲದೆ ಮೀಸಲಾತಿ ಮಸೂದೆಯನ್ನು ಜಾರಿಗೆ ತರುವುದು ಸಾಧ್ಯವಿಲ್ಲ ಎಂದೂ ಹೇಳಿದರು.

ಕರುಣಾನಿಧಿಯವರು ಮುಖ್ಯಸ್ಥರಾಗಿರುವ ಡಿಎಂಕೆ ಬೆಂಬಲ ಇಲ್ಲದೆ ಇರುತ್ತಿದ್ದರೆ ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರ ಪಡೆಯುವುದು ಸಾಧ್ಯವಿರಲಿಲ್ಲ ಎಂದ ಸೋನಿಯಾ, ಕರುಣಾನಿಧಿಯವರು ಯುಪಿಎಯ ಆಧಾರಸ್ತಂಭ ಎಂದು ಬಣ್ಣಿಸಿದರು.

ಪ್ರಮುಖ ರಾಷ್ಟ್ರೀಯ ವಿಚಾರಗಳ ಕುರಿತು ನಿರ್ಧಾರ ತೆಗೆದುಕೊಳ್ಳುವಾಗ ಪ್ರಧಾನ ಮಂತ್ರಿಯವರು ಕರುಣಾನಿಧಿಯವರ ಸಲಹೆ ಪಡೆದುಕೊಳ್ಳುತ್ತಾ ಬಂದಿದ್ದಾರೆ. ಅವರ ಸಲಹೆ ಮತ್ತು ಬೆಂಬಲ ನಮಗೆ ಬಹುವಾಗಿ ಉಪಯೋಗಕ್ಕೆ ಬಂದಿದೆ ಎಂದರು.

ಚೆನ್ನೈಯ ಒಮಂತೂರರ್ ಸರಕಾರಿ ಎಸ್ಟೇಟ್‌ನಲ್ಲಿ ಇಂದು ಸಂಜೆ ನಡೆದ ಐತಿಹಾಸಿಕ ಕಾರ್ಯಕ್ರಮದಲ್ಲಿ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಆಂಧ್ರಪ್ರದೇಶ ಮುಖ್ಯಮಂತ್ರಿ ಕೆ. ರೋಸಯ್ಯ ಮುಂತಾದ ಗಣ್ಯ ವ್ಯಕ್ತಿಗಳು ಪಾಲ್ಗೊಂಡಿದ್ದರು.

ಇದಕ್ಕೂ ಮೊದಲು ಪ್ರಧಾನಿ ಸಿಂಗ್, ಸೋನಿಯಾ ಮತ್ತು ಕರುಣಾನಿಧಿಯವರು ವಿದ್ಯುತ್ ಚಾಲಿತ ಕಾರಿನಲ್ಲಿ ವಿಧಾನಸಭೆಯ ಕಟ್ಟಡದ ಒಳ ವಿನ್ಯಾಸವನ್ನು ವೀಕ್ಷಿಸಿಸಿದರು. ಇವರ ಜತೆ ರಾಜ್ಯ ಮುಖ್ಯ ಕಾರ್ಯದರ್ಶಿ ಕೆ.ಎಸ್. ಶ್ರೀಪತಿ, ಕೇಂದ್ರ ಗೃಹಸಚಿವ ಪಿ. ಚಿದಂಬರಂ ಮತ್ತು ಉಪಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮುಂತಾದವರು ಇದ್ದರು.

ವಿಶ್ವದ ಮೊತ್ತ ಮೊದಲ ಗ್ರೀನ್ ಅಸೆಂಬ್ಲಿ ಬಿಲ್ಡಿಂಗ್ ಇದಾಗಿದ್ದು, ಪ್ರಸಕ್ತ ಕಟ್ಟಡದ ಒಂದು ಭಾಗ ಮಾತ್ರ ಪೂರ್ಣಗೊಂಡಿದೆ. ಉಳಿದ ಭಾಗಗಳ ನಿರ್ಮಾಣ ಕಾರ್ಯಗಳು ಶೀಘ್ರದಲ್ಲಿಯೇ ನಡೆಯಲಿದ್ದು, ಮಾರ್ಚ್ 19ರಿಂದ ರಾಜ್ಯ ಬಜೆಟ್ ಅಧಿವೇಶನ ಇದೇ ಕಟ್ಟಡದಲ್ಲಿ ನಡೆಯಲಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ