ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಹೊಂದಾಣಿಕೆ ಸಮಸ್ಯೆ; ಕ್ಷಿಪಣಿ ಛೇದಕ ಉಡ್ಡಯನ ವಿಫಲ (interceptor missile | India | Advanced Air Defence | Prithvi)
Bookmark and Share Feedback Print
 
ಶತ್ರು ದೇಶಗಳ ಕ್ಷಿಪಣಿಗಳನ್ನು ನಾಶಪಡಿಸುವ ಸಾಮರ್ಥ್ಯವುಳ್ಳ ಭಾರತದ ನೂತನ ಸುಧಾರಿತ ವಾಯುರಕ್ಷಣಾ ಕ್ಷಿಪಣಿ ಛೇದಕದ ಪ್ರಯೋಗ ವಿಫಲವಾಗಿದ್ದು, ನಿಗದಿತ ಅವಧಿಯಲ್ಲಿ ಉಡ್ಡಯನ ಮಾಡಲು ಸಾಧ್ಯವಾಗಿಲ್ಲ.

ಚಾಂದಿಪುರ್‌ನಲ್ಲಿನ ಪೃಥ್ವಿ ಕ್ಷಿಪಣಿ ಮತ್ತು ವೀಲರ್ ಐಸ್ಲೆಂಡ್‌‌ನಿಂದ (ಚಾಂದಿಪುರದಿಂದ 70 ಕಿಲೋ ಮೀಟರ್ ದೂರದಲ್ಲಿರುವ ಒರಿಸ್ಸಾದ ದ್ವೀಪ) ಉಡ್ಡಯನಗೊಳ್ಳಬೇಕಿದ್ದ ದೇಶೀಯ ನಿರ್ಮಿತ ಕ್ಷಿಪಣಿ ಛೇದಕದ ನಡುವಿನ ಹೊಂದಾಣಿಕೆ ಕೊರತೆಯಿಂದಾಗಿ ಯೋಜಿತ ಪ್ರಯೋಗವು ವಿಫಲಗೊಂಡಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.

ಬಾಲಾಸೋರ್‌ನಿಂದ 15 ಕಿಲೋ ಮೀಟರ್ ದೂರದಲ್ಲಿರುವ ಚಾಂದಿಪುರ್ ಸಮುದ್ರದ ಮೇಲಿನ ಕಾಂಪ್ಲೆಕ್ಸ್-3ನ ಸಂಘಟಿತ ಪ್ರಾಯೋಗಿಕ ವಲಯದ ಮೊಬೈಲ್ ಲಾಂಚರ್‌ನಿಂದ ಬೆಳಿಗ್ಗೆ 10.02 ಗಂಟೆಗೆ ಗುರಿಯೆಂದು ನಿರ್ಧರಿಸಲಾಗಿದ್ದ ಪೃಥ್ವಿ ಕ್ಷಿಪಣಿಯನ್ನು ಹಾರಿಸಲಾಗಿತ್ತು. ಆದರೆ ಕ್ಷಿಪಣಿ ಛೇದಕವು ಉಡ್ಡಯನಗೊಳ್ಳಲು ವಿಫಲವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶತ್ರು ಕ್ಷಿಪಣಿ ಛೇದಕ ಮೇಲೆ ಹಾರಲು ವಿಫಲವಾಗಿರುವುದಕ್ಕೆ ನಿರ್ದಿಷ್ಟ ಕಾರಣಗಳು ಏನು ಎಂಬುದನ್ನು ಇನ್ನಷ್ಟೇ ಪತ್ತೆ ಹಚ್ಚಬೇಕಿದೆ. ಆದರೆ ಪ್ರಾಥಮಿಕ ವಿಶ್ಲೇಷಣೆಗಳ ಪ್ರಕಾರ ಸಮರ್ಥ ಹೊಂದಾಣಿಕೆಯ ಕೊರತೆಯಿಂದಾಗಿ ಪೂರ್ವನಿರ್ಧರಿತವಾಗಿದ್ದ ಕ್ಷಿಪಣಿ ಮಾರ್ಗದಿಂದ ಗುರಿಯಾಗಬೇಕಿದ್ದ ಕ್ಷಿಪಣಿಯು ಬೇರೆಡೆ ಮುಖ ಮಾಡಿದ್ದೇ ಕಾರಣ ಎಂದು ಹೇಳಲಾಗಿದೆ.

ಬಹುಸ್ತರದ ಬ್ಯಾಲಿಸ್ಟಿಕ್ ಮಿಸೈಲ್ ಡಿಫೆನ್ಸ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಗುರಿಯನ್ನಿಟ್ಟುಕೊಂಡಿದ್ದ ಈ ಪ್ರಯೋಗವು ಭಾನುವಾರ ಐಟಿಆರ್‌ನ ಎರಡು ಭಿನ್ನ ಪ್ರದೇಶಗಳಿಂದ ನಡೆಯಬೇಕೆಂದು ದಿನ ನಿಗದಿ ಮಾಡಲಾಗಿತ್ತು. ಆದರೆ ವೀಲರ್ ಐಸ್ಲೆಂಡ್‌ನಲ್ಲಿನ ಉಪ ವ್ಯವಸ್ಥೆಯಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪ್ರಯೋಗವನ್ನು ಸೋಮವಾರಕ್ಕೆ ಮುಂದೂಡಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ