ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭಾರತದಲ್ಲಿ ಇಂಗ್ಲೀಷ್ ಸೆಕೆಂಡ್; ಕನ್ನಡಕ್ಕೆ ಭಾರೀ ಹೊಡೆತ (bilingualism | trilingualism | Kannada | English)
Bookmark and Share Feedback Print
 
ಭಾರತದಲ್ಲಿ ಹಿಂದಿಯನ್ನು ಬಿಟ್ಟರೆ ಅತೀ ಹೆಚ್ಚು ಬಳಸಲ್ಪಡುತ್ತಿರುವ ಭಾಷೆ ಇಂಗ್ಲೀಷ್ ಮತ್ತು ಕರ್ನಾಟಕದಲ್ಲಿ ಶೇ.25ರಷ್ಟು ಮಂದಿಗೆ ಕನ್ನಡ ಪ್ರಮುಖ ಭಾಷೆಯಲ್ಲ ಎಂಬ ಕುತೂಹಲಕಾರಿ ಮಾಹಿತಿಗಳು ಹೊರ ಬಿದ್ದಿವೆ.

ಇದರ ಪ್ರಕಾರ ಇಡೀ ಭಾರತದಲ್ಲಿ ಹಿಂದಿ ಭಾಷೆಯನ್ನು ಹೊರತುಪಡಿಸಿದರೆ ಅತೀ ಹೆಚ್ಚು ಜನ ಮಾತನಾಡಲು ಬಳಸುವ ಮತ್ತೊಂದು ಭಾಷೆ ಇಂಗ್ಲೀಷ್. ಅಂದರೆ ಇಂಗ್ಲೆಂಡಿನ ಒಟ್ಟು ಜನಸಂಖ್ಯೆಗಿಂತ ಎರಡು ಪಟ್ಟಿಗಿಂತಲೂ ಹೆಚ್ಚು ಮಂದಿ ಭಾರತದಲ್ಲಿ ಇಂಗ್ಲೀಷ್ ಬಳಸುತ್ತಿದ್ದಾರೆ!

ಭಾರತದಲ್ಲಿ ದ್ವಿಭಾಷಾ ಮತ್ತು ತ್ರಿಭಾಷಾ ಬಳಕೆಯ ಕುರಿತ ಜನಗಣತಿ 2001ರಿಂದ ಈ ಮಾಹಿತಿ ಬಹಿರಂಗವಾಗಿದೆ. ಇದರ ಪ್ರಕಾರ ಭಾರತದಲ್ಲಿನ ಕನಿಷ್ಠ 25.5 ಕೋಟಿ ಮಂದಿ ಎರಡು ಭಾಷೆಗಳಲ್ಲಿ ಮಾತನಾಡಬಲ್ಲವರಾಗಿದ್ದರೆ, 8.65 ಕೋಟಿ ಮಂದಿ ಮೂರು ಅಥವಾ ಅದಕ್ಕಿಂತ ಹೆಚ್ಚು ಭಾಷೆಗಳನ್ನು ಮಾತನಾಡಲು ಶಕ್ತರು. ಅಂದರೆ ಒಟ್ಟು ಜನಸಂಖ್ಯೆಯ ಅರ್ಧಕ್ಕಿಂತಲೂ ಹೆಚ್ಚು ಮಂದಿ (2001ರಂತೆ) ಒಂದಕ್ಕಿಂತ ಹೆಚ್ಚು ಭಾಷೆಯನ್ನು ತಿಳಿದುಕೊಂಡಿದ್ದಾರೆ.

ಜನಗಣತಿ ನಡೆಸುವ ಸಂದರ್ಭದಲ್ಲಿ 2.3 ಲಕ್ಷ ಮಂದಿ ಇಂಗ್ಲೀಷನ್ನೇ ಪ್ರಮುಖ ಭಾಷೆಯನ್ನಾಗಿ ಬಳಸುತ್ತಿದ್ದುದು ದಾಖಲಾಗಿದೆ. ಉಳಿದಂತೆ 8.6 ಕೋಟಿ ಮಂದಿ ತಮ್ಮ ಎರಡನೇ ಭಾಷೆಯಾಗಿ ಇಂಗ್ಲೀಷನ್ನು ಬಳಸಿದರೆ, 3.9 ಕೋಟಿ ಮಂದಿ ತಮ್ಮ ಮೂರನೇ ಭಾಷೆಯನ್ನಾಗಿ ಉಪಯೋಗಿಸುತ್ತಿದ್ದರು. ಅಂದರೆ ಒಟ್ಟಾರೆ 12.5 ಕೋಟಿಗೂ ಹೆಚ್ಚು ಮಂದಿ ಇಂಗ್ಲೀಷ್ ಭಾಷೆಯನ್ನು ಬಳಸುವ ಮೂಲಕ ದೇಶದಲ್ಲೇ ಎರಡನೇ ಅತೀ ಹೆಚ್ಚು ಬಳಕೆಯಾಗುವ ಭಾಷೆ ಎಂಬ ಕೀರ್ತಿ ಇಂಗ್ಲೀಷಿಗೆ ಸಂದಿದೆ.

ಹಿಂದಿ ಮಾತಾಡೋರು 55.14 ಕೋಟಿ...
ಇಡೀ ದೇಶದಲ್ಲಿ ಹಿಂದಿ ಭಾಷೆಯನ್ನು ಮಾತನಾಡುವವರ ಸಂಖ್ಯೆ 55.14 ಕೋಟಿ. ಇಲ್ಲಿ 42.2 ಕೋಟಿ ಮಂದಿ ಪ್ರಾಥಮಿಕ ಭಾಷೆಯನ್ನಾಗಿ ಹಿಂದಿ ಬಳಸುತ್ತಿದ್ದಾರೆ. ಉಳಿದ 9.82 ಕೋಟಿ ಮಂದಿ ದ್ವಿತೀಯ ಭಾಷೆಯನ್ನಾಗಿ ಹಾಗೂ 3.12 ಮಂದಿ ಮೂರನೇ ಭಾಷೆಯನ್ನಾಗಿ ಬಳಸುತ್ತಿದ್ದಾರೆ.

ಒಂದು ಕಾಲದಲ್ಲಿ ಭಾರತದ ಎರಡನೇ ಅತೀ ಹೆಚ್ಚು ಬಳಸಲ್ಪಡುವ ಭಾಷೆ ಎಂಬ ಹೆಸರು ಮಾಡಿದ್ದ ಬಂಗಾಲಿ 9.11 ಕೋಟಿ ಮಂದಿಯ ಬಳಕೆಯೊಂದಿಗೆ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಆ ಸ್ಥಾನಕ್ಕೆ ಇಂಗ್ಲೀಷ್ ಬಂದು ಕುಳಿತಿದೆ.

8.5 ಕೋಟಿ ಮಂದಿ ತೆಲುಗು, 8.42 ಕೋಟಿ ಮಂದಿ ಮರಾಠಿ, 6.67 ಮಂದಿ ತಮಿಳು ಹಾಗೂ 5.9 ಕೋಟಿ ಮಂದಿ ಉರ್ದು ಭಾಷೆಯನ್ನು ಬಳಸುತ್ತಿದ್ದಾರೆ ಎಂದು 2001ರ ಈ ಭಾಷಾ ಜನಗಣತಿ ವಿವರಣೆ ನೀಡಿದೆ.

ಕನ್ನಡಿಗರು ಉದಾರಿಗಳು...
ಒಟ್ಟು ಕನ್ನಡ ಮಾತನಾಡುವವರ ಸಂಖ್ಯೆ 5.08 ಕೋಟಿ. ಇವರಲ್ಲಿ ಕನ್ನಡವನ್ನು ಪ್ರಮುಖ ಭಾಷೆಯನ್ನಾಗಿ ಬಳಸುತ್ತಿರುವವರು 3.79 ಕೋಟಿ ಮಂದಿ ಮಾತ್ರ. ಉಳಿದ 1.15 ಕೋಟಿ ಮಂದಿ ತಮ್ಮ ಎರಡನೇ ಭಾಷೆಯನ್ನಾಗಿ ಹಾಗೂ 10.4 ಲಕ್ಷ ಮಂದಿ ಮೂರನೇ ಭಾಷೆಯನ್ನಾಗಿ ಕನ್ನಡವನ್ನು ಬಳಸುತ್ತಿದ್ದಾರೆ. ಅಂದರೆ ಶೇ.75ರಷ್ಟು ಮಂದಿ ಮಾತ್ರ ತಮ್ಮ ಪ್ರಮುಖ ಭಾಷೆಯನ್ನಾಗಿ ಕನ್ನಡವನ್ನು ಬಳಸುತ್ತಿದ್ದಾರೆ.

ಒಟ್ಟಾರೆ ಲೆಕ್ಕಾಚಾರದ ಪ್ರಕಾರ ಕನ್ನಡವು ಗುಜರಾತಿ ಭಾಷೆಯನ್ನು ಹಿಂದಿಕ್ಕಿದೆ. ಯಾಕೆಂದರೆ ಗುಜರಾತಿ ಭಾಷೆಯನ್ನು ಪ್ರಮುಖ ಭಾಷೆಯೆಂದು ಬಳಸುತ್ತಿರುವವರು ಕೇವಲ 61 ಲಕ್ಷ ಮಂದಿ ಮಾತ್ರ. ಒಟ್ಟಾರೆ ಲೆಕ್ಕಾಚಾರಕ್ಕೆ ತೆಗೆದುಕೊಂಡರೆ 5.03 ಕೋಟಿ ಮಂದಿಗೆ ಗುಜರಾತಿ ಗೊತ್ತಿದೆ ಮತ್ತು ಬಳಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ