ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನೋವು ಮರೆಯಲು ಹರಿದ್ವಾರ ಹೊಟೇಲಿನಲ್ಲಿ ನಿತ್ಯಾನಂದ ಧ್ಯಾನ! (Paramahamsa Nithyananda Swamy | Ranjitha | Sex scandal | Haridwara)
Bookmark and Share Feedback Print
 
ತಮಿಳು ನಟಿ ರಂಜಿತಾ ಜತೆಗಿನ ವಿವಾದಾಸ್ಪದ ವೀಡಿಯೋ ಪ್ರಕರಣದಿಂದ ಮುಜುಗರಕ್ಕೊಳಗಾಗಿರುವ ಪರಮಹಂಸ ನಿತ್ಯಾನಂದ ಸ್ವಾಮಿ ಹರಿದ್ವಾರದ ಹೊಟೇಲೊಂದರಲ್ಲಿ ನೋವು ಶಮನ ಮಾಡಲು ಧ್ಯಾನ ಮಾಡುತ್ತಿದ್ದಾರೆ.

ಇದನ್ನು ಸ್ವತಃ ಅವರೇ ಮಾಧ್ಯಮಗಳ ಮುಂದೆ ತಿಳಿಸಿದ್ದಾರೆ. ಹರಿದ್ವಾರದಿಂದ ಖಾಸಗಿ ವಾಹಿನಿಯೊಂದು ಸಂದರ್ಶನವನ್ನು ಪ್ರಕಟಿಸಿದ ಬೆನ್ನಿಗೆ ರಾಷ್ಟ್ರೀಯ ಚಾನೆಲ್‌ಗಳು ಸ್ವಾಮೀಜಿಗೆ ಮುಗಿ ಬಿದ್ದ ಬಳಿಕ, ನಾನೇನು ತಪ್ಪು ಮಾಡಿಲ್ಲ ಎಂದೂ ನಿತ್ಯಾನಂದ ಪುನರುಚ್ಛರಿಸಿದ್ದಾರೆ.

ನಿತ್ಯಾನಂದ ಸ್ವಾಮಿ ಹರಿದ್ವಾರದಲ್ಲಿದ್ದಾರೆ ಎಂಬುದನ್ನು ಖಚಿತಪಡಿಸಿಕೊಂಡ ಮಾಧ್ಯಮ ಪ್ರತಿನಿಧಿಗಳು ಅವರ ಅಡಗುದಾಣಕ್ಕೆ ಮುತ್ತಿಗೆ ಒಮ್ಮೆಲೆ ಮುತ್ತಿಗೆ ಹಾಕಿದ್ದವು. ಆರಂಭದಲ್ಲಿ ಸ್ವಾಮಿ ಸಹಚರರು ಭೇಟಿಗೆ ಅವಕಾಶ ನೀಡಲೇ ಇಲ್ಲ. ಕೊನೆಗೂ ಒತ್ತಡಕ್ಕೆ ಮಣಿದು ಹೊರಗೆ ಬಂದ ಕಳಂಕಿತ ಸ್ವಾಮಿ, ಹತ್ತಾರು ಮಾಧ್ಯಮಗಳೊಂದಿಗೆ ಮಾತಿಗಿಳಿದು ತನ್ನನ್ನು ಸಮರ್ಥಿಸಿಕೊಂಡಿದ್ದಾರೆ.
PR


ನನ್ನ ಬಗ್ಗೆ ಮಾಧ್ಯಮಗಳು ಕೆಟ್ಟದಾಗಿ ವರದಿ ಮಾಡಿರುವುದರಿಂದ ಬಹಳಷ್ಟು ನೋವನ್ನು ಅನುಭವಿಸಿದ್ದೇನೆ. ಹಲವು ಜನರಿಂದ ನನಗಾಗಿರುವ ನೋವನ್ನು ಕಡಿಮೆ ಮಾಡಲು ನಾನು ಧ್ಯಾನದ ಮೊರೆ ಹೋಗುತ್ತಿದ್ದೇನೆ ಎಂದು ನಿತ್ಯಾನಂದ ಸ್ವಾಮಿ ಈ ಸಂದರ್ಭದಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ದಯವಿಟ್ಟು ಯಾರೂ ಆತುರದ ನಿರ್ಧಾರಕ್ಕೆ ಬರಬೇಡಿ. ಮಾಧ್ಯಮಗಳು ಪ್ರಸಾರ ಮಾಡಿರುವ ವೀಡಿಯೋ ಸಂಪೂರ್ಣವಾಗಿ ನಿಜವಾದುದಲ್ಲ. ಇದರಲ್ಲಿ ಪಿತೂರಿಯಿದೆ. ಸಾಕಷ್ಟು ಬದಲಾವಣೆ ಮಾಡಲಾಗಿದೆ. ತಾಳ್ಮೆಯಿಂದ ಕಾಯಿರಿ, ಸತ್ಯ ಹೊರಗೆ ಬರುತ್ತದೆ ಎಂದು ಸ್ವಾಮಿ ತಿಳಿಸಿದ್ದಾರೆ.

ಅಲ್ಲದೆ ಭಕ್ತರು ಧ್ಯಾನದ ಮಾರ್ಗವನ್ನು ಆರಿಸುವ ಮೂಲಕ ಮನಸ್ಸನ್ನು ಶುದ್ಧಪಡಿಸಿಕೊಳ್ಳಬೇಕು. ಯಾವುದೇ ಗಾಳಿ ಸುದ್ದಿಗಳಿಗೆ ಕಿವಿಗೊಡಬಾರದು. ಸಣ್ಣಪುಟ್ಟ ವಿಚಾರಗಳಿಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಕರೆ ನೀಡಿದ್ದಾರೆ.

ನಿತ್ಯಾನಂದ ಸ್ವಾಮಿ ಹರಿದ್ವಾರದಲ್ಲಿನ ಹೊಟೇಲೊಂದರಲ್ಲಿ ಉಳಿದುಕೊಂಡಿದ್ದಾರೆ. ಆದರೆ ಹೊಟೇಲ್ ಕೊಠಡಿಯನ್ನು ಬೇರೊಬ್ಬರ ಹೆಸರಿನಲ್ಲಿ ಬುಕ್ ಮಾಡಲಾಗಿದೆ. ಯಾರ ಹೆಸರಿನಲ್ಲಿದೆ ಮುಂತಾದ ವಿವರಗಳನ್ನು ನೀಡಲು ಹೊಟೇಲ್ ಆಡಳಿತ ನಿರಾಕರಿಸಿದೆ.

ಪೊಲೀಸರಲ್ಲಿ ಪ್ರಬಲ ಸಾಕ್ಷ್ಯಗಳಿಲ್ಲ...
ನಾವು ಮೈಸೂರು, ಬೆಂಗಳೂರು, ಚೆನ್ನೈಗಳಲ್ಲಿ ಹುಡುಕುತ್ತಿದ್ದೇವೆ ಎಂದು ಹೇಳುತ್ತಾ ಬಂದಿದ್ದ ಕರ್ನಾಟಕ ಮತ್ತು ತಮಿಳುನಾಡು ಪೊಲೀಸರು ಹರಿದ್ವಾರಕ್ಕೆ ಹೋಗಿಯೇ ಇಲ್ಲ ಮತ್ತು ಸ್ವಾಮಿಯನ್ನು ಬಂಧಿಸಲು ಅಗತ್ಯವಿರುವ ಪ್ರಕರಣಗಳನ್ನು ಸರಕಾರಗಳು ದಾಖಲಿಸಿಯೇ ಇಲ್ಲ ಎಂಬ ವಿಚಾರವೂ ಬಹಿರಂಗವಾಗಿದೆ.

ವೀಡಿಯೋ ಟೇಪ್ ಪ್ರಕರಣದಲ್ಲಿ ಕಾಣಿಸಿಕೊಂಡಿರುವ ಮಹಿಳೆ ದೂರು ಕೊಡದ ಹೊರತು ಸ್ವಾಮಿ ವಿರುದ್ಧ ಕ್ರಮ ಅಸಾಧ್ಯ. ಕೇವಲ ಧಾರ್ಮಿಕ ಭಾವನೆಗಳಿಗೆ ಧಕ್ಕೆಯೆಸಗಿದ ಪ್ರಕರಣದಲ್ಲಿ ಬಂಧಿಸುವುದು ಸಾಧ್ಯವಿಲ್ಲ. ಬಿಡದಿಯಲ್ಲಿನ ಆಶ್ರಮವನ್ನು ವಶಪಡಿಸಿಕೊಳ್ಳುವುದು ಕೂಡ ಸಾಧ್ಯವಾಗುವ ಮಾತಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ