ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತೈಲಸ್ಥಾವರ ಸ್ಫೋಟಕ್ಕೆ ಪಾಕಿಸ್ತಾನದಿಂದ ನಿರ್ದೇಶನ; ಇಬ್ಬರ ಸೆರೆ (Mumbai | ONGC | Pakistan | Oil plant)
Bookmark and Share Feedback Print
 
ಸರಕಾರಿ ಸ್ವಾಮ್ಯದ ತೈಲ ಕಂಪನಿ ಒಎನ್‌ಜಿಸಿ ಮೇಲೆ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದ ಇಬ್ಬರು ಶಂಕಿತರನ್ನು ಮಹಾರಾಷ್ಟ್ರ ಉಗ್ರನಿಗ್ರಹ ದಳ ಭಾನುವಾರ ಬಂಧಿಸಿದ್ದು, ಸಂಭಾವ್ಯ ಅಪಾಯವನ್ನು ತಪ್ಪಿಸಿದೆ. ಇವರು ಪಾಕಿಸ್ತಾನದಿಂದ ನಿರ್ದೇಶನಗಳನ್ನು ಪಡೆಯುತ್ತಿದ್ದರು ಎಂದು ಹೇಳಲಾಗಿದೆ.

ಬಂಧಿತರನ್ನು ಅಬ್ದುಲ್ ಲತೀಫ್ ರಷೀದ್ (29) ಮತ್ತು ರಿಯಾಜ್ ಆಲಿ (23) ಎಂದು ಗುರುತಿಸಲಾಗಿದೆ. ಒಎನ್‌ಜಿಸಿ ತೈಲಸ್ಥಾವರದೊಳಗಿದ್ದ ತೈಲ ಟ್ಯಾಂಕುಗಳನ್ನು ಸ್ಫೋಟಿಸಲು ಯೋಜನೆ ರೂಪಿಸಿದ್ದ ಆರೋಪಿಗಳನ್ನು ಮಾರ್ಚ್ 18ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಬಂಧಿತ ಆರೋಪಿಗಳಿಬ್ಬರೂ ಪಾಸ್‌ಪೋರ್ಟ್‌ಗಳಿಗಾಗಿ ಅರ್ಜಿ ಸಲ್ಲಿಸಿದ್ದು, ಪಾಕಿಸ್ತಾನಕ್ಕೆ ಪರಾರಿಯಾಗಲು ಯೋಜನೆ ರೂಪಿಸಿದ್ದರು. ಆದರೆ ಅದಕ್ಕೂ ಮೊದಲು ದೊಡ್ಡ ಅನಾಹುತವನ್ನು ನಡೆಸುವುದು ಅವರ ಉದ್ದೇಶವಾಗಿತ್ತು. ಒಎನ್‌ಜಿಸಿ ಸ್ಥಾವರ, ಮಂಗ್ಳಾ ಮಾರ್ಕೆಟ್ ಮತ್ತು ಟಕ್ಕರ್ ಮಾಲ್‌ಗಳನ್ನು ಅವರು ಗುರಿಯಾಗಿರಿಸಿಕೊಂಡಿದ್ದರು. ಆದರೆ ಅದಕ್ಕೂ ಮೊದಲು ನಾವು ಅವರನ್ನು ಬಂಧಿಸಿದ್ದೇವೆ ಎಂದು ಎಟಿಎಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮತ್ತೊಬ್ಬ ಅಧಿಕಾರಿಯ ಪ್ರಕಾರ ಆರೋಪಿಗಳಿಗೆ 'ಅಂಕಲ್' ಎಂದು ಹೇಳಿಕೊಂಡ ವ್ಯಕ್ತಿಯೊಬ್ಬನಿಂದ ಯಾವ ರೀತಿ ಕಾರ್ಯಾಚರಣೆ ನಡೆಸಬೇಕೆಂದು ನಿರ್ದೇಶನಗಳು ಬರುತ್ತಿದ್ದವು. ಆದರೆ ಆ ವ್ಯಕ್ತಿ ಯಾರೆಂದು ಅಧಿಕಾರಿಗಳು ಬಹಿರಂಗಪಡಿಸಿಲ್ಲ. ಆದೇಶಗಳು ಗಡಿಯಾಚೆಯಿಂದ ಬರುತ್ತಿದ್ದವೇ ಎಂಬುದರ ಕುರಿತು ನಾವು ತನಿಖೆ ನಡೆಸುತ್ತಿದ್ದೇವೆ. ಆರೋಪಿಗಳಿಂದ ಹಲವು ನಕ್ಷೆಗಳು ಹಾಗೂ ದಾಖಲೆಗಳನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಒಎನ್‌ಜಿಸಿಗೆ ಬೆದರಿಕೆಯಿರುವುದನ್ನು 10 ದಿನಗಳ ಹಿಂದೆಯೇ ಬೇಹುಗಾರಿಕಾ ಮೂಲಗಳು ತಿಳಿಸಿದ್ದವು. ಹಾಗಾಗಿ ನಾವು ಕಠಿಣ ಸೂಚನೆಗಳನ್ನು ಭದ್ರತಾ ದಳಗಳಿಗೆ ನೀಡಿದ್ದೆವು. ತಪಾಸಣೆಗಳು ಮತ್ತು ವಿಚಕ್ಷಣೆಯನ್ನು ಹೆಚ್ಚು ಜಾಗೃತಗೊಳಿಸಲಾಗಿತ್ತು. ನಾವು ಸಂಪೂರ್ಣ ಕಟ್ಟೆಚ್ಚರದಿಂದಲೇ ಇದ್ದು, ಸುರಕ್ಷತೆಯನ್ನು ಹೆಚ್ಚಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಒಎನ್‌ಜಿಸಿ ಅಧ್ಯಕ್ಷ ಆರ್.ಎಸ್. ಶರ್ಮಾ ತಿಳಿಸಿದ್ದಾರೆ.

ಗುಜರಾತ್‌ನಲ್ಲಿ ಇಬ್ಬರ ಬಂಧನ...
ನಿಷೇಧಿತ ಭಯೋತ್ಪಾದಕ ಸಂಘಟನೆ ಹಿಜ್ಬುಲ್ ಮುಜಾಹಿದೀನ್‌ಗೆ ಸೇರಿದ ಇಬ್ಬರು ಶಂಕಿತ ಉಗ್ರರನ್ನು ಅಹಮದಾಬಾದ್‌ನಲ್ಲಿ ಗುಜರಾತ್ ಉಗ್ರ ನಿಗ್ರಹ ದಳ ಬಂಧಿಸಿದೆ.

ರಾಜ್ಯದಲ್ಲಿನ ವಿಧ್ವಂಸಕ ಕೃತ್ಯಗಳಲ್ಲಿ ಪಾಲ್ಗೊಂಡಿದ್ದ ಕೆಲವು ವ್ಯಕ್ತಿಗಳನ್ನು ನಾವು ವಶಕ್ಕೆ ತೆಗೆದುಕೊಂಡಿದ್ದೇವೆ ಎಂದು ಎಟಿಎಸ್ ಮುಖ್ಯಸ್ಥ ಅಜಯ್ ತೋಮರ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ ನೀಡಲು ಅವರು ನಿರಾಕರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ