ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬರೇಲಿ ಕೋಮುಗಲಭೆ; ಮೇನಕಾ ಗಾಂಧಿಗೆ ರಾಜ್ಯ ಸರ್ಕಾರ ತಡೆ (Bareilly | Maneka Gandhi | communal violence | Maulana Khan)
Bookmark and Share Feedback Print
 
ಕೋಮು ಗಲಭೆಯಿಂದ ತತ್ತರಿಸಿರುವ ಉತ್ತರ ಪ್ರದೇಶದ ಬರೇಯಿ ನಗರಕ್ಕೆ ಸಂಸದೆ ಮೇನಕಾ ಗಾಂಧಿ ನೇತೃತ್ವದಲ್ಲಿ ಹೊರಟಿದ್ದ ಬಿಜೆಪಿಯ ಮೂರು ಸದಸ್ಯರ ತಂಡವನ್ನು ಮಾಯಾವತಿ ಸರಕಾರ ತಡೆದಿದ್ದು, ವಾಪಸ್ ಕಳುಹಿಸಿದೆ.

ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಕಳೆದ ಹಲವಾರು ದಿನಗಳಿಂದ ನಡೆಯುತ್ತಿರುವ ಸಂಘರ್ಷದಿಂದಾಗಿ ಸತತ 14ನೇ ದಿನ ಭಾನುವಾರವೂ ಕರ್ಫ್ಯೂ ಮುಂದುವರಿದಿದ್ದು, ಗಲಭೆ ಪೀಡಿತ ಜಿಲ್ಲೆಗೆ ರಾಜಕೀಯ ನಾಯಕರ ಪ್ರವೇಶ ನಿರಾಕರಿಸಲಾಗಿದೆ.

ಅಂಗಡಿ-ಮಳಿಗೆಗಳು ಮತ್ತು ವಾಹನಗಳಿಗೆ ಬೆಂಕಿ ಹಚ್ಚುವಂತೆ ಗುಂಪಿಗೆ ಪ್ರಚೋದನೆ ನೀಡುತ್ತಿದ್ದ ಆರೋಪದ ಮೇಲೆ ಇಲ್ಲಿನ ಇತೇಹಾದ್ ಇ ಮಿಲ್ಲತ್ ಕಾನ್ಫರೆನ್ಸ್ ನಾಯಕ ಮೌಲಾನಾ ಖಾನ್ ಎಂಬಾತನನ್ನು ಸೋಮವಾರ ಬಂಧಿಸಲಾಗಿತ್ತು. ಆತನನ್ನು ಗುರುವಾರ ಸಂಜೆ ಬಿಡುಗಡೆ ಮಾಡಲಾಗಿದೆ.

ಮೌಲಾನಾ ಬಿಡುಗಡೆಯಾಗುತ್ತಿದ್ದಂತೆ ಆಕ್ರೋಶಗೊಂಡ ಬಜರಂಗ ದಳ ಮತ್ತಿತರ ಸಂಘಟನೆಗಳು ಶುಕ್ರವಾರ ಮತ್ತೆ ಹಿಂಸಾಚಾರದಲ್ಲಿ ತೊಡಗಿದ ಹಿನ್ನೆಲೆಯಲ್ಲಿ ಬರೇಲಿಯಾದ್ಯಂತ ಮತ್ತೆ ಕರ್ಫ್ಯೂ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾ ಮೂಲಗಳು ತಿಳಿಸಿವೆ.

ಈ ಸಂಬಂಧ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿಯವರು ಸಮಿತಿಯೊಂದನ್ನು ರಚಿಸಿ, ಬರೇಲಿಗೆ ಭೇಟಿ ನೀಡುವಂತೆ ಸೂಚಿಸಿದ್ದರು. ಅದರಂತೆ ಮೇನಕಾ ಗಾಂಧಿ, ಗೋರಖಪುರ ಸಂಸದ ಯೋಗಿ ಆದಿತ್ಯನಾಥ್ ಮತ್ತು ಇನ್ನೊಬ್ಬ ಸದಸ್ಯರು ಸ್ಥಳಕ್ಕೆ ಹೊರಟಿದ್ದರು.

ಆದರೆ ಅವರೆಲ್ಲರನ್ನೂ ಅರ್ಧದಲ್ಲೇ ತಡೆದಿರುವ ಉತ್ತರ ಪ್ರದೇಶ ಸರಕಾರ, ವಾಪಸ್ ಹೋಗುವಂತೆ ಸೂಚನೆ ನೀಡಿದೆ. ಮೇನಕಾ ಗಾಂಧಿಯವರನ್ನು ಗಾಜಿಯಾಬಾದ್‌ನಲ್ಲಿ ತಡೆಯಲಾಯಿತಾದರೂ ಬಡಾನ್ ತನಕ ಪೊಲೀಸ್ ಕಣ್ಗಾವಲಿನಲ್ಲಿ ಪ್ರಯಾಣಿಸಲು ಅವಕಾಶ ಮಾಡಿಕೊಡಲಾಯಿತು.

ಈ ಸಂಬಂಧ ಉತ್ತರ ಪ್ರದೇಶ ಸರಕಾರದ ಮೇಲೆ ಟೀಕಾ ಪ್ರಹಾರ ನಡೆಸಿರುವ ಮೇನಕಾ, ಸರಕಾರವು ಗಲಭೆಕೋರರನ್ನು ರಕ್ಷಿಸುತ್ತಿದೆ; ಒಂದು ಸಮುದಾಯವನ್ನು ಮೆಚ್ಚಿಸುವ ಕಾರ್ಯ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.

ಧರ್ಮಗುರು ಮೌಲಾನಾ ಖಾನ್ ಎಂಬಾತನೇ ಗಲಭೆಗಳಿಗೆ ಕಾರಣ ಎಂದು ಉಲ್ಲೇಖಿಸಿದ ಮೇನಕಾ, ಆತನನ್ನು ಬಿಡುಗಡೆ ಮಾಡಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಆತನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಬಿಡುಗಡೆ ಮಾಡಲಾಗಿದೆ. ಆ ಮೂಲಕ ಒಂದು ಸಮುದಾಯವನ್ನು ಮೆಚ್ಚಿಸುವ ಕೆಲಸವನ್ನು ರಾಜ್ಯ ಸರಕಾರ ಮಾಡುತ್ತಿದೆ ಎಂದು ಮೇನಕಾ ಆರೋಪಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ