ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಡ್ಯೂಟೀಲಿ ಪೊಲೀಸ್ನೋರು ಗುಂಡು ಹಾಕಿದ್ರೆ ಒಳ್ಳೇದು: ಸಚಿವ (cops drink | Arunachal Pradesh | Home Minister | Tako Dabi)
Bookmark and Share Feedback Print
 
ಪೊಲೀಸರೇನೂ ರಾಜಕಾರಣಿಗಳು ಅಥವಾ ಮಂತ್ರಿಗಳು ಹೇಳಬೇಕೆಂದು ಇದಕ್ಕೆ ಕಾಯುತ್ತಿಲ್ಲವಾದರೂ ಸಚಿವರೊಬ್ಬರ ಹೇಳಿಕೆ ಇದೀಗ ವಿವಾದಕ್ಕೆ ಸೃಷ್ಟಿಯಾಗಿದೆ. ಅವರ ಪ್ರಕಾರ ಪೊಲೀಸರು ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಒಂಚೂರು ಕುಡಿದ್ರೆ ಕೆಲಸದಲ್ಲಿ ಉತ್ಸಾಸ ಹೆಚ್ಚುತ್ತದೆಯಂತೆ!

ಅರುಣಾಚಲ ಪ್ರದೇಶದ ಗೃಹ ಸಚಿವ ಟಾಕೋ ದಾಬಿ ಪತ್ರಕರ್ತರೊಂದಿಗೆ ಮಾತನಾಡುತ್ತಾ, ಕರ್ತವ್ಯ ನಿರತ ಪೊಲೀಸ್ ಕಾನ್ಸ್‌ಟೇಬಲ್‌ಗಳು ಅಥವಾ ಅಧಿಕಾರಿಗಳು ಒಂದೆರಡು ಪೆಗ್ ಏರಿಸಿದ್ರೆ ಅದರಿಂದ ಅವರ ಸಾಮರ್ಥ್ಯ ವೃದ್ಧಿಯಾಗುತ್ತೆ, ಚೇತನ ತುಂಬಿಸಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸಾಮಾನ್ಯವಾಗಿ ಅಧಿಕಾರಿಯೊಬ್ಬ ಕರ್ತವ್ಯದಲ್ಲಿದ್ದಾಗ ಅಥವಾ ಕಚೇರಿಯಲ್ಲಿದ್ದಾಗ ಮದ್ಯ ಕುಡಿಯೋದಿಲ್ಲ. ಆದರೆ ಅವರು ಈ ಸಂದರ್ಭದಲ್ಲಿ ಒಂದು ಅಥವಾ ಎರಡು ಪೆಗ್ ಕುಡಿದರೂ ಯಾವುದೇ ಸಮಸ್ಯೆ ಎದುರಾಗದು ಎಂದು ರಾಜ್ಯ ಸಚಿವರು ತಿಳಿಸಿದರು.

ಆದರೆ ಕುಡಿದ ನಂತರ ಕೆಟ್ಟದಾಗಿ ವರ್ತಿಸುವುದು ಮಾತ್ರ ಸರಿಯಲ್ಲ. ನಮ್ಮನ್ನೇ ನೋಡಿ, ನಾವೆಷ್ಟು ಕುಡೀತೇವೆ. ಇದು ಉತ್ಸಾಹ ತುಂಬುತ್ತದೆ. ಹಾಗೆಂದು ದುರ್ವರ್ತನೆಗೆ ಮುಂದಾಗಬಾರದು ಎಂದು ದಾಬಿ ಹೇಳಿದ್ದಾರೆ.

ರಾಜ್ಯದ ಜವಾಬ್ದಾರಿಯುತ ಅದರಲ್ಲೂ ಗೃಹಸಚಿವರೊಬ್ಬರು ಇಂತಹ ಹೇಳಿಕೆಯನ್ನು ನೀಡಿರುವುದರಿಂದ ಇದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಆದರೆ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆಗಳು ಅಥವಾ ಸ್ಪಷ್ಟನೆ ಯಾರಿಂದಲೂ ಬಂದಿಲ್ಲ.

ಆದರೆ ಕೇಂದ್ರ ಗೃಹ ಸಚಿವಾಲಯವು ದಾಬಿ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸುವ ಸಾಧ್ಯತೆಗಳಿವೆ. ಬಹುತೇಕ ರಾಷ್ಟ್ರೀಯ ಮಾಧ್ಯಮಗಳಲ್ಲಿ ಅವರು ನೀಡಿರುವ ಹೇಳಿಕೆ ಪ್ರಸಾರವಾಗಿರುವುದರಿಂದ ಸರಕಾರ ಮುಜುಗರ ಅನುಭವಿಸುತ್ತಿದ್ದು, ಮುಖ್ಯಮಂತ್ರಿ ದೊರ್ಜಿ ಖಾಂಡು ಕೂಡ ಪ್ರತಿಕ್ರಿಯೆಗೆ ನಿರಾಕರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ